ವಿಜಯಪುರ: ಮಹಿಳಾ ವಿವಿ ಹಾಸ್ಟೆಲ್ ನಲ್ಲಿ ಎಂಕಾಮ್ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಾಸ್ಟೆಲ್ ನಲ್ಲಿ ಎಂಕಾಮ್ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ವಿಜಯಪುರ: ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಾಸ್ಟೆಲ್ ನಲ್ಲಿ ಎಂಕಾಮ್ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇಂದು (ಸೋಮವಾರ) ಅಂತಿಮ ಪರೀಕ್ಷೆ ಬರೆಯಬೇಕಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಗಿರುವ ಘಟನೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಮೃತಯುವತಿಯನ್ನು ಐಶ್ವರ್ಯ ಶಂಕರ ನಾಟಿಕಾರ(23) ಎಂದು ಗುರುತಿಸಲಾಗಿದ್ದು ಈಕೆ ಕಲಬುರಗಿ ಜಿಲ್ಲೆಗೆ ಸೇರಿದವಳಾಗಿದ್ದಳು. ಶಂಕರ ನಾಟಿಕಾರ ಮತ್ತು ವಿಶಾಲಾಕ್ಷಿದಂಪತಿಯ ಪುತ್ರಿಯಾಗಿದ್ದ ಐಶ್ವರ್ಯಾ ಕಡುಬಡತನದ ಹಿನ್ನೆಲೆಯಿಂದ ಬಂದು ಉನ್ನತ ಶಿಕ್ಷಣ ಪಡೆಯುತ್ತಿದ್ದಳು. ಅವಳು ಓದಿನಲ್ಲಿ ಬುದ್ದಿವಂತೆಯಾಗಿದ್ದು ಆಕೆ ಮುಂದೆ ತಾನು ಪಿಹೆಚ್ಡಿ ಮಾಡುವುದಾಗಿಯೂ ತಂದೆಗೆ ಹೇಳಿದ್ದಳು.
ಮೃತಳ ತಂದೆ ಶಂಕರ ನಾಟಿಕಾರ ರಸ್ತೆ ಬದಿ ಚಹಾ ಅಂಗಡಿಯನ್ನಿಟ್ಟು ಜೀವನ ನಡೆಸುತ್ತಿದ್ದಾರೆ. ಮಗಳು ಚೆನ್ನಾಗಿ ಓದಿದರೆ ಮುಂದೆ ನಮಗೂ ಆಸರೆಯಾಗುವಳೆಂದು ಭಾವಿಸಿದ್ದ ಅವರಿಗೆ ಇದೀಗ ಆಘಾತವಾಗಿದೆ.
ಅಂತಿಮ ಪರೀಕ್ಷೆ ಬರೆದು ಇಂದು ಕಲಬುರಗಿಗೆ ಮರಳಬೇಕಿದ್ದ ಐಶ್ವರ್ಯಾ ತಾನು ತಂಗಿದ್ದ ಹಾಸ್ಟೆಲ್ ಕೋಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭಾನುವಾರ ಮಧ್ಯಾಹ್ನ ಯುವತಿಯ ಪೋಷಕರು ಮಗಳಿಗೆ ಕರೆ ಮಾಡಿದರೆ ಆಕೆ ಕರೆ ಸ್ವೀಕರಿಸಿಲ್ಲ. ಆಗ ಅವರು ಯುವತಿಯ ಸ್ನೇಹಿತೆಗೆ ಕರೆ ಮಾಡಿದ್ದಾರೆ. ಹಾಗೆ ಸ್ನೇಹಿತೆಯರು ಬಂದು ಕಾಣುವ ವೇಳೆಗೆ ಐಶ್ವರ್ಯಾ ಮಂಚದ ಕೆಳಗೆ ಬಿದ್ದಿದ್ದು ತಿಳೀದಿದೆ.
ಘಟನೆ ಬಗ್ಗೆ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಓಂಕಾರ ಕಾಕಡೆ ವಿಷಾದ ವ್ಯಕ್ತಪಡಿಸಿದ್ದಾರೆ.
ಇನ್ನು ಮೃತ ಯುವತಿಗೆ ಇತ್ತೀಚೆಗೆ ತಮ್ಮ ಸಂಬಂಧಿಕ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥ ಕೂಡ ಆಗಿತ್ತು. ಘಟನೆಗೆ ಕಾರಣ ತಿಳಿದಿಲ್ಲ. ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರಿದಿದೆ. ಈ ಮಧ್ಯೆ ಯುವತಿಯ ಪೋಷಕರು ಮೃತದೇಹವನ್ನು ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


