
ರವಿಶಂಕರ್ ಪ್ರಸಾದ್, ತರೂರ್ ಟ್ವೀಟ್ ಖಾತೆಗಳ ಲಾಕ್: ಟ್ವಿಟ್ಟರ್‌ನಿಂದ ವಿವರಣೆ ಕೇಳಲು ಸಂಸದೀಯ ಸಮಿತಿ ನಿರ್ಧಾರ
ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ಐಟಿ ಸಚಿವ ರವಿಶಂಕರ್ ಪ್ರಸಾದ್ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ಅಧ್ಯಕ್ಷ ಶಶಿ ತರೂರ್ ಅವರ ಖಾತೆಗೆ ಟ್ವಿಟ್ಟರ್ ಒಂದು ಗಂಟೆ ಕಾಲ ನಿರ್ಬಂಧಿಸಿದ ನಂತರ, ಸ್ಥಾಯಿ ಸಮಿತಿಯು ಸಾಮಾಜಿಕ ಮಾಧ್ಯಮದಿಂದ ವಿವರಣೆಯನ್ನು ಪಡೆಯಲಿದೆ.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವೈಯಕ್ತಿಕ ಖಾತೆಯನ್ನು 1 ಗಂಟೆ ಕಾಲ ನಿರ್ಬಂಧಿಸಿದ್ದ ಟ್ವೀಟರ್!
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ವೈಯಕ್ತಿಕ ಖಾತೆಯನ್ನು ಟ್ವಿಟರ್ ಸುಮಾರು 1 ಗಂಟೆಗಳ ಕಾಲ ಸ್ಥಗಿತಗೊಳಿಸಿತ್ತು.

ಟ್ವಿಟ್ಟರ್ ಇಂಡಿಯಾ ಎಂಡಿ ವಿರುದ್ಧ ಯಾವುದೇ ಬಲವಂತದ ಕ್ರಮ ಬೇಡ: ಯುಪಿ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಸೂಚನೆ
ವೈರಲ್ ವಿಡಿಯೋವೊಂದರ ಸಂಬಂಧ ನೋಂದಾಯಿಸಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಯುಪಿ ಪೊಲೀಸರನ್ನು ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಹೊರಡಿಸಿದೆ.

ಘಾಜಿಯಾಬಾದ್‌ನಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ: 50 ಟ್ವೀಟ್‌ಗಳಿಗೆ ಟ್ವಿಟ್ಟರ್ ನಿಂದ ತಡೆ
ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬನ ಕೋಮು ಸೂಕ್ಷ್ಮ ವೀಡಿಯೊ ಕ್ಲಿಪ್‌ಗೆ ಸಂಬಂಧಿಸಿ 50 ಟ್ವೀಟ್‌ಗಳನ್ನು ಟ್ವಿಟ್ಟರ್ "ತಡೆಹಿಡಿದಿದೆ" ಎಂದು ಮೂಲಗಳು ತಿಳಿಸಿವೆ.

ದೇಶದ ಕಾನೂನು ಸರ್ವೋಚ್ಛವೇ ಹೊರತು ನಿಮ್ಮ ನೀತಿಗಳಲ್ಲ: ಟ್ವಿಟರ್ ಗೆ ಸಂಸದೀಯ ಸಮಿತಿ ತಪರಾಕಿ
ಹೊಸ ಐಟಿ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಸಮನ್ಸ್ ಪಡೆದು ಹಾಜರಾಗಿದ್ದ ಟ್ವಿಟರ್ ಅಧಿಕಾರಿಗಳನ್ನು ಸಂಸದೀಯ ಸಮಿತಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಘಾಜಿಯಾಬಾದ್ ವೃದ್ಧನ ಮೇಲೆ ಹಲ್ಲೆ ವಿಡಿಯೋ: ಟ್ವಿಟರ್ ಇಂಡಿಯಾ ಎಂಡಿಗೆ ಉತ್ತರ ಪ್ರದೇಶ ಪೊಲೀಸ್ ನೋಟಿಸ್!
ರಾಷ್ಟ್ರದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ವೃದ್ಧರೊಬ್ಬರಿಗೆ ಹಲ್ಲೆ ಮಾಡಿ, ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾ ಎಂಡಿಗೆ ಉತ್ತರ ಪ್ರದೇಶ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಟ್ವಿಟಿರ್ ನಿಯಂತ್ರಿಸುವ ಪ್ರಯತ್ನ ಖಂಡನೀಯ; ಬಗ್ಗದ ಪ್ರತಿಯೊಬ್ಬರನ್ನು ನಿಯಂತ್ರಿಸಲು ಕೇಂದ್ರದಿಂದ ಪ್ರಯತ್ನ: ಮಮತಾ
ಟ್ವಿಟರ್ ನಿಯಂತ್ರಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಯತ್ನದ ವಿರುದ್ಧ ಗುರುವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಮೈಕ್ರೊಬ್ಲಾಗ್ಗಿಂಗ್ ವೇದಿಕೆ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿ, ಇದೀಗ ಅದನ್ನು ನಾಶಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.

ನಿಯಮ ಪಾಲನೆ ಮಾಡದ ಟ್ವಿಟರ್ ಗೆ ದಂಡನೆಗೆ ಗುರಿ ಮಾಡಿ: ಐಟಿ ಉದ್ಯಮದ ಹಿರಿಯ ಟಿ.ವಿ. ಮೋಹನ್‌ದಾಸ್ ಪೈ
ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳನ್ನು ಪಾಲಿಸದ ಟ್ವಿಟರ್ ನ್ನು ದಂಡನೆಗೆ ಗುರಿ ಮಾಡಬೇಕು ಎಂದು ಐಟಿ ಉದ್ಯಮದ ಹಿರಿಯ ಟಿ.ವಿ ಮೋಹನ್ ದಾಸ್ ಪೈ ಹೇಳಿದ್ದಾರೆ.

ಕೋಮು ಸಂಘರ್ಷಕ್ಕೆ ಯತ್ನ: ಟ್ವೀಟರ್, ರಾಣಾ ಆಯೂಬ್ ಸೇರಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ ಯುಪಿ ಪೊಲೀಸರು!
ಘಾಜಿಯಾಬಾದ್‌ನಲ್ಲಿ ಕೆಲ ಮಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದ ವೃದ್ಧ ಮುಸ್ಲಿಂ ವ್ಯಕ್ತಿ ವಿಡಿಯೋ ವೈರಲ್ ಆಗಿದ್ದು ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್, ನ್ಯೂಸ್ ಪೋರ್ಟಲ್ ಮತ್ತು ಆರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

