ದೇಶ

ಗ್ರಾಮಾಂತರ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದ ನಟ ವಿಜಯ್ ಅಭಿಮಾನಿಗಳ ಸಂಘ

ತಮಿಳುನಾಡಿನ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಮಕ್ಕಳ್ ನೀತಿ ಮೈಯಂ ಶೂನ್ಯ ಸ್ಥಾನ ಪಡೆದಿದ್ದರೆ ಇನ್ನು ಯುವ ಸೂಪರ್ ಸ್ಟಾರ್ ದಳಪತಿ ವಿಜಯ್ ರ ಅಭಿಮಾನಿ ಬಳಗವು 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ.

ಗ್ರಾಮಾಂತರ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದ ನಟ ವಿಜಯ್ ಅಭಿಮಾನಿಗಳ ಸಂಘ
ವಿಜಯ್
Published On :

ತಮಿಳುನಾಡಿನ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಮಕ್ಕಳ್ ನೀತಿ ಮೈಯಂ ಶೂನ್ಯ ಸ್ಥಾನ ಪಡೆದಿದ್ದರೆ ಇನ್ನು ಯುವ ಸೂಪರ್ ಸ್ಟಾರ್ ದಳಪತಿ ವಿಜಯ್ ರ ಅಭಿಮಾನಿ ಬಳಗವು 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. 

ರಾಜಕೀಯ ಪಕ್ಷ ಸಜ್ಜುಗೊಳಿಸಲು ಅವಕಾಶ ನೀಡದ ವಿಜಯ್, ಈ ಸಂಬಂಧ ಅವರ ಪೋಷಕರಾದ ಎಸ್ ಚಂದ್ರಶೇಖರ್ ಮತ್ತು ಶೋಭಾ ಶೇಖರ್ ಸೇರಿದಂತೆ 11 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಆದಾಗ್ಯೂ, ಅವರ ಅಭಿಮಾನಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದರು.

ತಮಿಳು ಚಿತ್ರರಂಗದಲ್ಲಿ ರಜನೀಕಾಂತ್ ನಂತರ ಎರಡನೇ ಸ್ಥಾನದಲ್ಲಿರುವ ವಿಜಯ್ ಅವರ ಅಭಿಮಾನಿಗಳ ಸಂಘ - ಅಖಿಲ ಭಾರತ ತಲಪತಿ ವಿಜಯ್ ಮಕ್ಕಳ ಇಯ್ಯಕಂ-ಒಂಬತ್ತು ಜಿಲ್ಲೆಗಳ ಗ್ರಾಮೀಣ ಸಂಸ್ಥೆಗಳಿಂದ ಸ್ಪರ್ಧಿಸಲು ಅವಕಾಶ ನೀಡಿದ್ದು ಇದೇ ಮೊದಲು. ನಟನ ಅಭಿಮಾನಿಗಳ ಸಂಘವು ತಾನು ಸ್ಪರ್ಧಿಸಿದ 169 ಸ್ಥಾನಗಳಲ್ಲಿ 115 ಸ್ಥಾನಗಳನ್ನು ಗೆದ್ದಿದೆ. ಇನ್ನು ಅದರ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ಪುದುಚೇರಿ ಮಾಜಿ ಶಾಸಕ ಬಸ್ಸಿ ಆನಂದ್ ಅವರು 13 ಸ್ಥಾನಗಳಲ್ಲಿ ಅವಿರೋಧವಾಗಿ ಗೆದ್ದರು.

115 ವಿಜೇತರಲ್ಲಿ 45 ಮಹಿಳೆಯರು, ಇತರ ವಿಜೇತರಲ್ಲಿ ರೈತರು, ಲ್ಯಾಬ್ ತಂತ್ರಜ್ಞರು, ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ವ್ಯಾಪಾರಿಗಳು ಸೇರಿದ್ದಾರೆ ಎಂದು ಆನಂದ್ ಮಾಧ್ಯಮಗಳಿಗೆ ತಿಳಿಸಿದರು.

ಅಖಿಲ ಭಾರತ ತಲಪತಿ ಮಕ್ಕಳ ಇಯ್ಯಕಂ 10 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸದಸ್ಯರನ್ನು ಹೊಂದಿದೆ. ಇನ್ನು ಅಭಿಮಾನಿಗಳ ಸಂಘವು ಸಾಮಾನ್ಯವಾಗಿ ಯಾವುದೇ ರಾಜಕೀಯ ಸಂಬಂಧಗಳನ್ನು ಹೊಂದಿಲ್ಲ. 2011ರ ಚುನಾವಣೆಯನ್ನು ಹೊರತುಪಡಿಸಿ, ಎಐಎಡಿಎಂಕೆ ಮತ್ತು ಜಯಲಲಿತಾಗೆ ವಿಜಯ್ ಬೆಂಬಲ ನೀಡಿದ್ದರು. ಹಲವಾರು ರಾಜಕೀಯ ಪಂಡಿತರು ಈ ಫಲಿತಾಂಶಗಳು ವಿಜಯ್ ತಮಿಳುನಾಡಿನ ಭವಿಷ್ಯದ ರಾಜಕೀಯದಲ್ಲಿ ತಮಗಾಗಿ ದೊಡ್ಡ ಪಾತ್ರವನ್ನು ಹುಡುಕಲು ಕಾರಣವಾಗುತ್ತದೆ ಎಂದು ನಂಬುತ್ತಾರೆ.

ವಿಜಯ್ ಕಣಕ್ಕೆ ಧುಮುಕುವ ಮೊದಲು ಸರಿಯಾದ ಸಂಶೋಧನೆ ನಡೆಸಿದ್ದಾರೆ. ಅವರು ತಮ್ಮ ಅಭಿಮಾನಿಗಳಿಗೆ ತಮ್ಮ ಹೆಸರು ಮತ್ತು ಧ್ವಜವನ್ನು ಬಳಸಲು ಅವಕಾಶ ಮಾಡಿಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಅವರು ಕೆಲವು ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿದಿದ್ದರು. ಅವರು ರಾಜಕೀಯದಲ್ಲಿ ಧುಮುಕುವ ಸಾಧ್ಯತೆಯಿದೆ. ತಮಿಳುನಾಡು ರಾಜ್ಯದಲ್ಲಿ ಜನಪ್ರಿಯ ನಾಯಕರ ಸ್ಪಷ್ಟ ನಿರ್ವಾತವಿದೆ ಎಂದು ಮಧುರೈ ಮೂಲದ ಥಿಂಕ್ ಟ್ಯಾಂಕ್ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕ ಆರ್. ಪದ್ಮನಾಭನ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.