world

ವಿಶ್ವದೆಲ್ಲೆಡೆ ಕೊರೋನಾ ವೈರಸ್ ಗೆ 2.13 ಲಕ್ಷ ಮಂದಿ ಬಲಿ, ಅಮೆರಿಕಾ ಒಂದರಲ್ಲೇ 24 ಗಂಟೆಗಳಲ್ಲಿ 2,200 ಮಂದಿ ಸಾವು
ವಿಶ್ವದೆಲ್ಲೆಡೆ ಕೊರೋನಾ ವೈರಸ್ ಮಹಾಮಾರಿಗೆ ಈ ವರೆಗೂ 2.13 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಅಮೆರಿಕಾ ಒಂದೇ ರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 2.200 ಮಂದಿ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಕೊರೋನಾ ಪ್ರಭಾವ: ವಿಶ್ವದೆಲ್ಲೆಡೆ ಒಂದೇ ದಿನ 4,982 ಮಂದಿ ಬಲಿ, 30 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ
ವಿಶ್ವದೆಲ್ಲೆಡೆ ಕೊರೋನಾ ಪ್ರಭಾವ ಏರಿಕೆಯಾಗುತ್ತಲೇ ಇದ್ದು, ಕೇವಲ 24 ಗಂಟೆಗಳಲ್ಲಿ 4,982 ಮಂದಿ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಕೋವಿಡ್-19ಗೆ ತತ್ತರಿಸಿದ ವಿಶ್ವ: 30 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, 2.7 ಲಕ್ಷ ಬಲಿ!
ಜಗತ್ತಿನಾದ್ಯಂತ ಕೊರೋನಾ ಸೋಂಕು ವೇಗವಾಗಿ ಹರುಡುತ್ತಿದ್ದು, ತಗ್ಗುವ ಲಕ್ಷಣಗಳೇ ಕಾಣುತ್ತಿಲ್ಲ. ವಿಶ್ವದ 210 ದೇಶಗಳಲ್ಲಿ ಈ ಸೋಂಕು ಜನರ ನಿದ್ದೆಗೆಡಿಸಿದೆ. ಅಲ್ಲದೆ ಕೊರೊನಾ ಪೀಡಿತರ ಸಂಖ್ಯೆ 30 ಲಕ್ಷದ ಗಡಿ ದಾಟಿದೆ.

ಆಯುರ್ವೇದದ ಬಗ್ಗೆ ನಿರ್ಲಕ್ಷ್ಯ ಬೇಡ, ನಮ್ಮ ಸಂಸ್ಕೃತಿಯ ಶಕ್ತಿಯನ್ನು ಮರೆತಿದ್ದೇವೆ, ಆದರೆ ವಿದೇಶ ಗೌರವಿಸಿದೆ: ಮೋದಿ
ಯೋಗದ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ಜಗತ್ತು ಆಯುರ್ವೇದದ ಉಪಯೋಗಗಳನ್ನೂ ಸ್ವೀಕರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೋನಾಗೆ ಇಡೀ ವಿಶ್ವ ಕಂಗಾಲು: 1.95 ಲಕ್ಷಕ್ಕೇರಿದ ಸಾವಿನ ಸಂಖ್ಯೆ, 2.79 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ
ಚೀನಾದಲ್ಲಿ ಹುಟ್ಟಿ ವಿವಿಧ ರಾಷ್ಟ್ರಗಳಿಗೆ ಹರಡಿರುವ ಕೊರೋನಾ ವೈರಸ್'ಗೆ ಇದೀಗ ಇಡೀ ವಿಶ್ವವೇ ಕಂಗಾಲಾಗಿದೆ. ಮಹಾಮಾರಿ ವೈರಸ್ ಈವರೆಗೂ ಪ್ರಪಂಚದಾದ್ಯಂತ 1.95 ಮಂದಿಯನ್ನು ಬಲಿಪಡೆದುಕೊಂಡಿದ್ದು, , ವೈರಸ್ ಮಟ್ಟಹಾಕಲು ಇಡೀ ವಿಶ್ವವೇ ಹರಸಾಹಸ ಪಡುತ್ತಿದೆ.

ವಿಶ್ವದೆಲ್ಲೆಡೆ ಕೊರೋನಾ ಆರ್ಭಟ: ಸಾವಿನ ಸಂಖ್ಯೆ 184,186ಕ್ಕೆ ಏರಿಕೆ, 2,636,989 ಮಂದಿಯಲ್ಲಿ ಸೋಂಕು ಪತ್ತೆ
ವಿಶ್ವದಾದ್ಯಂತ ಕೊರೋನಾ ತನ್ನ ರೌದ್ರ ನರ್ತನವನ್ನು ಮುಂದುವರೆಸಿದ್ದು, ವೈರಸ್'ಗೆ ಈ ವರೆಗೂ 184,186 ಮಂದಿ ಬಲಿಯಾಗಿದ್ದಾರೆ. ಅಲ್ಲದೆ ಸೋಂಕಿತರ ಸಂಖ್ಯೆ 2,636,989ಕ್ಕೆ ಏರಿಕೆಯಾಗಿದೆ.

ವಿಶ್ವಕ್ಕೆ ಕಂಟಕವಾದ ಕೊರೋನಾ: ಮಹಾಮಾರಿಗೆ 1.60 ಲಕ್ಷ ಜನರು ಬಲಿ, 23 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ
ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್ ಇದೀಗ ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ್ದು, ಮಹಾಮಾರಿಗೆ ಪ್ರಪಂಚದಾದ್ಯಂತ 1.60 ಲಕ್ಷ ಮಂದಿ ಬಲಿಯಾಗಿದ್ದು, ಬರೋಬ್ಬರಿ 23 ಲಕ್ಷ ಜನರದಲ್ಲಿ ಸೋಂಕು ಪತ್ತೆಯಾಗಿದೆ.

ವಿಶ್ವವನ್ನೇ ಬೆಚ್ಚಿ ಬೀಳಿಸುತ್ತಿದೆ ಕೊರೋನಾ ತೀವ್ರತೆ: ಸೋಂಕಿತರ ಸಂಖ್ಯೆ 21.5 ಲಕ್ಷಕ್ಕೆ ಏರಿಕೆ, ಸಾವಿನ ಸಂಖ್ಯೆ 143,844ಕ್ಕೆ ಏರಿಕೆ
ಚೀನಾದಲ್ಲಿ ಹುಟ್ಟಿ ವಿಶ್ವದ 200ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿ ಸಾವಿನ ಬಲೆಯನ್ನೇ ಬೀಸಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕು ದಿನೇ ದಿನೇ ಆದೆಷ್ಟು ವೇಗದಲ್ಲಿ ಹರಡುತ್ತಿದೆ ಎಂಬುದಕ್ಕೆ ಇದೀಗ ಮತ್ತೊಂದು ಉದಾಹರಣೆ ಲಭಿಸಿದೆ.

ಕೊರೋನಾ ವೈರಸ್ ಗೆ ಜಗತ್ತಿನಾದ್ಯಂತ 1 ಲಕ್ಷ ಜನರ ಸಾವು!
ಕೊರೋನಾ ವೈರಸ್ ಗೆ ಜಗತ್ತಿನಾದ್ಯಂತ ಸಾವನ್ನಪ್ಪಿರುವವರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ.

