ಭೂತಾನ್ ನಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ: ಡೊಕ್ಲಾಮ್ ಸಂಘರ್ಷದಿಂದ 9 ಕಿ.ಮೀ ವ್ಯಾಪ್ತಿಯಲ್ಲಿ ರಚನೆ
ಕಂಡಕಂಡಲ್ಲೆಲ್ಲಾ ಗಡಿ ಕ್ಯಾತೆ ತೆಗೆಯುವ ಚೀನಾ ಚಾಳಿ ಮುಂದುವರೆದಿದ್ದು, ಭೂತಾನ್ ಗೆ ಸೇರಿದ ಪ್ರದೇಶದಲ್ಲಿ 2 ಕಿ.ಮೀ ನಷ್ಟು ಒಳಗೆ ಪ್ರವೇಶಿಸಿರುವ ಚೀನಾ ಅಲ್ಲಿಯೇ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ.

ನವದೆಹಲಿ: ಕಂಡಕಂಡಲ್ಲೆಲ್ಲಾ ಗಡಿ ಕ್ಯಾತೆ ತೆಗೆಯುವ ಚೀನಾ ಚಾಳಿ ಮುಂದುವರೆದಿದ್ದು, ಭೂತಾನ್ ಗೆ ಸೇರಿದ ಪ್ರದೇಶದಲ್ಲಿ 2 ಕಿ.ಮೀ ನಷ್ಟು ಒಳಗೆ ಪ್ರವೇಶಿಸಿರುವ ಚೀನಾ ಅಲ್ಲಿಯೇ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ.
2017 ರಲ್ಲಿ ಚೀನಾದ ಸೈನಿಕರಿ ಹಾಗೂ ಭಾರತೀಯ ಸೈನಿಕರ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಡೊಕ್ಲಾಮ್ ನಿಂದ 9 ಕಿ.ಮೀ ದೂರದಲ್ಲಿ ಈ ಘಟನೆ ವರದಿಯಾಗಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ್ದ ಚಿತ್ರಗಳಿಂದ ಈ ಮಾಹಿತಿ ಲಭ್ಯವಾಗಿದೆ. ಈ ಚಿತ್ರಗಳು ವೈರಲ್ ಆಗುತ್ತಿದ್ದಂತೆಯೇ ಚೀನಾದ ಪತ್ರಕರ್ತರು ಇದನ್ನು ಡಿಲೀಟ್ ಕೂಡ ಮಾಡಿದ್ದಾರೆ.
ಭೂತಾನ್ ನ 2 ಕಿ.ಮೀ ಒಳಗೆ ಚೀನಾದ ಗ್ರಾಮ ಪಾಂಗ್ಡಾ ನಿರ್ಮಾಣಗೊಂಡಿದೆ ಎಂದು ಎನ್ ಡಿಟಿವಿ ವರದಿ ಪ್ರಕಟಿಸಿದೆ.
ಭೂತಾನ್ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವುದು ಭಾರತಕ್ಕೂ ಆತಂಕಕಾರಿ ಅಂಶವೇ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


