WHO

ಕೋವಿಡ್-19 ಪರಿಣಾಮ, ವರ್ಷಗಳಲ್ಲೇ ಮೊದಲ ಬಾರಿಗೆ ಟಿಬಿ ಪ್ರಕರಣಗಳು ಹೆಚ್ಚಳ: ಡಬ್ಲ್ಯುಹೆಚ್ಒ
ಜಾಗತಿಕವಾಗಿ ಕ್ಷಯರೋಗದ ಸಂಖ್ಯೆ ವರ್ಷಗಳಲ್ಲಿ ಮೊದಲ ಬಾರಿಗೆ ಏರಿಕೆ ಕಂಡಿದೆ ಎಂದು ಡಬ್ಲ್ಯುಹೆಚ್ಒ ಹೇಳಿದೆ. ಔಷಧಗಳಿಗೆ ನಿರೋಧಕವಾಗಿರುವ ಕ್ಷಯರೋಗ ಹೆಚ್ಚಳವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಿದೆ.

ಉಗಾಂಡಾದಲ್ಲಿ ಆತಂಕಕಾರಿ ರೀತಿಯಲ್ಲಿ ಎಬೋಲಾ ಪ್ರಕರಣಗಳ ಹೆಚ್ಚಳ
ಉಗಾಂಡಾದ ರಾಜಧಾನಿಯಲ್ಲಿ ಶುಕ್ರವಾರದಿಂದ ಇನ್ನೂ 11 ಎಬೋಲಾ ಪ್ರಕರಣಗಳು ವರದಿಯಾಗಿವೆ ಎಂದು ಅದಿಕಾರಿಗಳು ತಿಳಿಸಿದ್ದಾರೆ. ಪೂರ್ವ ಆಫ್ರಿಕಾದ ದೇಶದಲ್ಲಿ ಕಳೆದ ಒಂದು ತಿಂಗಳಿನಿಂದೀಚೆಗೆ ಸೋಂಕಿನ ಪ್ರಮಾಣ ಆತಂಕಕಾರಿಯಾಗಿ ಹೆಚ್ಚಳವಾಗಿದೆ.

ದೀಪಾವಳಿ ಹಬ್ಬದ ಸಮಯ, ಭಾರತದಲ್ಲಿ ಓಮಿಕ್ರಾನ್ ಹೊಸ ಉಪ ರೂಪಾಂತರಿ ಬಿಎಫ್.7 ಪತ್ತೆ, ನಾಗರಿಕರಿಗೆ ಎಚ್ಚರಿಕೆ
ಇನ್ನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಬರುತ್ತದೆ. ಈ ಹೊತ್ತಿನಲ್ಲಿ ದೇಶದಲ್ಲಿ ಸೋಂಕು ಹರಡುವ ಓಮಿಕ್ರಾನ್ ರೂಪಾಂತರ BF..7 ಪತ್ತೆಯಾಗಿದೆ. ಇದೇ ರೂಪಾಂತರಿ ವೈರಸ್ ಇತ್ತೀಚೆಗೆ ಚೀನಾ, ಅಮೆರಿಕ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎನ್ನಲಾದ ಸಿರಪ್ ಗಳು ಭಾರತದಲ್ಲಿ ಮಾರಾಟವಾಗಿಲ್ಲ: ಕೇಂದ್ರ ಸರ್ಕಾರ
ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎನ್ನಲಾದ ಸಿರಪ್ ಗಳು ಭಾರತದಲ್ಲಿ ಮಾರಾಟವಾಗಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟನೆ ನೀಡಿದೆ.

ಗ್ಯಾಂಬಿಯಾದಲ್ಲಿ ಕೆಮ್ಮಿನ ಸಿರಪ್ ದುರಂತ: ತನಿಖೆಗೆ ಆದೇಶಿಸಿದ ಭಾರತ ಸರ್ಕಾರ
ಆಫ್ರಿಕಾ ಖಂಡದ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಭಾರತದ 4 ಕೆಮ್ಮಿನ ಸಿರಪ್ ಉತ್ಪನ್ನಗಳು ಸಂಬಂಧಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ ಬಳಿಕ ಭಾರತ ಸರ್ಕಾರ ಹರ್ಯಾಣ ಮೂಲದ ಫಾರ್ಮಾಸ್ಯುಟಿಕಲ್ ಸಂಸ್ಥೆಯ ವಿರುದ್ಧ ತನಿಖೆ ಆರಂಭಿಸಿದೆ.

ಭಾರತದ ಕೆಮ್ಮಿನ ಸಿರಪ್ ಸೇವನೆ ಬಳಿಕ 66 ಮಕ್ಕಳ ಸಾವು, ಔಷಧಿ ಪರೀಕ್ಷಿಸಲಾಗುತ್ತಿದೆ ಎಂದ WHO
ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಕೆಮ್ಮು ಮತ್ತು ಶೀತ ಸಿರಪ್‌ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಕೆ ನೀಡಿದ್ದು, ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಅವು ಸಂಬಂಧಿಸಿರಬಹುದು ಎಂದು ಎಚ್ಚರಿಸಿದೆ.

ಓಮಿಕ್ರಾನ್, ಡೆಲ್ಟಾ ಪ್ರಕರಣಗಳ ಸುನಾಮಿಯಿಂದ ಆರೋಗ್ಯ ವ್ಯವಸ್ಥೆ ಕುಸಿತ: ಡಬ್ಲ್ಯೂಎಚ್ ಒ ಎಚ್ಚರಿಕೆ
ಓಮಿಕ್ರಾನ್ ಸುನಾಮಿ ಮತ್ತು ಡೆಲ್ಟಾ ಕೋವಿಡ್ -19 ಪ್ರಕರಣಗಳು ಈಗಾಗಲೇ ತಮ್ಮ ಮಿತಿಯನ್ನು ಮೀರಿದ್ದು, ಆರೋಗ್ಯ ವ್ಯವಸ್ಥೆಗಳ ಮೇಲೆ ಒತ್ತಡ ಹಾಕಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಸಿದೆ.

ಜಾಗತಿಕ ಕೋವಿಡ್-19 ಪ್ರಕರಣಗಳು ಒಂದು ವಾರದಲ್ಲಿ ಶೇ.11 ರಷ್ಟು ಏರಿಕೆ, ಓಮಿಕ್ರಾನ್ ನಿಂದ ಹೆಚ್ಚಿನ ಅಪಾಯ: ಡಬ್ಲ್ಯುಹೆಚ್ಒ
ಜಾಗತಿಕ ಮಟ್ಟದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಂದು ವಾರದಲ್ಲಿ, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಶೇ.11 ರಷ್ಟು ಏರಿಕೆಯಾಗಿದೆ ಎಂದು ಡಬ್ಲ್ಯುಹೆಚ್ಒ ಹೇಳಿದ್ದು, ಅಮೆರಿಕಾದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕೊರೊನಾ ಸಾಂಕ್ರಾಮಿಕದ ಅಪಾಯಕಾರಿ ಘಟ್ಟ ಮುಂಬರಲಿದೆ: ಒಮಿಕ್ರಾನ್ ಕುರಿತು ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಎಚ್ಚರಿಕೆ
ಗೇಟ್ಸ್, ತಾವು ಪ್ರವಾಸದ ಯೋಜನೆಗಳನ್ನು ಕೊರೊನಾ ಭಯದಿಂದ ರದ್ದುಪಡಿಸಿರುವುದಾಗಿ ಹೇಳಿದ್ದಾರೆ.

