ರಾಜ್ಯ

ವಿಜಯಪುರ: ವೆದರ್ ಮಾನಿಟರಿಂಗ್ ಸಾಧನ ನೆಲಕ್ಕಪ್ಪಳಿಸಿ ಕೆಲಕಾಲ ಆತಂಕ ಸೃಷ್ಟಿ

ಸ್ಥಾನಿಕ ಹವಾಮಾನ ಅಧ್ಯಯನಕ್ಕಾಗಿ ಮಾಹಿತಿ ಸಂಗ್ರಹಿಸಲು ಬೆಂಗಳೂರಿನ ಇಸ್ರೋ ಕೇಂದ್ರದಿಂದ ಕೆಲ ದಿನಗಳ ಹಿಂದೆ ವಿಶೇಷ ಸಾಧನವನ್ನು ಹಾರಿ ಬಿಡಲಾಗಿತ್ತು. ಸದರಿ ಸಾಧನ ಸ್ಥಾನಿಕ ಹವಾಮಾನ ಮಾಹಿತಿಯನ್ನು ಇಸ್ರೋ ಕೇಂದ್ರಕ್ಕೆ ರವಾನಿಸುತ್ತಿತ್ತು.

ವಿಜಯಪುರ: ವೆದರ್ ಮಾನಿಟರಿಂಗ್ ಸಾಧನ ನೆಲಕ್ಕಪ್ಪಳಿಸಿ ಕೆಲಕಾಲ ಆತಂಕ ಸೃಷ್ಟಿ
ವೆದರ್ ಮಾನಿಟರಿಂಗ್ ಸಾಧನ ನೆಲಕ್ಕಪ್ಪಳಿಸಿರುವುದು.
Published On :

ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಮರಗೂರ ಬಳಿ ಹವಾಮಾನ ಮಾಹಿತಿ ಸಂಗ್ರಹಕ್ಕೆ ಹಾರಿಸಲಾಗಿದ್ದ ಪ್ಯಾರಾಚ್ಯೂಟ್ ಮಾದರಿ ಬಾಹ್ಯಾಕಾಶ ಸಾಧನ ನೆಲಕ್ಕೆ ಅಪ್ಪಳಿಸಿದ ಘಟನೆ ಶುಕ್ರವಾರ ನಡೆದಿದೆ.

ಸ್ಥಾನಿಕ ಹವಾಮಾನ ಅಧ್ಯಯನಕ್ಕಾಗಿ ಮಾಹಿತಿ ಸಂಗ್ರಹಿಸಲು ಬೆಂಗಳೂರಿನ ಇಸ್ರೋ ಕೇಂದ್ರದಿಂದ ಕೆಲ ದಿನಗಳ ಹಿಂದೆ ವಿಶೇಷ ಸಾಧನವನ್ನು ಹಾರಿ ಬಿಡಲಾಗಿತ್ತು. ಸದರಿ ಸಾಧನ ಸ್ಥಾನಿಕ ಹವಾಮಾನ ಮಾಹಿತಿಯನ್ನು ಇಸ್ರೋ ಕೇಂದ್ರಕ್ಕೆ ರವಾನಿಸುತ್ತಿತ್ತು. ಹೈದರಾಬಾದ್ ಇಸ್ರೋ ನಿರ್ವಹಣಾ ಕೇಂದ್ರದಿಂದ ಈ ಸಾಧನವನ್ನು ನಿಯಂತ್ರಣ ಮಾಡಲಾಗುತ್ತಿತ್ತು.

ಲೋ‌ ಲ್ಯಾಟಿಟ್ಯೂಡ್ ವೆದರ್ ಮಾನಿಟರಿಂಗ್ ಮಾಡಲು ಹಾರಿ ಬಿಡಲಾಗಿರುವ ಈ ಸಾಧನ ಮರಗೂರ ಬಳಿ ಜಮೀನಿನಲ್ಲಿ ಬಿದ್ದಿದೆ. ಈ ಸಾಧನ ಪತನದಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ, ಬಾಹ್ಯಾಕಾಶ ಸಾಧನ ಪತನದಿಂದ ಆಗಿರುವ ನಷ್ಟ, ವ್ಯತಿರಿಕ್ತ ಪರಿಣಾಮಗಳ ಕುರಿತು ತಜ್ಞರ ಭೇಟಿ ಬಳಿಕವೇ ಮಾಹಿತಿ ಲಭ್ಯವಾಗಲಿದೆ.

ಕೇಂದ್ರ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿನ ಹೈದರಾಬಾದ್ ನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್) ಹವಾಮಾನ ಹಾಗೂ ವಾತಾವರಣ ಅಧ್ಯಯನಕ್ಕಾಗಿ ಉಡಾವಣೆ ಮಾಡಿದ್ದ ಪೆಲೋಡ್ ಹೆಸರಿನ ಹವಾಮಾನ ಅಧ್ಯಯನಾಶೀಲ ವೈಜ್ಞಾನಿಕ ಉಪಕರಣ ಪ್ಯಾರಾಚೂಟ್ ನ ನೆರವಿನಿಂದ ಚಡಚಣ ತಾಲೂಕಿನ ಗ್ರಾಮವೊಂದರ ಜಮೀನಿನಲ್ಲಿ ಬಂದು ಇಳಿದಿದೆ. ಸಾಧನವು ಕೆಳಗೆ ಬಿದ್ದಿರುವುದಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಆದರೆ, ಬಲೂನ್ ಪಂಕ್ಚರ್ ಆಗಿದ್ದರೆ ನೆಲಕ್ಕೆ ಅಪ್ಪಳಿಸುವ ಸಾಧ್ಯತೆಗಳಿರುತ್ತವೆ ಎಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜಮೀನಿನಲ್ಲಿ ನೆಲಕ್ಕೆ ಬಿದ್ದಿದ್ದ ಸಾಧನವನ್ನು ಗಮಿಸಿದ್ದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದರು. ಇದೀಗ ಹೈದರಾಬಾದ್ ನಿಂದ ಮಾಹಿತಿ ಪಡೆದಿರುವ ಇಸ್ರೋ ಪ್ರತಿನಿಧಿಗಳು ಇದೀಗ ವಿಜಯಪುರಕ್ಕ ಭೇಟಿ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ.

ಇಸ್ರೋ ಅಧಿಕಾರಿಗಳು ವಿಜಯಪುರಕ್ಕೆ ಆಗಮಿಸಿದ ಬಳಿಕ ಅವರಿಗೆ ಸಾಧನವನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.