ವಿದೇಶ

ವಿಶ್ವಕ್ಕೆ ಕಂಟಕವಾದ ಕೊರೋನಾ: ಮಹಾಮಾರಿಗೆ 1.60 ಲಕ್ಷ ಜನರು ಬಲಿ, 23 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ

ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್ ಇದೀಗ ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ್ದು, ಮಹಾಮಾರಿಗೆ ಪ್ರಪಂಚದಾದ್ಯಂತ 1.60 ಲಕ್ಷ ಮಂದಿ ಬಲಿಯಾಗಿದ್ದು, ಬರೋಬ್ಬರಿ 23 ಲಕ್ಷ ಜನರದಲ್ಲಿ ಸೋಂಕು ಪತ್ತೆಯಾಗಿದೆ.

ವಿಶ್ವಕ್ಕೆ ಕಂಟಕವಾದ ಕೊರೋನಾ: ಮಹಾಮಾರಿಗೆ 1.60 ಲಕ್ಷ ಜನರು ಬಲಿ, 23 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ
ಸಂಗ್ರಹ ಚಿತ್ರ
Published On :

ಲಂಡನ್: ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್ ಇದೀಗ ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ್ದು, ಮಹಾಮಾರಿಗೆ ಪ್ರಪಂಚದಾದ್ಯಂತ 1.60 ಲಕ್ಷ ಮಂದಿ ಬಲಿಯಾಗಿದ್ದು, ಬರೋಬ್ಬರಿ 23 ಲಕ್ಷ ಜನರದಲ್ಲಿ ಸೋಂಕು ಪತ್ತೆಯಾಗಿದೆ. 

ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಮಾಹಿತಿ ನೀಡಿರುವ ಪ್ರಕಾರ, ಜಾಗತಿಕವಾಗಿ ಕೊರೋನಾಗೆ ಒಟ್ಟು 160,759 ಮಂದಿ ಬಲಿಯಾಗಿದ್ದು, 2,331,085 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ. 

ಇನ್ನು ಸೋಂಕಿನಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷಾಂತರ ಮಂದಿಯ ಪೈಕಿ 597,194 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆಂದು ತಿಳಿದುಬಂದಿದೆ. 

ಸ್ಪೇನ್ ನಲ್ಲಿ 194,416 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 20,639 ಮಂದಿ ಬಲಿಯಾಗಿದ್ದಾರೆ. ಇಟಲಿಯಲ್ಲಿ 175,925 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 23,227 ಮಂದಿ ಬಲಿಯಾಗಿದ್ದಾರೆ. ಫ್ರಾನ್ಸ್ ನಲ್ಲಿ 151,793 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 19,323 ಮೃತಪಟ್ಟಿದ್ದಾರೆ. 

ಇನ್ನು ಜರ್ಮನಿಯಲ್ಲಿ 143,724 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, 4,538 ಮಂದಿ ಬಲಿಯಾಗಿದ್ದಾರೆ. ಬ್ರಿಟನ್ ನಲ್ಲಿ 114,217 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 15,464 ಜನರು ಬಲಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.