Vijayapura

ಕೊರೋನಾ: ಪೂರ್ಣ ಬಿಲ್ ಪಾವತಿ ಮಾಡದ ಹೊರತು ಮೃತದೇಹ ನೀಡಲ್ಲ ಎಂದ ಆಸ್ಪತ್ರೆ, ಕುಟುಂಬಸ್ಥರ ಪರದಾಟ
ಕೊರೋನಾದಿಂದ ವ್ಯಕ್ತಿ ಸಾವನ್ನಪ್ಪಿದ್ದಕ್ಕೆ ಆಸ್ಪತ್ರೆಯವರು ಬಾಕಿ ಬಿಲ್ ಪಾವತಿಸಿ ಶವ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರು ಬಾಕಿ ಬಿಲ್ ಕಟ್ಟಲು ಪರದಾಟಿದ ಘಟನೆ ಪಟ್ಟಣದಲ್ಲಿ ನಡೆಯಿತು.

ವಿಜಯಪುರ: ಮಹಿಳಾ ವಿವಿ ಹಾಸ್ಟೆಲ್ ನಲ್ಲಿ ಎಂಕಾಮ್ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಾಸ್ಟೆಲ್ ನಲ್ಲಿ ಎಂಕಾಮ್ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಆಕ್ಸಿಜನ್ ಸಿಲಿಂಡರ್ ಸರಬರಾಜು ಕಡಿತಗೊಳಿಸಿದ ಮಹಾರಾಷ್ಟ್ರ, ಉತ್ತರ ಕರ್ನಾಟಕದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಭೀತಿ
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ಕರ್ನಾಟಕಕ್ಕೆ ಸರಬರಾಜಾಗುತ್ತಿದ್ದ ಆಕ್ಸಿಜನ್ ಸಿಲಿಂಡರ್ ಗಳ ಮೇಲೆ ನಿಯಂತ್ರಣ ಹೇರಿ ಕಡಿತಗೊಳಿಸಿದ್ದು, ಇದರಿಂದ ಉತ್ತರ ಕರ್ನಾಟಕದ ಭಾಗದ ಆಸ್ಪತ್ರೆಗಳಲ್ಲಿ ಆಕ್ಸಿಜನೆ ಕೊರೆತೆಯುಂಟಾಗುವ ಭೀತಿ ಆರಂಭವಾಗಿದೆ.

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ರವಿಗೌಡ ಪಾಟೀಲ್ ಕೊರೋನಾಗೆ ಬಲಿ
ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ರವಿಗೌಡ ಪಾಟೀಲ್ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು

ಕೋವಿಡ್ ಚೇತರಿಕೆ ದರದಲ್ಲಿ ವಿಜಯಪುರ ಫಸ್ಟ್, ಶಿವಮೊಗ್ಗ ಲಾಸ್ಟ್!
ವಿಜಯಪುರದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 6,500 ಮೀರಿದೆ, ಆದರೆ ಜಿಲ್ಲೆಯಲ್ಲಿ ಕಳೆದ ವಾರಉತ್ತಮ ಚೇತರಿಕೆ ದರ ದಾಖಲಾಗಿದೆ. ಮತ್ತು ರಾಜ್ಯದಲ್ಲಿ ಕೋವಿಡ್ ಚೇತರಿಕೆ ದರಪಟ್ಟಿಯಲ್ಲಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ರಾಜ್ಯ ಕೋವಿಡ್ 19 ವಾರ್ ರೂಮ್ ಡೇಟಾದ ಪ್ರಕಾರ, “30 ಜಿಲ್ಲೆಗಳಲ್ಲಿ, ಕೇವಲ ಏಳು ಜಿಲ್ಲೆಗಳು ಮಾತ್ರ 80 ಪ್ರತಿಶತಕ್ಕಿಂತ ಹೆಚ್ಚಿನ

ವಿಜಯಪುರ ಜಿಲ್ಲೆಯಲ್ಲಿ ದಲಿತ ಯುವಕನ ಹತ್ಯೆ, ಬಿಜೆಪಿ ಕೊಲೆಗಡುಕರಿಗೆ ಬೆಂಬಲ ನೀಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪ
ದೇವಸ್ಥಾನದ ಕಟ್ಟೆ ಮೇಲೆ ಮೇಲ್ಜಾತಿಯವರೊಂದಿಗೆ ಕುಳಿತ 28 ವರ್ಷ ದಲಿತ ಯುವಕನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿರುವ ಅಮಾನುಷ ಘಟನೆ ವಿಜಯಪುರ ಜಲ್ಲೆಯ ಸಿಂದಗಿ ತಾಲ್ಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.

ಕೊಯ್ನಾ ಜಲಾಶಯ ಪ್ರದೇಶದಲ್ಲಿ ಭೂಕಂಪ: ರಾಜ್ಯದ ಕೃಷ್ಣಾ ನದಿ ಪಾತ್ರದಲ್ಲಿ ಆತಂಕ ಸೃಷ್ಟಿ
ಮಹಾರಾಷ್ಟ್ರದ ಸತಾರ ಜಿಲ್ಲೆಯ ಕೊಯ್ನಾ ಅಣೆಕಟ್ಟು ಬಳಿ ಶನಿವಾರ ಬೆಳಿಗ್ಗೆ 3.1 ತೀವ್ರತೆಯ ಭೂಕಂಪ ಸಂಭವಿಸುವುದರೊಂದಿಗೆ ರಾಜ್ಯದ ಕೃಷ್ಣ ನದಿ ಪಾತ್ರದಲ್ಲಿ ಆತಂಕ ಸೃಷ್ಟಿಯಾಗಿತ್ತು.

ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ: ವಿಜಯಪುರದಲ್ಲಿ ಇಬ್ಬರ ಬರ್ಬರ ಕೊಲೆ
ವಿವಾಹಿತೆಯೊಬ್ಬಳು ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ತಾಲೂಕಿನಲ್ಲಿ ಅಲಿಯಾಬಾದ್ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.

ವಿಜಯಪುರ: ಮೇಲ್ಜಾತಿ ವ್ಯಕ್ತಿಯ ಬೈಕ್ ಮುಟ್ಟಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ, ದೂರು ದಾಖಲು
ಮೇಲ್ಜಾತಿಗೆ ಸೇರಿದ ವ್ಯಕ್ತಿಯ ದ್ವಿಚಕ್ರ ವಾಹನ ಮುಟ್ಟಿದ ಎಂಬ ಕಾರಣಕ್ಕೆ 28 ವರ್ಷದ ದಲಿತ ಯುವಕನೊಬ್ಬನ ಮೇಲೆ ಹಲ್ಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಮಿನಜ್ಗಿ ಗ್ರಾಮದಲ್ಲಿ ನಡೆದಿದೆ.

