Voter ID scam

ವೋಟರ್ ಐಡಿ ಹಗರಣ ಆರೋಪ ಬಗ್ಗೆ ಮುಕ್ತ ತನಿಖೆ: ಸಿಎಂ ಬೊಮ್ಮಾಯಿ
ರಾಜ್ಯ

ವೋಟರ್ ಐಡಿ ಹಗರಣ ಆರೋಪ ಬಗ್ಗೆ ಮುಕ್ತ ತನಿಖೆ: ಸಿಎಂ ಬೊಮ್ಮಾಯಿ

ಮತದಾರರ ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ಹಗರಣ ಆರೋಪ ಬಗ್ಗೆ ಸರ್ಕಾರ ಮುಕ್ತವಾದ ತನಿಖೆ ಮಾಡಿಸುತ್ತದೆ. ಯಾವುದಾದರೂ ಸಂಸ್ಥೆ, ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ಆರೋಪ ಬಂದರೆ ತನಿಖೆ ಮಾಡಬೇಕೆಂದೇ ನಾವು ಆದೇಶ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಚಿಲುಮೆ ಹಗರಣ: ಬಿಬಿಎಂಪಿ ಅಧಿಕಾರಿಗಳ ಅಮಾನತು, 3 ಕ್ಷೇತ್ರಗಳಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆಗೆ ಇಸಿಐ ಸೂಚನೆ
ರಾಜ್ಯ

ಚಿಲುಮೆ ಹಗರಣ: ಬಿಬಿಎಂಪಿ ಅಧಿಕಾರಿಗಳ ಅಮಾನತು, 3 ಕ್ಷೇತ್ರಗಳಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆಗೆ ಇಸಿಐ ಸೂಚನೆ

ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ಕ್ರಮ ಕೈಗೊಂಡಿದೆ.

ವೋಟರ್ ಐಡಿ ಅಕ್ರಮ: ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ ಬಿಬಿಎಂಪಿ, ಇಲಾಖಾ ತನಿಖೆಗೆ ಆದೇಶ
ರಾಜ್ಯ

ವೋಟರ್ ಐಡಿ ಅಕ್ರಮ: ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ ಬಿಬಿಎಂಪಿ, ಇಲಾಖಾ ತನಿಖೆಗೆ ಆದೇಶ

ಮತದಾರರ ಮಾಹಿತಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ (ಎಡಿಇಒ) ಸಲ್ಲಿಸಿರುವ ತನಿಖಾ ವರದಿಯ ಮೇರೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೋಮವಾರ ಮೂವರು ಹೆಚ್ಚುವರಿ ಕಂದಾಯ ಅಧಿಕಾರಿಗಳನ್ನು (ಎಆರ್‌ಒ) ಅಮಾನತುಗೊಳಿಸಿದ್ದಾರೆ ಮತ್ತು ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ವೋಟರ್ ಐಡಿ ಹಗರಣ: 'ಕೆಲಸಕ್ಕೆ ಬಂದವರನ್ನು ಬಂಧಿಸುವುದಲ್ಲ... ಕಿಂಗ್ ಪಿನ್ ಶಾಸಕ, ಸಚಿವರ ಬಂಧಿಸಿ: ಕಾಂಗ್ರೆಸ್ ಆಗ್ರಹ
ರಾಜಕೀಯ

ವೋಟರ್ ಐಡಿ ಹಗರಣ: 'ಕೆಲಸಕ್ಕೆ ಬಂದವರನ್ನು ಬಂಧಿಸುವುದಲ್ಲ... ಕಿಂಗ್ ಪಿನ್ ಶಾಸಕ, ಸಚಿವರ ಬಂಧಿಸಿ: ಕಾಂಗ್ರೆಸ್ ಆಗ್ರಹ

ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ವೋಟರ್ ಐಡಿ ಹಗರಣಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ವಿರೋಧ ಪಕ್ಷ ಕಾಂಗ್ರೆಸ್, ಕೆಲಸಕ್ಕೆ ಬಂದವರನ್ನು ಬಂಧಿಸುವುದಲ್ಲ... ಕಿಂಗ್ ಪಿನ್ ಶಾಸಕ, ಸಚಿವರನ್ನು ಮೊದಲು ಬಂಧಿಸಿ ಎಂದು ಆಗ್ರಹಿಸಿದೆ.

ವೋಟರ್ ಐಡಿ ಹಗರಣ: ಪ್ರಮುಖ ಆರೋಪಿ, ಚಿಲುಮೆ ಎನ್ ಜಿಒ ಮುಖ್ಯಸ್ಥ ರವಿಕುಮಾರ್ ಬಂಧನ
ರಾಜ್ಯ

ವೋಟರ್ ಐಡಿ ಹಗರಣ: ಪ್ರಮುಖ ಆರೋಪಿ, ಚಿಲುಮೆ ಎನ್ ಜಿಒ ಮುಖ್ಯಸ್ಥ ರವಿಕುಮಾರ್ ಬಂಧನ

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ವೋಟರ್​ ಐಡಿ ಹಗರಣ ಸಂಬಂಧಿಸಿದಂತೆ ಕಿಂಗ್ ಪಿನ್ ಎನ್ನಲಾದ ಚಿಲುಮೆ ಎನ್ ಜಿಒ ಮುಖ್ಯಸ್ಥ ರವಿ ಕುಮಾರ್​ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವೋಟರ್ ಐಡಿ ಅಕ್ರಮ: ಬಡಪಾಯಿಗಳ ಮೇಲೆ ಮೊಕದ್ದಮೆ, ನೈಜ ಅಪರಾಧಿಗಳ ರಕ್ಷಣೆ- ಸಿದ್ದರಾಮಯ್ಯ 
ರಾಜ್ಯ

ವೋಟರ್ ಐಡಿ ಅಕ್ರಮ: ಬಡಪಾಯಿಗಳ ಮೇಲೆ ಮೊಕದ್ದಮೆ, ನೈಜ ಅಪರಾಧಿಗಳ ರಕ್ಷಣೆ- ಸಿದ್ದರಾಮಯ್ಯ 

ವೋಟರ್ ಐಡಿ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇರವಾಗಿ ಷಾಮೀಲಾಗಿದ್ದಾರೆ. ಈ ಹಗರಣದಲ್ಲಿ ಬಡಪಾಯಿಗಳ ಮೇಲೆ ಮೊಕದ್ದಮೆ ದಾಖಲಿಸಿ, ನೈಜ ಅಪರಾಧಿಗಳನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಮತದಾರರ ಪಟ್ಟಿ ಪರಿಷ್ಕರಣೆ ಲೋಪ: ನ್ಯಾಯಾಂಗ ತನಿಖೆ ಇಲ್ಲ- ಸಿಎಂ ಬೊಮ್ಮಾಯಿ
ರಾಜ್ಯ

ಮತದಾರರ ಪಟ್ಟಿ ಪರಿಷ್ಕರಣೆ ಲೋಪ: ನ್ಯಾಯಾಂಗ ತನಿಖೆ ಇಲ್ಲ- ಸಿಎಂ ಬೊಮ್ಮಾಯಿ

ಮತದಾರರ ಪಟ್ಟಿ ಪರಿಷ್ಕರಣೆಯೆ ಲೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಕಾಂಗ್ರೆಸ್ ಬೇಡಿಕೆಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಂಗ ತನಿಖೆಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ. 

ಮತದಾರರ ಮಾಹಿತಿ ಕದ್ದ ಕಿಂಗ್ ಪಿನ್‌ಗಳ ರಕ್ಷಣೆಗೆ ನಿಂತಿರುವವರು ಯಾರು? ಚಿಲುಮೆಗೆ ಯಾರ ಒಲುಮೆ?
ರಾಜಕೀಯ

ಮತದಾರರ ಮಾಹಿತಿ ಕದ್ದ ಕಿಂಗ್ ಪಿನ್‌ಗಳ ರಕ್ಷಣೆಗೆ ನಿಂತಿರುವವರು ಯಾರು? ಚಿಲುಮೆಗೆ ಯಾರ ಒಲುಮೆ?

ಚಿಲುಮೆ ಸಂಸ್ಥೆಗೆ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿ ಕಡೆಯಿಂದ ಹಣ ಸಂದಾಯವಾಗಿದೆ. ಹಾಗೂ ಸಂಸ್ಥೆಯ ಮುಖ್ಯಸ್ಥನೊಂದಿಗೆ ಅಶ್ವಥ್ ನಾರಾಯಣ ಅವರ ಸಂಪರ್ಕವಿದೆ ಎಂದು ಕರ್ನಾಟಕ ಕಾಂಗ್ರೆಸ್ ಕಿಡಿ ಕಾರಿದೆ.

ವೋಟರ್ ಐಡಿ ಹಗರಣ: ಕಾಂಗ್ರೆಸ್ ನಾಯಕರಿಂದ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ
ರಾಜಕೀಯ

ವೋಟರ್ ಐಡಿ ಹಗರಣ: ಕಾಂಗ್ರೆಸ್ ನಾಯಕರಿಂದ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ

ಮತದಾರರ ಸಮೀಕ್ಷೆ ಹೆಸರಲ್ಲಿ ಜನರ ಮಾಹಿತಿಯನ್ನು ಬಿಜೆಪಿ ಸರ್ಕಾರ ಕದಿಯುವ ಕೆಲಸ ಮಾಡಿದೆ, ಇದರ ವಿರುದ್ಧ ಸಿಎಂ ಬೊಮ್ಮಾಯಿ ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಾಯಕರು ಇಂದು ಗುರುವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.