train accident

ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ತಾಯಿ, ಮಗ ಸಾವು!
ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ತಾಯಿ, ಮಗ ಸಾವನ್ನಪ್ಪಿದ ಘಟನೆ ನಗರದ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ: ಹಳಿ ದಾಟುತ್ತಿದ್ದವನ ಮೇಲೆ ಹರಿದ ರೈಲು: ಹಠಾತ್ ಬ್ರೇಕ್ ನಿಂದ ಎಂಜಿನ್ ಗೆ ಪೆಟ್ಟು, ಸಂಚಾರ ವಿಳಂಬ
ಯುವಕನೊಬ್ಬ ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲು ಹರಿದ ಘಟನೆ ಯಲಿಯೂರು-ಮಂಡ್ಯ ರೈಲ್ವೆ ಮಾರ್ಗದಲ್ಲಿ ಸಂಭವಿಸಿದೆ. ಮೈಸೂರು-ಬೆಂಗಳೂರು ಸಂಗೊಳ್ಳಿ ರಾಯಣ್ಣ ಮೆಮು ಪ್ರಯಾಣಿಕ ರೈಲು ಸಂಖ್ಯೆ 06258 ನಲ್ಲಿ ಕಳೆದ ಅಪರಾಹ್ನ ಈ ದುರಂತ ಸಂಭವಿಸಿದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಎರಡು ರೈಲುಗಳ ಪರಸ್ಪರ ಡಿಕ್ಕಿ: 30 ಪ್ರಯಾಣಿಕರು ಸಾವು, 50 ಮಂದಿಗೆ ಗಾಯ
ಪಾಕಿಸ್ತಾನದ ಗೊಟ್ಕಿ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಮತ್ತು ಮಿಲ್ಲಟ್ ಎಕ್ಸ್ ಪ್ರೆಸ್ ಪ್ರಯಾಣಿಕ ರೈಲು ಮಧ್ಯೆ ಡಿಕ್ಕಿ ಸಂಭವಿಸಿ ಕನಿಷ್ಠ 30 ಪ್ರಯಾಣಿಕರು ಮೃತಪಟ್ಟ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗೊಟ್ಕಿ ಜಿಲ್ಲೆಯಲ್ಲಿ ನಡೆದಿದೆ.

ಔರಂಗಾಬಾದ್: ಹಳಿ ಮೇಲೆ ಮಲಗಿದ್ದವರ ಮೇಲೆ ಗೂಡ್ಸ್ ರೈಲು ಹರಿದು 16 ಮಂದಿ ವಲಸೆ ಕಾರ್ಮಿಕರ ಸಾವು
ವಲಸೆ ಕಾರ್ಮಿಕರು ಊರಿಗೆ ಹೋಗುವ ಸಮಸ್ಯೆ ದೇಶಾದ್ಯಂತ ಇರುವ ಸಮಯದಲ್ಲಿ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಗೂಡ್ಸ್ ರೈಲು ಹಳಿ ಮೇಲೆ ಹರಿದು 16 ಮಂದಿ ವಲಸೆ ಕಾರ್ಮಿಕರು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ರೈಲು ಅಪಘಾತ: ಪಂಜಾಬ್ ನಲ್ಲಿ ಜಮ್ಮು- ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಒಬ್ಬ ವ್ಯಕ್ತಿ ಸಾವು
ಪಂಜಾಬ್ ನ ಸಿರ್ಹಿಂದ್ ಸಮೀಪ ಶನಿವಾರ ರಾತ್ರಿ ಜಮ್ಮು-ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.

ಕಾನ್ಪುರ್ ಸಮೀಪ 'ಪೂರ್ವ ಎಕ್ಸ್ ಪ್ರೆಸ್' ರೈಲು ಅಪಘಾತ, 14 ಮಂದಿಗೆ ಗಾಯ
ಉತ್ತರ ಪ್ರದೇಶದ ಕಾನ್ಪುರ್ ಸಮೀಪ ಪೂರ್ವ ದೆಹಲಿ-ಹೌರಾ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು ಕನೀಷ್ಟ 14 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅಮೃತಸರ ದುರಂತ: ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ- ರೈಲ್ವೇ ಇಲಾಖೆ ಸ್ಪಷ್ಟನೆ
ಅಮೃತಸರ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ರೈಲ್ವೇ ಇಲಾಖೆ, ಕಾರ್ಯಕ್ರಮಕ್ಕೆ ಅನುಮತಿಯನ್ನೇ ನೀಡಿರಲಿಲ್ಲ, ಆದರೂ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಪ್ರಕರಣದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಶನಿವಾರ ಹೇಳಿದೆ...

ರಾವಣ ದಹನದ ವೇಳೆ ಅಮೃತಸರದಲ್ಲಿ ಘೋರ ದುರಂತ: ಸಾವಿನ ಸಂಖ್ಯೆ 61ಕ್ಕೆ ಏರಿಕೆ
ಪಂಜಾಬ್ ರಾಜ್ಯದ ಅಮೃತಸರ ಬಳಿ ಶುಕ್ರವಾರ ಸಂಜೆ ರಾವಣ ದಹನ ವೀಕ್ಷಿಸುತ್ತಿದ್ದವ ಮೇಲೆ ರೈಲು ಹರಿದು ದುರ್ಘಟನೆ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಧಿಸಿದಂತೆ ಮೃತಪಟ್ಟವರ ಸಂಖ್ಯೆ ಇದೀಗ 61ಕ್ಕೆ...

ಅಮೃತಸರ್ ರೈಲು ದುರಂತ: ಮೃತ ಕುಟುಂಬಕ್ಕೆ ರೂ.2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಅಮೃತಸರ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಆರ್ಥಿಕ ಪರಿಹಾರ ನೀಡಲು ಪ್ರಧಾನಿ ನರೇಂದ್ರ ಮೋದಿ ಸಮ್ಮತಿಸಿದ್ದಾರೆ...

