woman

ಜೆಡಿಎಸ್ ಶಾಸಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಎಂಟು ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕಿ ಕರಿಯಮ್ಮ ಜಿ.ನಾಯಕ್ ಅವರನ್ನು ನಿಂದಿಸಿದ ಆರೋಪದ ಮೇಲೆ ಎಂಟು ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಲಖನೌ: ಕಾರಿನ ಮೇಲೆ ಜಾಹೀರಾತು ಫಲಕ ಬಿದ್ದು ಮಹಿಳೆ, ಆಕೆಯ ಪುತ್ರಿ ದುರ್ಮರಣ
ಕಾರಿನ ಮೇಲೆ ಜಾಹೀರಾತು ಫಲಕ ಬಿದ್ದಿದ್ದರಿಂದ ಮಹಿಳೆ ಹಾಗೂ ಆಕೆಯ ಪುತ್ರಿ ಮೃತಪಟ್ಟು, ಚಾಲಕ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಖನೌನ ಏಕಾನಾ ಸ್ಟೇಡಿಯಂ ಹೊರಗಡೆ ಸೋಮವಾರ ನಡೆದಿದೆ.

ಪ್ಲಾಸ್ಟಿಕ್ ಮಾದರಿಯ ಚರ್ಮ ಹೊಂದಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ: ಶಿಶುವಿಗೆ ಅಪರೂಪದ ಕಾಯಿಲೆ!
ಬಿಗಿಯಾದ, ಮೇಣದಂಥ ಮತ್ತು ಕಾಗದದಂತಹ ಚರ್ಮ ಹೊಂದಿರುವ ಮಗುವಿಗೆ ಮಹಿಳೆ ಜನ್ಮ ನೀಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಚಿಕ್ಕಮಗಳೂರು: ಯುವಕರಿಂದ ಅಸಭ್ಯ ವರ್ತನೆ, ನ್ಯಾಯಕ್ಕಾಗಿ ಮಗುವಿನೊಂದಿಗೆ ಅರ್ಧರಾತ್ರಿವರೆಗೂ ಠಾಣೆಯಲ್ಲಿ ಕುಳಿತ ಮಹಿಳೆ!
ನ್ಯಾಯಕ್ಕಾಗಿ ಮಹಿಳೆಯೊಬ್ಬರು 4 ವರ್ಷದ ಮಗುವಿನೊಂದಿಗೆ ಅರ್ಧರಾತ್ರಿಯವರೆಗೂ ಪೊಲೀಸ್ ಠಾಣೆಯಲ್ಲಿ ಕುಳಿತ ಘಟನೆಯೊಂದು ಜಿಲ್ಲೆಯ ಕಳಸದಲ್ಲಿ ನಡೆದಿದೆ.

ಕಂಬಳದಲ್ಲೂ ನಾರಿ ಶಕ್ತಿ ಪ್ರದರ್ಶನ, ಆಗಸ್ಟ್ ನಲ್ಲಿ ಮಹಿಳಾ ಜಾಕಿಗಳಿಗೆ ತರಬೇತಿ
ಕರಾವಳಿಯ ಸಾಂಪ್ರದಾಯಿಕ ಪುರುಷ ಪ್ರಧಾನ ಕ್ರೀಡೆಯಾಗಿರುವ ಕಂಬಳದಲ್ಲೂ ಈ ವರ್ಷದಿಂದ ಮೊದಲ ಬಾರಿಗೆ ಮಹಿಳಾ ಜಾಕಿಗಳು ಭಾಗವಹಿಸಲಿದ್ದು, ದಕ್ಷಿಣ ಕನ್ನಡ ಕಂಬಳ ಅಕಾಡೆಮಿ ಆಗಸ್ಟ್ನಲ್ಲಿ ಮಹಿಳೆಯರಿಗೆ ತರಬೇತಿ ನೀಡಲು ಸಿದ್ಧತೆ...

ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪಾಸ್ ನೀಡಲು ಸಾಧ್ಯವಿಲ್ಲ: ಸಚಿವ ರಾಮಲಿಂಗಾ ರೆಡ್ಡಿ (ಸಂದರ್ಶನ)
ಮಹಿಳೆಯರಿಗೆ ಎಲ್ಲಾ ಸರ್ಕಾರಿ, ನಾನ್ ಎಸಿ ಬಸ್ಗಳಲ್ಲಿ ಉಚಿತ ಪ್ರಯಾಣ ನೀಡುವ ಭರವಸೆಯನ್ನು ಚುನಾವಣೆ ಕಾಂಗ್ರೆಸ್ ನೀಡಿತ್ತು. ಇದರಂತೆ ಅಧಿಕಾರಕ್ಕೆ ಬಂದ ಬಳಿಕ ಉಚಿತ ಬಸ್ ಪಾಸ್ ಸೇರಿದಂತೆ ಎಲ್ಲಾ 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆಯನ್ನೂ ನೀಡಿತ್ತು.

ಪ್ರಸವದ ನಂತರವೂ ಇರಲಿ ಕಾಳಜಿ: ಹೆರಿಗೆ ನಂತರ ಎದುರಾಗುವ ಚಳಿ ಅಥವಾ ನಡುಕ ನಿರ್ವಹಿಸುವುದು ಹೇಗೆ...?
ಗರ್ಭಾವಸ್ಥೆಯಲ್ಲಿದ್ದಾಗ ಆರೋಗ್ಯದ ಮೇಲೆ ಕಾಳಜಿ ತೋರಿ, ಪ್ರಸವದ ನಂತರ ನಾನು ಸುರಕ್ಷಿತ ಎಂದು ತಿಳಿಯದಿರಿ. ಪ್ರಸವದ ನಂತರವೂ ಮಹಿಳೆಯರು ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಮದುವೆಗೆ ಕೆಲವೇ ಗಂಟೆಗಳ ಮೊದಲು ವಧುವಿನ ಮೇಲೆ ಗುಂಡು ಹಾರಿಸಿದ ಪೊಲೀಸ್ ಪೇದೆ!
ಮದುವೆಗೂ ಕೆಲವೇ ಗಂಟೆಗಳ ಮುನ್ನ 26 ವರ್ಷದ ಮಹಿಳೆಯೊಬ್ಬಳ ಮೇಲೆ ಮುಂಗೇರ್ನಲ್ಲಿ ಬಿಹಾರ ಪೊಲೀಸ್ ಪೇದೆಯೊಬ್ಬರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದುರಂತ ಘಟನೆ: ಬೆಂಗಳೂರಿನ ಜಲಾವೃತಗೊಂಡ ಅಂಡರ್ಪಾಸ್ನಲ್ಲಿ ಸಿಲುಕಿ 23 ವರ್ಷದ ಮಹಿಳೆ ಸಾವು; ಎಫ್ಐಆರ್ ದಾಖಲು
ಭಾನುವಾರ ರಾಜ್ಯದಾದ್ಯಂತ ಮಳೆ ಅಬ್ಬರಿಸಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ಅವಘಡಗಳು ಸಂಭವಿಸಿವೆ. ಬೆಂಗಳೂರು ನಗರದಲ್ಲಿ ಜಲಾವೃತಗೊಂಡಿದ್ದ ಅಂಡರ್ಪಾಸ್ನಲ್ಲಿ ಮುಳುಗಡೆಯಾದ ಕಾರಿನಲ್ಲಿದ್ದ ಮಹಿಳೆ ಸಾವಿಗೀಡಾಗಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.

