
ಹೊಸ ಐಟಿ ನಿಯಮಗಳ ಉಲ್ಲಂಘನೆ: ಭಾರತದಲ್ಲಿ ಮಧ್ಯವರ್ತಿ ವೇದಿಕೆ ಸ್ಥಾನ ಕಳೆದುಕೊಂಡ ಟ್ವೀಟರ್!
ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವೀಟರ್ ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ ಭಾರತದಲ್ಲಿ ಮಧ್ಯವರ್ತಿ ವೇದಿಕೆಯ ಸ್ಥಾನಮಾನವನ್ನು ಕಳೆದುಕೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಭಾರತಕ್ಕೆ ನೀಡಿದ ಭರವಸೆಯಂತೆ ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿ ನೇಮಕ ಮಾಡಿದ ಟ್ವೀಟರ್!
ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು ಅಧಿಕಾರಿಯ ವಿವರಗಳನ್ನು ಶೀಘ್ರದಲ್ಲೇ ಐಟಿ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಟ್ವೀಟರ್ ತಿಳಿಸಿದೆ.

ಬಿಜೆಪಿ ಅವಧಿಯಲ್ಲಿ ಬೆಲೆ ಕಳೆದುಕೊಂಡಿರುವುದೆಂದರೆ ಅದು ಮನುಷ್ಯನ ಜೀವ: ಡಿ.ಕೆ. ಶಿವಕುಮಾರ್
ಬಿಜೆಪಿಯ ಅಧಿಕಾರಾವಧಿಯಲ್ಲಿ ಬೆಲೆ ಕಳೆದುಕೊಂಡಿರುವುದು ಎಂದರೆ ಅದು ಮನುಷ್ಯನ ಜೀವ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.

ಭಾರತದ ಖಡಕ್ ಎಚ್ಚರಿಕೆಗೆ ಮಣಿದು ಪಂಜಾಬಿ ಗಾಯಕ ಜಾಸ್ಸಿಬಿ, ಇತರ ಮೂವರ ಖಾತೆ ಬ್ಲಾಕ್ ಮಾಡಿದ ಟ್ವಿಟರ್!
ಭಾರತದಲ್ಲಿ ಕಾನೂನು ಪಾಲನೆ ಪ್ರತಿಕ್ರಿಯೆಯಾಗಿ ಪಂಜಾಬಿ ಗಾಯಕ ಜಾಸ್ಸಿಬಿ, ಹಿಪ್-ಹಾಪ್ ಕಲಾವಿದ ಎಲ್-ಫ್ರೆಶ್ ದಿ ಲಯನ್ ಮತ್ತು ಇನ್ನಿಬ್ಬರ ಖಾತೆಗಳನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಬ್ಲಾಕ್ ಮಾಡಿದೆ.

ಸರ್ಕಾರದ ಹೊಸ ಐಟಿ ನಿಯಮಾವಳಿಗಳನ್ನು ಅನುಸರಿಸಲು ಕಾಲಾವಕಾಶ ಕೇಳಿದ ಟ್ವಿಟರ್
ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್ ಭಾರತ ಸರ್ಕಾರದ ಹೊಸ ಐಟಿ ನಿಯಮಗಳನ್ನು ಅನುಸರಿಸುವುದಕ್ಕೆ ಹೆಚ್ಚಿನ ಕಾಲಾವಕಾಶವನ್ನು ಕೇಳಿದೆ.

'6 ತಿಂಗಳಿಂದ ನಿಷ್ಕ್ರಿಯ, ಅಪೂರ್ಣ ವಿವರದ ಖಾತೆಗಳು'; ‘ಬ್ಲೂ ಟಿಕ್’ ತೆಗೆದದ್ದಕ್ಕೆ ಕಾರಣ ನೀಡಿದ ಟ್ವಿಟರ್!
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಖಾತೆಗಳ ಬ್ಲೂಟಿಕ್ ತೆಗೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಖ್ಯಾತ ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್ ಇದೀಗ ತನ್ನ ಕಾರ್ಯಕ್ಕೆ ಕಾರಣಗಳನ್ನು ನೀಡಿದೆ.

ಐಟಿ ನಿಯಮ ಅನುಸರಣೆ: ಕೇಂದ್ರ ಸರ್ಕಾರದಿಂದ ಟ್ವಿಟರ್ ಗೆ 'ಕೊನೆಯ' ನೋಟಿಸ್!
ಹೊಸ ಐಟಿ ನಿಯಮಗಳನ್ನು ಕೂಡಲೇ ಪಾಲಿಸುವಂತೆ ಕೊನೆಯದಾದ ಅವಕಾಶವೊಂದನ್ನು ನೀಡಿ ಕೇಂದ್ರ ಸರ್ಕಾರ ಶನಿವಾರ ಟ್ವಿಟರ್ ಗೆ ನೋಟಿಸ್ ನೀಡಿದೆ.ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾದರೆ ಐಟಿ ಕಾಯ್ದೆಯಡಿ ಕಾನೂನು ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳಲು ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಖಾತೆಯಿಂದ ಬ್ಲೂ ಟಿಕ್ ಮಾರ್ಕ್ ತೆಗೆದು ಮತ್ತೆ ಕೊಟ್ಟ ಟ್ವಿಟ್ಟರ್!
ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಬೆಳಗ್ಗೆ ನೀಲಿ ಬಣ್ಣದ ಟಿಕ್ ಮಾರ್ಕ್ ತೆಗೆದಿದ್ದ ಟ್ವಿಟ್ಟರ್ ಈಗ ಮರು ನೀಡಿದೆ.

ಎನ್‌ಸಿಇಆರ್‌ಟಿ ಪುಸ್ತಕದಲ್ಲಿ ಈಶಾನ್ಯದ ಅಧ್ಯಾಯಕ್ಕೆ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರಿಂದ ಟ್ವಿಟರ್‌ನಲ್ಲಿ 'ಸುನಾಮಿ' ಸೃಷ್ಟಿ!
ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಈಶಾನ್ಯ ಪ್ರದೇಶದ ಭೌಗೋಳಿಕತೆ, ಸಂಸ್ಕೃತಿ, ಜನಾಂಗೀಯತೆ ಮತ್ತು ಜನರ ಜೀವನಶೈಲಿ ಬಗ್ಗೆ ಒಂದು ಅಧ್ಯಾಯವನ್ನು ಸೇರಿಸಬೇಕೆಂದು ಒತ್ತಾಯಿಸಿ ಈಶಾನ್ಯದ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಇತರರು ಟ್ವೀಟ್ ಮಾಡುವ ಮೂಲಕ 'ಟ್ವಿಟರ್‌ನಲ್ಲಿ ಸುನಾಮಿ' ಎಬ್ಬಿಸಿದರು.

