Village

ಭೂತಾನ್ ನಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ: ಡೊಕ್ಲಾಮ್ ಸಂಘರ್ಷದಿಂದ 9 ಕಿ.ಮೀ ವ್ಯಾಪ್ತಿಯಲ್ಲಿ ರಚನೆ
ಕಂಡಕಂಡಲ್ಲೆಲ್ಲಾ ಗಡಿ ಕ್ಯಾತೆ ತೆಗೆಯುವ ಚೀನಾ ಚಾಳಿ ಮುಂದುವರೆದಿದ್ದು, ಭೂತಾನ್ ಗೆ ಸೇರಿದ ಪ್ರದೇಶದಲ್ಲಿ 2 ಕಿ.ಮೀ ನಷ್ಟು ಒಳಗೆ ಪ್ರವೇಶಿಸಿರುವ ಚೀನಾ ಅಲ್ಲಿಯೇ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ.

ಬೆಟ್ಟದಿಂದ ಕೆಳಗೆ ಹರಿಯುವ ನೀರಿನಿಂದ ಯುವಕನ ಆವಿಷ್ಕಾರ: ಜುಗಾಡ್ ಗ್ರಾಮಸ್ಥರಿಗೆ ಉಚಿತ ವಿದ್ಯುತ್!
ಕಮಿಲ್ ಟೊಪ್ಲೊ ಎಂಜಿನಿಯರ್ ಅಲ್ಲ, ಆದರೂ ಲೊಹರ್ದಗದ ಖರಿಯಾ ತಕುರೈನ್ ಡೆರಾ ಗ್ರಾಮದ ಗ್ರಾಮಸ್ಥರು 100 ಅಡಿ ಎತ್ತರದ ಪರ್ವತ ಪ್ರದೇಶದಿಂದ ಕೆಳಗೆ ಬೀಳುವ ನದಿ ನೀರನ್ನು ಬಳಸಿ ವಿದ್ಯುತ್ ತಯಾರಿಸಿ ಗ್ರಾಮದ ಕನಿಷ್ಠ 20 ಮನೆಗಳು ಬೆಳಕುವಂತೆ ಮಾಡಿದ್ದಾರೆ.ದಿನಪೂರ್ತಿ ಗ್ರಾಮಸ್ಥರಿಗೆ ಉಚಿತ ವಿದ್ಯುತ್ ಸಿಗುತ್ತಿದೆ.

ಸದ್ಯದಲ್ಲಿಯೇ ಹಳ್ಳಿಗಳಿಗೂ ಟೆಲಿಮೆಡಿಸಿನ್ ಸೌಲಭ್ಯ: ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ ನಾರಾಯಣ
ಮೈಸೂರು ಮೂಲದ ಸ್ಕಾನ್ ರೇ ಹೆಲ್ತ್ ಕೇರ್ ಕಂಪೆನಿಗೆ ಎಲ್ಲಾ ರೀತಿಯ ಟೆಲಿ ಮೆಡಿಸಿನ್ ಸೌಲಭ್ಯ ನೀಡುವುದಾಗಿ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.

ಒಡಿಶಾ: ಏಳು ದಶಕಗಳಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯೆ ಕಲಿಸುತ್ತಿರುವ ಶತಾಯುಷಿ
ಶಿಕ್ಷಕ ಎಂದೂ ನಿವೃತ್ತನಾಗುವುದಿಲ್ಲ ಎಂಬ ಮಾತಿದೆ ಈ ಮಾತಿನ ಮೂರ್ತ ರೂಪದಂತಿರುವ ಶತಾಯುಷಿ ವ್ಯಕ್ತಿಯೊಬ್ಬರು ಒಡಿಶಾದಲ್ಲಿ 75 ವರ್ಷಗಳಿಂದ ಒಂದೇ ಒಂದು ಬಿಡಿಗಾಸನ್ನೂ ಪಡೆಯದೇ ಜಾಜ್ ಪುರ ಜಿಲ್ಲೆಯಲ್ಲಿ ಪೀಳಿಗೆಗಳಿಗೆ ವಿದ್ಯೆಯನ್ನು ಕಲಿಸುತ್ತಿದ್ದಾರೆ.

ಒಂದು ಹಳೆಯ ಟಿವಿ ಯಿಂದ ಇಡೀ ಗ್ರಾಮದ ಬ್ರಾಡ್ ಬ್ಯಾಂಡ್ ವ್ಯವಸ್ಥೆಯೇ 18 ತಿಂಗಳು ಅಸ್ತವ್ಯಸ್ತ!
ಒಂದು ಹಳೆಯ ಟಿ.ವಿಯಿಂದಾಗಿ ಇಡೀ ಗ್ರಾಮವೊಂದರ ಬ್ರಾಡ್ ಬ್ಯಾಂಡ್ ವ್ಯವಸ್ಥೆ ಬರೊಬ್ಬರಿ 18 ತಿಂಗಳವರೆಗೆ ಅಸ್ತವ್ಯಸ್ತಗೊಂಡಿದ್ದ ಘಟನೆ ವೇಲ್ಸ್ ನ ಅಬರ್ಹೋಸನ್ ಪ್ರಾಂತ್ಯದ ಪೊವಿಸ್ ನಲ್ಲಿ ನಡೆದಿದೆ.

ಕಾಶ್ಮೀರದ ಈ ಕುಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಿಕ್ಕಿದ್ದು ಸ್ವಾತಂತ್ರ್ಯ ಸಿಕ್ಕಿ 73 ವರ್ಷಗಳ ಬಳಿಕ!
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ದುನ್ನಾಡಿ ಅಸ್ತಾನ್ ಎಂಬ ಗ್ರಾಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 7 ದಶಕಗಳು ಕಳೆದರೂ ಇನ್ನೂ ವಿದ್ಯುತ್ ಸೌಕರ್ಯವಿಲ್ಲದೆ ಕತ್ತಲೆಯಲ್ಲಿತ್ತು. ಈ ಗ್ರಾಮದ ಪಕ್ಕ ಇರುವ ಪರ್ವತ ಪ್ರದೇಶಕ್ಕೆ ವಿದ್ಯುತ್ ಸೌಕರ್ಯ ಲಭಿಸಿತ್ತು, ಆದರೆ ಈ ಗ್ರಾಮ ಮಾತ್ರ ಕತ್ತಲೆಯಲ್ಲಿಯೇ ಇತ್ತು.

ಬಿಹಾರ: ಹೆಚ್ಚಿದ ಮಂಗಗಳ ಕಾಟ; ಕರಡಿ ವೇಷ ತೊಟ್ಟು ಕೋತಿಗಳ ಓಡಿಸಿದ ಗ್ರಾಮಸ್ಥರು!
ದಿನ ಬೆಳಗಾಗಿ ಕಣ್ಣು ಬಿಡುತ್ತಿದ್ದಂತೆಯೇ ಕೋತಿಗಳ ಕಾಟ ಶುರುವಾಗಿ ಬಿಡುತ್ತಿತ್ತು. ನೆಮ್ಮದಿಯಿಂದ ಬದುಕುವುದೇ ಕಷ್ಟಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರೂ...

ಕೊರೋನಾ ಭೀತಿ: ಸ್ವಯಂ ಪ್ರೇರಿತವಾಗಿ ಊರನ್ನೇ ಬಂದ್ ಮಾಡಿದ ಗ್ರಾಮಸ್ಥರು!
ವಿಶ್ವದಾದ್ಯಂತ ಕೊರೋನಾವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ಸೋಂಕು ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರಬರುವುದಕ್ಕೂ ಆತಂಕ ಪಡುತ್ತಿದ್ದಾರೆ. ಒಂದೆಡೆ ನಗರ ಜನತೆ ಪರಿಸ್ಥಿತಿಯ ಸೂಕ್ಷ್ಮತೆಯನ್ನೇ ಅರಿಯದೆ ವರ್ತಿಸುತ್ತಿದ್ದರೆ, ಮತ್ತೊಂದೆಡೆ ಗ್ರಾಮಗಳಲ್ಲಿರುವ ಜನತೆ ಸೂಕ್ಷ್ಮತೆಯನ್ನರಿತು ಸ್ವಯಂಪ್ರೇರಿತರಾಗಿ ರಸ್ತೆಗಳಿಗೆ ಬೇಲಿ ಹಾಕಿ ಊರಿನ್ನು ಕಾಯಲು...

ಗದಗ ಜಿಲ್ಲೆಯ ಈ ಗ್ರಾಮ ಒಂದು ವಾರ ಸಂಪೂರ್ಣ ಸ್ತಬ್ಧ: ಸ್ವಯಂ ಕರ್ಫ್ಯೂ ಹಾಕಿಕೊಂಡ ಗ್ರಾಮಸ್ಥರು!
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂ ಘೋಷಿಸುವ ಮುನ್ನವೇ ಗದಗ ಜಿಲ್ಲೆಯ ಗ್ರಾಮವೊಂದು ಈಗಾಗಲೇ ಬಹುತೇಕ ಬಂದ್ ಆಗಿದೆ.

