Vijayapura

ನಿರ್ಗತಿಕರಿಗೆ ಬಡವರಿಂದ ಸಹಾಯಹಸ್ತ: 3 ಮಕ್ಕಳ ವಿಧವೆಗೆ ಮನೆ ನಿರ್ಮಿಸಿಕೊಟ್ಟ ವಿಜಯಪುರದ ದಿನಗೂಲಿ ಕಾರ್ಮಿಕರು
ಅನೇಕರು ತಮ್ಮ ಜೀವನವನ್ನು ಉತ್ತಮಗೊಳಿಸಲು ಸರ್ಕಾರದ ಸಹಾಯಕ್ಕಾಗಿ ಕಾಯುತ್ತಿರುವ ಸಮಯದಲ್ಲಿ ವಿಜಯಪುರದ ಶಹಾಪೇಟಿಯ ದಿನಗೂಲಿ ಕಾರ್ಮಿಕರ ಗುಂಪೊಂದು ಸಮಾಜದ ಅತ್ಯಂತ ಬಡವರಿಗೆ ಸಹಾಯ ಮಾಡುವ ಕಾಯಕದಲ್ಲಿ ತೊಡಗಿದೆ.

Watch | ವಿಜಯಪುರ: ಮನೆಯ ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು

ವಿಜಯಪುರದಲ್ಲಿ ಭೀಕರ ದುರಂತ: ಮನೆ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು; Video
ಸ್ವಂತ ಮನೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ಕುಟುಂಬವು ತಾತ್ಕಾಲಿಕವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ರಾತ್ರಿ ನಿರಂತರ ಮಳೆ ಹಾಗೂ ಗಾಳಿಯಿಂದ ದುರ್ಬಲಗೊಂಡಿದ್ದ ಮನೆಯ ಮೇಲ್ಛಾವಣಿ ಅಚಾನಕ್ ಆಗಿ ಕುಸಿದು ಬಿದ್ದಿದೆ.

ಮೊಬೈಲ್-ರೀಲ್ಸ್ ಬಿಟ್ಟು ಪುಸ್ತಕ ಹಿಡಿದ ಬಾಲಕಿ: 14ನೇ ವಯಸ್ಸಿಗೇ ಕಾದಂಬರಿ ಪ್ರಕಟಣೆ; ಇದು ವಿಜಯಪುರದ ಮಾನ್ಯತಾ ಝಾ ಯಶೋಗಾಥೆ..!
10ನೇ ತರಗತಿಯಲ್ಲಿ ಓದುತ್ತಿರುವ ಮಾನ್ಯತಾ, ‘The Mystery of the Lost Bag’ ಎಂಬ ತನ್ನ ಮೊದಲ ಕಾದಂಬರಿಯನ್ನು ಪ್ರಕಟಿಸಿ ಎಲ್ಲರ ಗಮನ ಸೆಳೆದಿದ್ದಾಳೆ.

ನನಗೆ 2 ಬಾರಿ KPCC ಅಧ್ಯಕ್ಷ ಸ್ಥಾನದ ಅವಕಾಶ ಬಂದಿತ್ತು: ಸಚಿವ ಎಂ.ಬಿ ಪಾಟೀಲ್; Video
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿತ್ತು. ಆದರೆ ಕಾರಣಾಂತರಗಳಿಂದ ಆಗ ನಾನು ನೀರಾವರಿ ಮಂತ್ರಿ ಆಗಿದ್ದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶ ಕೊಟ್ಟಿದೆ ಎಂದರು.

ವಿಜಯಪುರದಲ್ಲಿ ಥಾರ್ಗೆ ಟ್ರಕ್ ಡಿಕ್ಕಿ ಹೊಡೆಸಿ ಹತ್ಯೆ: ಸಿನಿಮಾ ಸ್ಟೈಲ್ ಕೊಲೆ ಕೇಸ್ ಭೇದಿಸಿದ ಪೊಲೀಸರು; ಆರು ಜನರ ಬಂಧನ
ಏಪ್ರಿಲ್ 14 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಗುಗದಡ್ಡಿ ಗ್ರಾಮದ ನಿವಾಸಿ ರಾಜು ಬಾಪು ಖರಿ ಅವರು ತಮ್ಮ ಜೀಪಿನಲ್ಲಿ ವಿಜಯಪುರ ನಗರದ ಕಡೆಗೆ ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆಸಲಾಗಿತ್ತು.

ವಿಜಯಪುರ: ಜೀಪಿಗೆ ಟಿಪ್ಪರ್ ಡಿಕ್ಕಿ ಹೊಡೆಸಿ, ಗುಂಡು ಹಾರಿಸಿ ಗ್ರಾಮ ಪಂಚಾಯತಿ ಮಾಜಿ ಸದಸ್ಯನ ಭೀಕರ ಹತ್ಯೆ!
ಅಲಿಯಬಾದ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಗೊಡಂದಡ್ಡಿ ಗ್ರಾಮದ ನಿವಾಸಿ ರಾಜು ಬಾಪು ಖರೆ (48) ದುಷ್ಕರ್ಮಿಗಳಿಂದ ಹತ್ಯೆಯಾದವರು. ಕೊಲೆಗೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.

ವಿಜಯಪುರ: ನೀನು ನನ್ನನ್ನು ಹೋಲುತ್ತಿಲ್ಲ; 6 ವರ್ಷದ ಮಗನನ್ನೇ ಕೊಂದ ತಂದೆ!
ಸಿದ್ದಾರ್ಥ ನೋಡಲು ನಿನ್ನಂತಿಲ್ಲ ಎಂದು ಗ್ರಾಮದಲ್ಲಿ ಕೆಲವರು ಪ್ರತಿನಿತ್ಯ ಪಾಪಿ ಮಲ್ಲಿಕಾರ್ಜುನನ್ನ ಚುಡಾಯಿಸಿದ್ದರಂತೆ. ಇದನ್ನ ಗಂಭೀರವಾಗಿ ಪರಿಗಣಿಸಿ ಮಲ್ಲಿಕಾರ್ಜುನ ಮಗ ಸಿದ್ಧಾರ್ಥನನ್ನ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ.

ವಿಜಯಪುರ: ಪ್ರವಾಸಕ್ಕೆ ತೆರಳಿದ್ದ ಮುಸ್ಲಿಂ ಕುಟುಂಬ; ಭೂತನಾಳ ಕೆರೆಯಲ್ಲಿ ಮುಳುಗಿ ಬೆಂಗಳೂರಿನ ಮೂವರು ಸಾವು!
ವಿಜಯಪುರದ ಐತಿಹಾಸಿಕ ಸ್ಥಳಗಳನ್ನು ನೋಡಲು ಬೆಂಗಳೂರಿನ ಆರ್.ಟಿ. ನಗರದಿಂದ 14 ಜನರ ತಂಡ ಪ್ರವಾಸಕ್ಕೆ ತೆರಲಿದ್ದು ಈ ವೇಳೆ ಪ್ರಸಿದ್ಧ ಭೂತನಾಳ ಕೆರೆಯಲ್ಲಿ ಈಜಲು ಹೋದ ಮೂವರು ದುರಂತ ಅಂತ್ಯ ಕಂಡಿದ್ದಾರೆ.

