Treatment

ಹೊಸ ಮಾರ್ಗಸೂಚಿಯೊಂದಿಗೆ ಆಸ್ಪತ್ರೆಗಳಲ್ಲಿ ಸರಳಗೊಂಡ ಕೋವಿಡ್-19 ಚಿಕಿತ್ಸೆ!
ಕಳೆದ ಜೂನ್ ತಿಂಗಳು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿರುವ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್ಎಸ್) ಹೊಸ ಮಾರ್ಗಸೂಚಿ ಹೊರಡಿಸಿದ ಹಿನ್ನೆಲೆಯಲ್ಲಿ ಕೋವಿಡ್-19 ಚಿಕಿತ್ಸೆ ಸಂಬಂಧ ರಾಜ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಅನುಸರಿಸುತ್ತಿದ್ದ ನಿಯಮಗಳು ಇದೀಗ ಸರಳಗೊಂಡಂತಾಗಿದೆ.

ಕೋವಿಡ್-19 ವಿರುದ್ಧ ಹೋರಾಡಲು ಪ್ರತಿಕಾಯ ಕಾಕ್ಟೈಲ್ ಆಶಾಕಿರಣ: ಆದರೆ ದುಬಾರಿ ಬೆಲೆ!
ಸೌಮ್ಯ, ಮಧ್ಯಮ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಪ್ರತಿಕಾಯ ಕಾಕ್ಟೈಲ್ ನ್ನು ಅನುಮೋದಿಸಿದ ಒಂದು ತಿಂಗಳಲ್ಲಿ ಗಮನಾರ್ಹ ಫಲಿತಾಂಶಗಳು ಪ್ರಕಟವಾಗಿದೆ ಎಂದು ಹಲವಾರು ಖಾಸಗಿ ಆಸ್ಪತ್ರೆಗಳು ಹೇಳಿವೆ.

ರಾಜ್ಯದಲ್ಲಿ ಈವರೆಗೆ 1,784 ಬ್ಲ್ಯಾಕ್ ಫಂಗಸ್ ಪ್ರಕರಣ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್
ರಾಜ್ಯದಲ್ಲಿ ಈವರೆಗೆ 1,784 ಕಪ್ಪು ಶಿಲೀಂಧ್ರ ಪ್ರಕರಣ ಕಂಡುಬಂದಿದ್ದು, 62 ಮಂದಿ ಗುಣಮುಖರಾಗಿದ್ದಾರೆ. ಇದಕ್ಕೆ ಬೇಕಾದ ಔಷಧಿಯನ್ನೂ ಪಡೆಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬ್ಲ್ಯಾಕ್ ಫಂಗಸ್ ರೋಗ ಪತ್ತೆ, ಚಿಕಿತ್ಸಾ ವಿಧಾನಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ಮ್ಯೂಕೊರ್‌ಮೈಕೊಸಿಸ್ (ಕಪ್ಪು ಶಿಲೀಂಧ್ರ) ಚಿಕಿತ್ಸಾ ವಿಧಾನಗಳ ಬಗ್ಗೆ ಸೂಕ್ತ ನೀತಿ ರೂಪಿಸಲಾಗುತ್ತಿದೆ.

ಕೊರೋನಾ ಗೆದ್ದ 103 ವರ್ಷದ ಅಜ್ಜನ ಅನುಭವ ಕೇಳಿ!
ಕೊರೋನಾ ಸೋಂಕಿಗೆ ತುತ್ತಾದ ಇಳಿವಯಸ್ಸಿನವರು ಆಸ್ಪತ್ರೆಗೆ ದಾಖಲಾದವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದವರು ಕಡಿಮೆ ಮಂದಿ. ಅಂಥವರಲ್ಲಿ 103 ವರ್ಷದ ಈ ಅಜ್ಜ ಗುಣಮುಖರಾಗಿ ಮನೆಗೆ ಬಂದಿದ್ದು ತಮಗೆ ಸಿಕ್ಕಿದ ಚಿಕಿತ್ಸೆ ಅನುಭವವನ್ನು ಹೇಳಿಕೊಂಡಿದ್ದಾರೆ.

ಹುಬ್ಬಳ್ಳಿ ಕಿಮ್ಸ್‌ನಲ್ಲಿ ನಿರೀಕ್ಷಿತ ಸಾಮರ್ಥ್ಯದ ಕೋವಿಡ್ ಚಿಕಿತ್ಸೆ ಸಿಗುತ್ತಿಲ್ಲ: ಸಚಿವ ಸುಧಾಕರ್
ಉತ್ತರ ಕರ್ನಾಟಕ ಭಾಗದ ಆರೋಗ್ಯ ವ್ಯವಸ್ಥೆಯ ಕೇಂದ್ರದಂತೆ ಕಾರ್ಯನಿರ್ವಹಿಸಬೇಕಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಕೋವಿಡ್ ವಿಷಯದಲ್ಲಿ ನಿರೀಕ್ಷೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಚಿವ ಡಾ.ಕೆ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಮಾರಣಾಂತಿಕ' ಬ್ಲ್ಯಾಕ್ ಫಂಗಸ್ ಅಂದರೆ ಏನು? ಕೋವಿಡ್-19 ಸೋಂಕಿತರು ಇದರ ಬಗ್ಗೆ ಏಕೆ ಹೆಚ್ಚಿನ ನಿಗಾ ವಹಿಸಬೇಕು?
ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರವು ಮ್ಯೂಕಾರ್ಮೈಸೆಟ್ಸ್ ಎಂದು ಕರೆಯಲ್ಪುಡುವ ಶಿಲೀಂಧ್ರ ಅಚ್ಚುಗಳ ಗುಂಪಿನಿಂದ ಉಂಟಾಗುತ್ತದೆ.

ಕಪ್ಪು ಶಿಲೀಂದ್ರ ಸೋಂಕಿಗೆ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ: ಡಾ. ಕೆ.ಸುಧಾಕರ್
ಕೊರೋನಾ ಸೋಂಕಿನಿಂದ ಗುಣಮುಖರಾದ ನಂತರ ಕೆಲವರಲ್ಲಿ ಕಂಡು ಬರುತ್ತಿರುವ ಕಪ್ಪು ಶಿಲೀಂದ್ರ ಸೋಂಕಿನ ಚಿಕಿತ್ಸೆಗೆ ಅಂತರಶಿಸ್ತೀಯ ವಿಧಾನದ ಅವಶ್ಯಕತೆಯಿದ್ದು ಇಎನ್‌ಟಿ ತಜ್ಞರು, ನೇತ್ರಶಾಸ್ತ್ರಜ್ಞರು, ಅರಿವಳಿಕೆ ವೈದ್ಯರು ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಜ್ಞರ ಅಗತ್ಯವಿದೆ ಎಂದು ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

ಬ್ಲ್ಯಾಕ್ ಫಂಗಸ್ ಪೀಡಿತರಿಗೆ ರಹಸ್ಯವಾಗಿ ಚಿಕಿತ್ಸೆ ನೀಡುವಂತಿಲ್ಲ, ಮಾಹಿತಿ ಮುಚ್ಚಿಟ್ಟರೆ ಕಠಿಣ ಕ್ರಮ: ಡಾ. ಅಶ್ವತ್ಥ ನಾರಾಯಣ
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್'ಗೆ ತುತ್ತಾಗುವವರಿಗೆ ಆಸ್ಪತ್ರೆಗಳು ಗುಪ್ತವಾಗಿ ಚಿಕಿತ್ಸೆ ನೀಡುವಂತಿಲ್ಲ ಹಾಗೂ ಈ ಕಾಯಿಲೆಗೆ ತುತ್ತಾದವರು ಕೂಡಲೇ ಸರಕಾರಕ್ಕೆ ಮಾಹಿತಿ ನೀಡಲೇಬೇಕು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರು ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

