West Asia conflict

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ; ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!
ಐದನೇ ಡ್ರೋನ್ ಉಡಾವಣೆಗೆ ಸಿದ್ಧವಾಗಿದ್ದ ನಿಯಂತ್ರಣ ಕೇಂದ್ರವನ್ನು ಗುರುತಿಸಿದ ಅಮೆರಿಕ ಪಡೆಗಳು, ಬಂದರ್ ಅಬ್ಬಾಸ್ ಪ್ರದೇಶದಲ್ಲೇ ನಿಖರ ದಾಳಿ ನಡೆಸಿವೆ. ಈ ದಾಳಿಯಲ್ಲಿ ನಿಯಂತ್ರಣ ವ್ಯವಸ್ಥೆಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.

ಮಧ್ಯಪ್ರಾಚ್ಯ ಸಂಘರ್ಷ: ತುರ್ತು ಸಭೆ ಕರೆದ ಡೊನಾಲ್ಡ್ ಟ್ರಂಪ್; ವಾಷಿಂಗ್ಟನ್‌ಗೆ ಜೆಡಿ ವ್ಯಾನ್ಸ್ ದಿಢೀರ್ ವಾಪಸ್ಸು; ಕುತೂಹಲ ಮೂಡಿಸಿದ ಬೆಳವಣಿಗೆ..!
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿರುವುದರಿಂದ, ಅಮೆರಿಕಾ ಇರಾನ್ ಕುರಿತಂತೆ ದೊಡ್ಡ ಮಟ್ಟದ ನಿರ್ಧಾರ ಕೈಗೊಳ್ಳಲಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ: 10 ದಿನಗಳಲ್ಲಿ 3ನೇ ಬಾರಿ ತೈಲ ದರ ಏರಿಕೆ!
ಮೇ 15 ರಿಂದ ಇತ್ತೀಚೆಗೆ ತೈಲ ದರ ಪರಿಷ್ಕರಣೆ ಆರಂಭವಾದ ಬಳಿಕ ಇದು ಅತ್ಯಲ್ಪ ದಿನಗಳಲ್ಲಿ ನಡೆದಿರುವ ಮೂರನೇ ಸರಣಿ ಹೆಚ್ಚಳವಾಗಿದೆ.

ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಪ್ರವೃತ್ತಿ, ತೈಲ ಬೆಲೆ ಇಳಿಕೆ: ಷೇರು ಮಾರುಕಟ್ಟೆ ಸೂಚ್ಯಂಕ ಜಿಗಿತ
30 ಷೇರುಗಳನ್ನು ಒಳಗೊಂಡ ಬಿಎಸ್‌ಇ ಸೆನ್ಸೆಕ್ಸ್ 327.74 ಅಂಕ ಏರಿಕೆಯಾಗಿ 75,646.13ಕ್ಕೆ ತಲುಪಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 111.75 ಅಂಕ ಏರಿಕೆಯಾಗಿ 23,772.05ರಲ್ಲಿ ವಹಿವಾಟು ನಡೆಸಿತು.

ಇರಾನ್ ವಿರುದ್ಧದ ಯುದ್ಧ ತಂತ್ರ; ಇಸ್ರೇಲ್-ಅಮೆರಿಕಾ ನಡುವೆ ಭಿನ್ನಮತ ಸ್ಫೋಟ; ಟ್ರಂಪ್ ರಾಜತಾಂತ್ರಿಕ ನಡೆಗೆ ನೆತನ್ಯಾಹು ಕೆಂಡಾಮಂಡಲ..! Video
ಇರಾನ್ ಮೇಲಿನ ವೈಮಾನಿಕ ದಾಳಿಗಳನ್ನು ತಕ್ಷಣವೇ ಪುನರಾರಂಭಿಸಬೇಕು ಎಂದು ಬೆಂಜಮಿನ್ ನೆತನ್ಯಾಹು ಪಟ್ಟು ಹಿಡಿದಿದ್ದು, ದಾಳಿಗಳನ್ನು ಮುಂದೂಡುವುದು ದೊಡ್ಡ ತಪ್ಪು ಎಂದು ಟ್ರಂಪ್ ಅವರೊಂದಿಗೆ ವಾದಿಸಿದ್ದಾರೆಂದು ತಿಳಿದುಬಂದಿದೆ.

Operation Epic Fury: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಾಗೆ ಮಹಾಘಾತ; F-35 ಸೇರಿ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ..!
MQ-9 ರೀಪರ್ ಡ್ರೋನ್‌ಗಳು ಅಮೆರಿಕದ ಅತ್ಯಂತ ಪ್ರಮುಖ ನಿಗಾವ್ಯವಸ್ಥೆ ಹಾಗೂ ದಾಳಿ ಸಾಮರ್ಥ್ಯ ಹೊಂದಿರುವ ಡ್ರೋನ್‌ಗಳಾಗಿದ್ದು, ಅವುಗಳ ನಷ್ಟ ಅಮೆರಿಕದ ಕಾರ್ಯಾಚರಣಾ ಸಾಮರ್ಥ್ಯಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಗಣಿಸಲಾಗುತ್ತಿದೆ.

Watch | ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ 3 ರೂ ಏರಿಕೆ; ಗ್ರಾಹಕರು ಹೇಳಿದ್ದೇನು?

ಪಶ್ಚಿಮ ಏಷ್ಯಾ ಸಂಘರ್ಷ ಮಧ್ಯೆ ಪ್ರಧಾನಿ ಮೋದಿ UAE ಭೇಟಿ: ಇಂಧನ ಸಹಕಾರ, ತಂತ್ರಾತ್ಮಕ ತೈಲ ಸಂಗ್ರಹಕ್ಕೆ ಒತ್ತು; LPG ಒಪ್ಪಂದ ಸಾಧ್ಯತೆ
ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಹೆಚ್ಚುತ್ತಿರುವ ಹಾಗೂ ಪೂರೈಕೆ ವೈವಿಧ್ಯೀಕರಣದ ಅಗತ್ಯತೆ ಮತ್ತೊಮ್ಮೆ ಗಮನ ಸೆಳೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಈ ಭೇಟಿ ನಡೆಯುತ್ತಿದೆ.

ಪಶ್ಚಿಮ ಏಷ್ಯಾ ಯುದ್ಧ ಮುಂದುವರಿದರೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಅನಿವಾರ್ಯವಾಗಬಹುದು: RBI ಗವರ್ನರ್
ಪ್ರಸ್ತುತ ಜಾಗತಿಕ ಇಂಧನ ಸಂಕಷ್ಟ ಮತ್ತಷ್ಟು ತೀವ್ರಗೊಂಡರೆ ಸರ್ಕಾರವು ಚಿಲ್ಲರೆ ಇಂಧನ ಬೆಲೆಗಳನ್ನು ಅನಿಯಮಿತವಾಗಿ ಸ್ಥಿರವಾಗಿರಿಸಲು ಸಾಧ್ಯವಾಗುವುದಿಲ್ಲ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

