ವಿಶ್ವಸಂಸ್ಥೆಯ ಲಿಂಗ ಸಮಾನತೆ ರಾಯಭಾರಿಯಾಗಿ ಅನುಪಮ್ ಖೇರ್ ಆಯ್ಕೆ
ಬಾಲಿವುಡ್ ಹಿರಿಯ ಹಾಗೂ ಖ್ಯಾತ ನಟ ಅನುಪಮ್ ಖೇರ್ ಅವರು ವಿಶ್ವಸಂಸ್ಥೆಯ ಲಿಂಗ ಸಮಾನತೆಯ ರಾಯಭಾರಿಯಾಗಿ ಬುಧವಾರ ಆಯ್ಕೆಯಾಗಿದ್ದಾರೆ...

ನ್ಯೂಯಾರ್ಕ್: ಲಿಂಗ ಅಸಮಾನತೆ ನಿವಾರಣೆಗಾಗಿ ವಿಶ್ವ ಸಂಸ್ಥೆ ಹಮ್ಮಿಕೊಂಡಿರುವ 'HeforShe' (ಅವಳಿಗಾಗಿ ಅವನು) ಅಭಿಯಾನದ ರಾಯಭಾರಿಯಾಗಿ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಬುಧವಾರ ಆಯ್ಕೆಯಾಗಿದ್ದಾರೆ.
ವಿಶ್ವಸಂಸ್ಥೆಯ 'HeforShe' (ಅವಳಿಗಾಗಿಅವನು) ಅಭಿಯಾನದಡಿ ನಟ ಅನುಪಮ್ ಖೇರ್ ಅವರು ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. 'HeforShe' (ಅವಳಿಗಾಗಿಅವನು) ಅಭಿಯಾನವನ್ನು ವಿಶ್ವಸಂಸ್ಥೆಯ ಮಹಿಳೆಯರು ಪ್ರಾರಂಭಿಸಿದ್ದು. ಇದರ ಪ್ರಮುಖ ಗುರಿ ಮಹಿಳೆಯರನ್ನು ಸಮಾನತೆಯಿಂದ ನೋಡುವುದು ಹಾಗೂ ಅವರ ಹಕ್ಕಿಗಾಗಿ ಹೋರಾಡುವಾದಾಗಿದೆ. ಇದಕ್ಕಾಗಿ ವಿಶ್ವಸಂಸ್ಥೆಯ ಮಹಿಳೆಯರು ದೇಶದಾದ್ಯಂತ ಪುರುಷಕರು ಹಾಗೂ ಯುವಕರನ್ನು ಸಂಘಟಿಸುವತ್ತ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಶ್ವಸಂಸ್ಥೆಯ ಲಿಂಗ ಸಮಾನತೆ ರಾಯಭಾರಿ ಆಯ್ಕೆಯಾಗಿರುವುದಕ್ಕೆ ಟ್ವಿಟರ್ ನಲ್ಲಿ ಸಂತಸ ವ್ಯಕ್ತಪಡಿಸಿರುವ ಅನುಪಮ್ ಖೇರ್ ಅವರು, ಲಿಂಗ ಸಮಾನತೆಯ ರಾಯಭಾರಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ವಿಶ್ವಸಂಸ್ಥೆಯ ಮಹಿಳೆಯರಿಗೆ ಧನ್ಯವಾದಗಳು. 'HeforShe' (ಅವಳಿಗಾಗಿಅವನು) ಲಿಂಗ ಸಮಾನತೆಗಾಗಿ ನನ್ನಿಂದ ಸಾಧ್ಯವಾದಷ್ಟು ದುಡಿಯುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


