ಮತದಾರರ ಮಾಹಿತಿ ಕದ್ದ ಕಿಂಗ್ ಪಿನ್‌ಗಳ ರಕ್ಷಣೆಗೆ ನಿಂತಿರುವವರು ಯಾರು? ಚಿಲುಮೆಗೆ ಯಾರ ಒಲುಮೆ?
ಚಿಲುಮೆ ಸಂಸ್ಥೆಗೆ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿ ಕಡೆಯಿಂದ ಹಣ ಸಂದಾಯವಾಗಿದೆ. ಹಾಗೂ ಸಂಸ್ಥೆಯ ಮುಖ್ಯಸ್ಥನೊಂದಿಗೆ ಅಶ್ವಥ್ ನಾರಾಯಣ ಅವರ ಸಂಪರ್ಕವಿದೆ ಎಂದು ಕರ್ನಾಟಕ ಕಾಂಗ್ರೆಸ್ ಕಿಡಿ ಕಾರಿದೆ.

ಬೆಂಗಳೂರು: ಚಿಲುಮೆ ಸಂಸ್ಥೆಗೆ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿ ಕಡೆಯಿಂದ ಹಣ ಸಂದಾಯವಾಗಿದೆ. ಹಾಗೂ ಸಂಸ್ಥೆಯ ಮುಖ್ಯಸ್ಥನೊಂದಿಗೆ ಅಶ್ವಥ್ ನಾರಾಯಣ ಅವರ ಸಂಪರ್ಕವಿದೆ ಎಂದು ಕರ್ನಾಟಕ ಕಾಂಗ್ರೆಸ್ ಕಿಡಿ ಕಾರಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ನಾಯಕರೊಂದಿಗೆ ಚಿಲುಮೆ ಸಂಸ್ಥೆಗೆ ನೇರ ಸಂಪರ್ಕವಿರುವುದು ಜಗಜ್ಜಾಹೀರು. ಹೀಗಿರುವಾಗ ಅದೇ ಸಂಸ್ಥೆಯ "ಉಚಿತ ಸೇವೆ"ಗೆ ಸರ್ಕಾರ ಒಪ್ಪಿಗೆ ಕೊಟ್ಟಿದ್ದೇಕೆ? ಎಂದು ಪ್ರಶ್ನಿಸಿದೆ.
ಹನಿ ಟ್ರಾಪ್ ಹನಿಗಳು ಸಿಎಂ ಕಚೇರಿಯಲ್ಲಿ ಬಿದ್ದಿದ್ದರ ಬಗ್ಗೆ ಬಸವರಾಜ ಬೊಮ್ಮಾಯಿಯವರು ಮಾತಾಡಬೇಕು. ಮತದಾರರ ಮಾಹಿತಿ ಕಳ್ಳತನ ಪ್ರಕರಣದಲ್ಲಿ ಸರ್ಕಾರ ಕಳ್ಳಾಟದ ಹೇಳಿಕೆ ನೀಡುತ್ತಾ ದಿಕ್ಕುತಪ್ಪಿಸುತ್ತಿದೆ. ಚಿಲುಮೆ ಸಂಸ್ಥೆಯ ಅಕ್ರಮ ಬೆಳಕಿಗೆ ಬಂದಿರುವುದಕ್ಕೂ, ಮತದಾರ ಪಟ್ಟಿಯಲ್ಲಿ ಮತದಾರರ ಹೆಸರು ಕಾಣೆಯಾಗಿರುವುದಕ್ಕೂ ಸಂಬಂಧವಿರುವುದು ನಿಶ್ಚಿತ. ಸಿಎಂ ಬಸವರಾಜ ಬೊಮ್ಮಾಯಿಯವರು ಉಡಾಫೆ ಉತ್ತರ ಕೊಟ್ಟು ಜಾರಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
‘ಹನಿ ಟ್ರಾಪ್ ಹನಿಗಳು ಸಿಎಂ ಕಛೇರಿಯಲ್ಲಿ ಬಿದ್ದಿದ್ದರ ಬಗ್ಗೆ ಬೊಮ್ಮಾಯಿಯವರು ಮಾತಾಡಬೇಕು. ಬಿಜೆಪಿ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂಬ ಆರೋಪಗಳು ಬಂದಿವೆ, ಈ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶವೇನು? ಇಂತಹ ಟ್ರಾಪ್‌ಗಳಿಂದ ಬೊಮ್ಮಾಯಿಯವರನ್ನುಈ ರೀತಿ ಆಟ ಆಡಿಸಲಾಗುತ್ತಿದೆಯೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪದ ಬಗ್ಗೆ ತನಿಖೆ; ಕಾಂಗ್ರೆಸ್ ಆರೋಪಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ
‘ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆಯ ಕೆಲಸಗಾರರನ್ನು ಬಂಧಿಸಿ ಕಣ್ಣೊರೆಸುತ್ತಾ ಕಿಂಗ್ ಪಿನ್‌ಗಳ ರಕ್ಷಣೆಗೆ ನೀತಿರುವವರು ಯಾರು? ಚಿಲುಮೆಗೆ ಯಾರ ಒಲುಮೆ? ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಕ್ಯಾಷ್‌ಲ್ಲೇ ಅಭಿವೃದ್ಧಿಯಾದ ಸಚಿವರೇ? ಜನಕ್ರೋಶದಿಂದ ಖಾಲಿ ಕುರ್ಚಿ ದರ್ಶನ ಪಡೆಯುತ್ತಿರುವ ಬಿಜೆಪಿ ಮತದಾರರನ್ನೇ ಖಾಲಿ ಮಾಡಿಸುವ ಹುನ್ನಾರ ನಡೆಸಿದೆ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


