ಕೊರೋನಾ ಗೆದ್ದ 103 ವರ್ಷದ ಅಜ್ಜನ ಅನುಭವ ಕೇಳಿ!
ಕೊರೋನಾ ಸೋಂಕಿಗೆ ತುತ್ತಾದ ಇಳಿವಯಸ್ಸಿನವರು ಆಸ್ಪತ್ರೆಗೆ ದಾಖಲಾದವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದವರು ಕಡಿಮೆ ಮಂದಿ. ಅಂಥವರಲ್ಲಿ 103 ವರ್ಷದ ಈ ಅಜ್ಜ ಗುಣಮುಖರಾಗಿ ಮನೆಗೆ ಬಂದಿದ್ದು ತಮಗೆ ಸಿಕ್ಕಿದ ಚಿಕಿತ್ಸೆ ಅನುಭವವನ್ನು ಹೇಳಿಕೊಂಡಿದ್ದಾರೆ.

ಬೆಂಗಳೂರು: ಕೊರೋನಾ ಸೋಂಕಿಗೆ ತುತ್ತಾದ ಇಳಿವಯಸ್ಸಿನವರು ಆಸ್ಪತ್ರೆಗೆ ದಾಖಲಾದವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದವರು ಕಡಿಮೆ ಮಂದಿ. ಅಂಥವರಲ್ಲಿ 103 ವರ್ಷದ ಈ ಅಜ್ಜ ಗುಣಮುಖರಾಗಿ ಮನೆಗೆ ಬಂದಿದ್ದು ತಮಗೆ ಸಿಕ್ಕಿದ ಚಿಕಿತ್ಸೆ ಅನುಭವವನ್ನು ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಶಾಂತಿನಗರದಲ್ಲಿ ಪ್ರೈಮ್ ರೋಸ್ ಕೋವಿಡ್ ಕೇರ್ ಸೆಂಟರ್ ನಲ್ಲಿ 103 ವರ್ಷದ ಶರಣಯ್ಯ ಎಂಬುವವರು ದಾಖಲಾಗಿದ್ದರಂತೆ. ಸಮಯಕ್ಕೆ ಸರಿಯಾಗಿ ವೈದ್ಯರು ಮತ್ತು ದಾದಿಯರಿಂದ ಚಿಕಿತ್ಸೆ ದೊರಕಿ ಗುಣಮುಖರಾಗಿ ಬಂದಿದ್ದಾರೆ. ಈ ಕುರಿತು ಸ್ವತಃ ಅವರೇ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಆಸ್ಪತ್ರೆ ವೈದ್ಯರು, ನರ್ಸ್ ಗಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಉತ್ತಮವಾದ ವ್ಯವಸ್ಥೆ ಮಾಡಿದ್ದರು, ಆಸ್ಪತ್ರೆಯ ಕೊಡುಗೆ ಸ್ಮರಿಸುತ್ತೇನೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
103 ವರ್ಷದ ಈ ಹಿರಿಯಜ್ಜ ಕೋವಿಡ್ ನಿಂದ ಗುಣಮುಖರಾಗಿ ಬಂದಿದ್ದು ನೋಡಿದರೆ ಕೋವಿಡ್ ಸೋಂಕಿತ ಚಿಕ್ಕವಯಸ್ಸಿನವರಿಗೆ ಸ್ಪೂರ್ತಿಯಾಗಲೇಬೇಕು. ಧನಾತ್ಮಕ ಚಿಂತನೆ, ಗಟ್ಟಿ ಮನಸ್ಸು ಇಲ್ಲಿ ಮುಖ್ಯವಾಗುತ್ತದೆ ಎಂದು ಈ ಅಜ್ಜನನ್ನು ಕಂಡರೆ ಗೊತ್ತಾಗುತ್ತದೆಯಲ್ಲವೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


