ಮನರಂಜನೆ

ಸಯಾಮಿ ಜೋಡಿಯ ಕಥೆಯುಳ್ಳ 'ಇಂಡಿವಿಸಬಲ್' ಇಂದು ಪ್ರದರ್ಶನ

ಸಯಾಮಿಯಾಗಿ ಹುಟ್ಟಿ ಬೆಳೆದ ಯುವ ಜೋಡಿಯನ್ನು ಬೇರ್ಪಡಿಸಲು ಸಾಧ್ಯ ಎಂದು ವೈದ್ಯರು ಹೇಳಿದಾಗ ಹುಟ್ಟುವ ಭಾವನೆಗಳೇನು ಎಂಬ ಕಥಾವಸ್ತು ಒಳಗೊಂಡಿರುವ ಇಟಾಲಿಯನ್ ಸಿನೆಮಾ 'ಇಂಡಿವಿಸಬಲ್' ಇಂದು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಅದರ ಟ್ರೇಲರ್ ಇಲ್ಲಿದೆ.

ಸಯಾಮಿ ಜೋಡಿಯ ಕಥೆಯುಳ್ಳ 'ಇಂಡಿವಿಸಬಲ್' ಇಂದು ಪ್ರದರ್ಶನ
ಬಿ ಸುರೇಶ ನಿರ್ದೇಶನದ 'ಉಪ್ಪಿನ ಕಾಗದ' ಸಿನೆಮಾ ಟ್ರೇಲರ್

ಬಿ ಸುರೇಶ ನಿರ್ದೇಶನದ 'ಉಪ್ಪಿನ ಕಾಗದ' ಸಿನೆಮಾ ಟ್ರೇಲರ್

ಬಿ ಸುರೇಶ ನಿರ್ದೇಶನದ 'ಉಪ್ಪಿನ ಕಾಗದ' ಸಿನೆಮಾ ಟ್ರೇಲರ್ ನೆನ್ನೆ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಟಿ ಎಸ್ ನಾಗಾಭರಣ, ಮಂಡ್ಯ ರಮೇಶ್ ಮತ್ತು ಅಪೂರ್ವ ಭಾರದ್ವಾಜ್ ನಟಿಸಿರುವ ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ೯ನೆ ಆವೃತ್ತಿಗೆ ಕೂಡ ಆಯ್ಕೆಯಾಗಿದೆ. ವಿ ಹರಿಕೃಷ್ಣ ಸಂಗೀತ ನೀಡಿರುವ ಚಿತ್ರದ ಆಡಿಯೋ ಕೂಡ ಈಗ ಬಿಡುಗಡೆಯಾಗಿದೆ.