Vijayapura

ಭೌಗೋಳಿಕ ಮಾನ್ಯತೆ ಎಫೆಕ್ಟ್: ವಿಜಯಪುರ ನಿಂಬೆ ಗಿಡಗಳಿಗೆ ಭಾರೀ ಬೇಡಿಕೆ, ಒಂದೇ ವರ್ಷದಲ್ಲಿ 5 ಲಕ್ಷ ಸಸಿ ಮಾರಾಟ!
ವಿಜಯಪುರ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ನಿಂಬೆ ಬೆಳೆಯುವ ಜಿಲ್ಲೆಯಾಗಿದ್ದು, ಜಿಲ್ಲೆಯ ಇಂಡಿ ತಾಲೂಕೊಂದರಲ್ಲೇ ಶೇ 50 ಕ್ಕಿಂತ ಹೆಚ್ಚು ಸಸಿ ಬೆಳೆಯಲಾಗುತ್ತದೆ.

ವಿಜಯಪುರ: ಮರಿಯೊಂದಿಗೆ ಚಿರತೆ ಪ್ರತ್ಯಕ್ಷ; ನಾಗರದಿನ್ನಿ ಗ್ರಾಮಸ್ಥರಲ್ಲಿ ಆತಂಕ
ಮಹಾದೇವ ಕೋಲ್ಕಾರ್ ಎಂಬುವವರ ಜಮೀನಿನ ಬಳಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಹಬ್ಬಕ್ಕೆ ಸಾಲು-ಸಾಲು ರಜೆ: ಬೆಂಗಳೂರು-ಬೆಳಗಾವಿ, ವಿಜಯಪುರಕ್ಕೆ ವಿಶೇಷ ರೈಲು ವ್ಯವಸ್ಥೆ!
ಬುಕಿಂಗ್ ಮತ್ತು ವೇಳಾಪಟ್ಟಿ ಮಾಹಿತಿಗಾಗಿ, ಪ್ರಯಾಣಿಕರು 139 ಗೆ ಕರೆ ಮಾಡಬಹುದು ಅಥವಾ ಐಆರ್ಸಿಟಿಸಿ ವೆಬ್ಸೈಟ್ ಮೂಲಕವೂ ಪರಿಶೀಲಿಸಿ ಬುಕಿಂಗ್ ಮಾಡಬಹದು ಎಂದು ರೈಲ್ವೆ ತಿಳಿಸಿದೆ.

ವಿಜಯಪುರ: ವೆದರ್ ಮಾನಿಟರಿಂಗ್ ಸಾಧನ ನೆಲಕ್ಕಪ್ಪಳಿಸಿ ಕೆಲಕಾಲ ಆತಂಕ ಸೃಷ್ಟಿ
ಸ್ಥಾನಿಕ ಹವಾಮಾನ ಅಧ್ಯಯನಕ್ಕಾಗಿ ಮಾಹಿತಿ ಸಂಗ್ರಹಿಸಲು ಬೆಂಗಳೂರಿನ ಇಸ್ರೋ ಕೇಂದ್ರದಿಂದ ಕೆಲ ದಿನಗಳ ಹಿಂದೆ ವಿಶೇಷ ಸಾಧನವನ್ನು ಹಾರಿ ಬಿಡಲಾಗಿತ್ತು. ಸದರಿ ಸಾಧನ ಸ್ಥಾನಿಕ ಹವಾಮಾನ ಮಾಹಿತಿಯನ್ನು ಇಸ್ರೋ ಕೇಂದ್ರಕ್ಕೆ ರವಾನಿಸುತ್ತಿತ್ತು.

ವಿಜಯಪುರ: ಪೊಲೀಸರಿಂದ ತಪ್ಪಿಸಿಕೊಳ್ಳಲು ತೆಪ್ಪದಲ್ಲಿ ಕೃಷ್ಣಾ ನದಿಗೆ ಇಳಿದ 6 ಮಂದಿ ನೀರುಪಾಲು!
ನದಿ ತಟದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪು ಪೊಲೀಸರನ್ನು ಕಂಡ ಕೂಡಲೇ ಭಯದಿಂದ ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಇನ್ನು ತೆಪ್ಪದಲ್ಲಿ ಹೋಗುತ್ತಿದ್ದಾಗ ಜೋರಾಗಿ ಗಾಳಿ ಬೀಸಿದ್ದು ಇದರಿಂದ ತೆಪ್ಪ ನದಿಯಲ್ಲಿ ಮುಳುಗಿದ್ದು 6 ಮಂದಿ ಸಾವನ್ನಪ್ಪಿದ್ದಾರೆ.

ಭೀಮಾ ತೀರದಲ್ಲಿ ಮತ್ತೆ ಗುಂಡಿನ ದಾಳಿ; ರೌಡಿಶೀಟರ್ ಸ್ಥಳದಲ್ಲೇ ಸಾವು
ಭೀಮಾ ತೀರದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದ್ದು ದುಷ್ಕರ್ಮಿಗಳ ದಾಳಿಯಲ್ಲಿ ನಟೋರಿಯಸ್ ರೌಡಿಶೀಟರ್ ಕೊಲೆಯಾಗಿದೆ.

ವಿಜಯಪುರ: ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪೋಷಕರು, ಜೀವನ್ಮರಣ ಹೋರಾಟ!
ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಯಸಿಯನ್ನು ದೂರ ಮಾಡಿಕೊಳ್ಳಲು ಇಚ್ಛಿಸದ ಯುವಕನೋರ್ವ ನಿನ್ನೆ ಯುವತಿಯ ಮನೆ ಬಳಿ ಹೋಗಿದ್ದಾಗ ಯುವತಿಯ ಪೋಷಕರು ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿಜಯಪುರ: ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಮುಳುಗಿ ಮೂವರು ಮಕ್ಕಳ ಸಾವು
ವಿಜಯಪುರ ಹೊರವಲಯದ ಇಂಡಿ ರಸ್ತೆಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ ಮಕ್ಕಳು ಸೋಮವಾರ ಶವವಾಗಿ ಪತ್ತೆಯಾಗಿದ್ದು, ಗಿಡಗಳಲ್ಲಿ ಸಿಲುಕಿಕೊಂಡಿದ್ದ ಅವರ ಶವಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಜಯಪುರ: ಒಂಟೆ ಸವಾರಿ ಬಳಿಕ ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ!
ವಿಜಯಪುರದ ಚಾಬಕಸಾಬ್ ದರ್ಗಾದ ಬಳಿ ನಿನ್ನೆ ಒಂಟೆ ಸವಾರಿ ಮಾಡಿದ್ದ ಮೂವರು ಮಕ್ಕಳು ನಂತರ ಕಾಣೆಯಾಗಿದ್ದರು. ಆದರೆ ಇಂದು ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

