Vijay

ಕಾಲಿವುಡ್ ನಲ್ಲಿ ಸ್ಟಾರ್ ವಾರ್: 8 ವರ್ಷಗಳ ನಂತರ ಇಬ್ಬರು ನಟರ ಸಿನಿಮಾ ಒಂದೇ ದಿನ ರಿಲೀಸ್; ಪೋಸ್ಟರ್ ಹರಿದು ಬಡಿದಾಡಿಕೊಂಡ ವಿಜಯ್-ಅಜಿತ್ ಫ್ಯಾನ್ಸ್!
ಎಂಟು ವರ್ಷಗಳ ನಂತರ ಅಜಿತ್ ಮತ್ತು ಥಳಪತಿ ವಿಜಯ್ ನಟನೆಯ ಚಿತ್ರಗಳು ಮುಖಾಮುಖಿ ಆಗುತ್ತಿವೆ. ಹಾಗಾಗಿ ಸಹಜವಾಗಿಯೇ ಸ್ಟಾರ್ ವಾರ್ ಕ್ರಿಯೇಟ್ ಆಗಿದೆ.

ಮಲಯಾಳಿ ನಟಿಯೊಂದಿಗೆ ಸಂಬಂಧ: 23 ವರ್ಷಗಳ ದಾಂಪತ್ಯದಲ್ಲಿ ಬಿರುಕು! ನಟ ವಿಜಯ್ -ಸಂಗೀತಾ ವಿಚ್ಛೇದನ?
ತಮಿಳು ನಟ ವಿಜಯ್ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಕಹಿ ಸುದ್ದಿ ಸಿಕ್ಕಿದೆ. ‘ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಮಧ್ಯೆ ಬಿರುಕು ಮೂಡಿದೆ. ಪರಿಣಾಮ ಇಬ್ಬರು ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರಂತೆ ಎಂಬ ವದಂತಿ ಹರಿದಾಡುತ್ತಿದೆ.

'ಗುರು ಶಿಷ್ಯರು' ನಿರ್ದೇಶಕ ಜಡೇಶಾ ಕೆ ಹಂಪಿ ಮುಂದಿನ ಸಿನಿಮಾಗೆ ವಿಜಯ್ ನಾಯಕ?
ಗುರು-ಶಿಷ್ಯರು ಸಿನಿಮಾ ಮೂಲಕ ಸಾಕಷ್ಟು ಪ್ರೀತಿ ಅಭಿಮಾನ ಗಳಿಸಿದ ನಿರ್ದೇಶಕರ ಜಡೇಶಾ ಕೆ ಹಂಪಿ ತಮ್ಮ ಮುಂದಿನ ಪ್ರಾಜೆಕ್ಟ್ ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ವಿಜಯ್ ಅಭಿನಯದ 'ವಾರಿಸು' ಚಿತ್ರ ನಿರ್ಮಾಣ ಸಂಸ್ಥೆಗೆ ಸಂಕಷ್ಟ: ಶೋಕಾಸ್ ನೋಟಿಸ್ ನೀಡಿದ ಎಡಬ್ಲ್ಯೂಬಿಐ
ವಿಜಯ್ ಅಭಿನಯದ ಮುಂಬರುವ ತಮಿಳು ಚಿತ್ರ 'ವಾರಿಸು' ನಿರ್ಮಿಸುತ್ತಿರುವ ಹೈದರಾಬಾದ್ ಮೂಲದ ವೆಂಕಟೇಶ್ವರ ಕ್ರಿಯೇಷನ್ಸ್‌ಗೆ ಸಂಕಷ್ಟ ಎದುರಾಗಿದ್ದು ಎಡಬ್ಲ್ಯೂಬಿಐ ಶೋಕಾಸ್ ನೋಟೀಸ್ ನೀಡಿದೆ.

ತಮಿಳು ನಟ ವಿಜಯ್ ಅಭಿಮಾನಿಗಳಿಂದ ಮತದಾನ ಜಾಗೃತಿ ಅಭಿಯಾನ: ನಟನ ರಾಜಕೀಯ ಪ್ರವೇಶಕ್ಕೆ ಮುನ್ಸೂಚನೆ
ವಿಜಯ್ ಅಭಿಮಾನಿಗಳು ಮುಖ್ಯವಾಗಿ ಯುವಪೀಳಿಗೆಯನ್ನು ಕೇಂದ್ರೀಕರಿಸಿ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವುದು ವಿಶೇಷ.

ಗ್ರಾಮಾಂತರ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದ ನಟ ವಿಜಯ್ ಅಭಿಮಾನಿಗಳ ಸಂಘ
ತಮಿಳುನಾಡಿನ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಮಕ್ಕಳ್ ನೀತಿ ಮೈಯಂ ಶೂನ್ಯ ಸ್ಥಾನ ಪಡೆದಿದ್ದರೆ ಇನ್ನು ಯುವ ಸೂಪರ್ ಸ್ಟಾರ್ ದಳಪತಿ ವಿಜಯ್ ರ ಅಭಿಮಾನಿ ಬಳಗವು 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ.

'ನಿಜ ನಾಯಕನಂತೆ ವರ್ತಿಸಿ': ರೋಲ್ಸ್ ರಾಯ್ ಕಾರಿಗೆ ತೆರಿಗೆಯಿಂದ ವಿನಾಯ್ತಿ ಕೋರಿದ್ದ ನಟ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ ಕುಟುಕು!
2012ರಲ್ಲಿ ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡಿದ್ದ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ಪ್ರವೇಶ ತೆರಿಗೆ ವಿನಾಯಿತಿ ಕೋರಿದ್ದ ನಟ ವಿಜಯ್ ಮನವಿಯನ್ನು ತೀವ್ರವಾಗಿ ತಿರಸ್ಕರಿಸಿರುವ ಮದ್ರಾಸ್ ಹೈಕೋರ್ಟ್ ನಟರು ನಿಜ ನಾಯಕನಂತೆ ವರ್ತಿಸಬೇಕು ಎಂದು ಹೇಳಿದೆ.

ಕಂಗನಾ ಅಭಿನಯದ 'ತಲೈವಿ' ಟ್ರೇಲರ್
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರನೌತ್ 34ನೇ ಜನ್ಮದಿನದಂದು ಅವರ "ತಲೈವಿ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜೀವನದ ಸೂಕ್ಷ್ಮ ನೋಟವನ್ನು ನೀಡುತ್ತದೆ.

'ಮನಿ ಹೀಸ್ಟ್' ಚಿತ್ರ ರಿಮೇಕ್ ಆದರೆ ಪ್ರೊಫೆಸರ್ ಪಾತ್ರ ಯಾರಿಗೆ? ಅಲೆಕ್ಸ್ ರೊಡ್ರಿಗೋ ಆಯ್ಕೆ ಮಾಡಿದ್ದು ಯಾರನ್ನು?
ಸ್ಪಾನಿಷ್ ಭಾಷೆಯ ಅಪರಾಧ ಕಥೆಯನ್ನೊಳಗೊಂಡ ಸಿನೆಮಾ ಸರಣಿ 'ಮನಿ ಹೀಸ್ಟ್' ನೆಟ್ ಫ್ಲಿಕ್ಸ್ ನಲ್ಲಿ ಅತ್ಯಧಿಕ ವೀಕ್ಷಣೆ ಕಂಡ ಜನಪ್ರಿಯ ಚಿತ್ರವಾಗಿದೆ.

