train accident

ಬಾಲಸೋರ್ ರೈಲು ಅಪಘಾತ ಪ್ರಕರಣ; 3 ರೈಲ್ವೆ ಉದ್ಯೋಗಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಸಿಬಿಐ
ಜೂನ್ 2ರಂದು ನಡೆದ ಭೀಕರ ಬಾಲಸೋರ್ ತ್ರಿವಳಿ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಮೂವರು ರೈಲ್ವೆ ಉದ್ಯೋಗಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಶನಿವಾರ ಚಾರ್ಜ್ ಶೀಟ್ ಸಲ್ಲಿಸಿದೆ. ಆರೋಪಗಳಲ್ಲಿ ನರಹತ್ಯೆ ಮತ್ತು ಸಾಕ್ಷ್ಯ ನಾಶವೂ ಸೇರಿದೆ.

ಒಡಿಶಾ ರೈಲು ದುರಂತ: ಬೆಂಗಳೂರು ರೈಲ್ವೆ ವಿಭಾಗದಿಂದ ಸುರಕ್ಷತೆಗೆ ಆದ್ಯತೆ, ಅಧಿಕಾರಿಗಳಿಂದ ಹೆಚ್ಚುವರಿ ಗಂಟೆಗಳ ಕರ್ತವ್ಯ!
ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತದ ನಂತರ ಬೆಂಗಳೂರು ರೈಲ್ವೆ ವಿಭಾಗವು ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಕೆಲಸ ಮಾಡುತ್ತಿದೆ. ವಿಭಾಗದ ಅಧಿಕಾರಿಗಳು ಕಳೆದ ಹದಿನೈದು ದಿನಗಳಿಂದ ತಮ್ಮ ಕರ್ತವ್ಯದ ಅವಧಿ ಮೀರಿ ಕೆಲಸ ಮಾಡುತ್ತಿದ್ದು, ಸುರಕ್ಷತೆಯಲ್ಲಿ ಯಾವುದೇ ರಾಜಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಒಡಿಶಾ: ಹಳಿತಪ್ಪಿದ ಗೂಡ್ಸ್ ರೈಲಿನ ನಾಲ್ಕು ಬೋಗಿಗಳು, ಬಾಲಸೋರ್‌ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ
ಒಡಿಶಾದ ರಾಯಗಢ ಜಿಲ್ಲೆಯ ಅಂಬೋಡಾಲ ಯಾರ್ಡ್‌ನಲ್ಲಿರುವ ವೇದಾಂತ ಲಿಮಿಟೆಡ್‌ನ ಘಟಕಕ್ಕೆ ತೆರಳುತ್ತಿದ್ದಾಗ ಶನಿವಾರ ಸರಕು ಸಾಗಣೆ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿವೆ. ಘಟನೆ ಬಗ್ಗೆ ಪೂರ್ವ ಕರಾವಳಿ ರೈಲ್ವೆಯಿಂದ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಒಡಿಶಾ ರೈಲು ಅಪಘಾತ; ದುರಂತದಲ್ಲಿ ಮಡಿದವರ ಮೃತದೇಹಗಳನ್ನಿಟ್ಟಿದ್ದ ಶಾಲೆ ಕೆಡವಲು ಸರ್ಕಾರ ಮುಂದು!
ಜೂನ್ 2ರಂದು ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಇಡಲು ತಾತ್ಕಾಲಿಕ ಶವಾಗಾರವಾಗಿ ಬಳಸಲಾಗಿದ್ದ 65 ವರ್ಷ ಹಳೆಯ ಬಹನಾಗ ಹೈಸ್ಕೂಲ್ ಕಟ್ಟಡವನ್ನು ಕೆಡವಲು ಒಡಿಶಾ ಸರ್ಕಾರ ಶುಕ್ರವಾರ ಆರಂಭಿಸಿದೆ.

ತ್ರಿವಳಿ ರೈಲು ಅಪಘಾತ: ಪಶ್ಚಿಮ ಬಂಗಾಳದ ಶಾಲಿಮಾರ್‌ನಿಂದ ಚೆನ್ನೈಗೆ ಕೋರಮಂಡಲ್ ಎಕ್ಸ್‌ಪ್ರೆಸ್ ಪ್ರಯಾಣ
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದ ನಂತರ ಇದೇ ಮೊದಲ ಬಾರಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಬುಧವಾರ ತನ್ನ ಸೇವೆಗಳನ್ನು ಪುನರಾರಂಭಿಸಿತು ಮತ್ತು ಪಶ್ಚಿಮ ಬಂಗಾಳದ ಶಾಲಿಮಾರ್ ನಿಲ್ದಾಣದಿಂದ ಚೆನ್ನೈಗೆ ಪ್ರಯಾಣ ಬೆಳೆಸಿತು.

ಮೃತದೇಹಗಳ ಗುರುತು ಪತ್ತೆ ಸವಾಲು; 33 ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ದೆಹಲಿಗೆ ಕಳುಹಿಸಿದ ಒಡಿಶಾ ಸರ್ಕಾರ
ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟ ಹಲವರ ಗುರುತು ಪತ್ತೆಹಚ್ಚುವುದು ಇದೀಗ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಒಂದೇ ಮೃತದೇಹಕ್ಕೆ ಹಲವಾರು ಜನರು ಹಕ್ಕು ಸಾಧಿಸುತ್ತಿದ್ದು, ಒಡಿಶಾ ಸರ್ಕಾರವು ಮೃತರ ಗುರುತಿಗಾಗಿ ಡಿಎನ್‌ಎ ಪರೀಕ್ಷೆಗಾಗಿ 33 ಮಾದರಿಗಳನ್ನು ದೆಹಲಿಯ ಏಮ್ಸ್‌ಗೆ ಕಳುಹಿಸಿದೆ.

ಕೇಂದ್ರ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್ ವಿಲೀನಗೊಳಿಸಿದ್ದು ಎನ್‌ಡಿಎ ಸರ್ಕಾರದ 'ದೊಡ್ಡ ಪ್ರಮಾದ': ವೀರಪ್ಪ ಮೊಯ್ಲಿ
ಒಡಿಶಾ ರೈಲು ದುರಂತದ ಹಿನ್ನೆಲೆಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಎಂ ವೀರಪ್ಪ ಮೊಯ್ಲಿ ಅವರು ಮಂಗಳವಾರ, 2017 ರಲ್ಲಿ ಕೇಂದ್ರ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್ ಅನ್ನು ವಿಲೀನ ಮಾಡಿದ್ದು ಎನ್‌ಡಿಎ ಸರ್ಕಾರದ 'ದೊಡ್ಡ ಪ್ರಮಾದ' ಎಂದಿದ್ದು, ಪ್ರತ್ಯೇಕ ಬಜೆಟ್ ಮಂಡಿಸುವ ಅಭ್ಯಾಸವನ್ನು ಮರಳಿ ತರಲು ಕರೆ ನೀಡಿದರು.

ಒಡಿಶಾ ರೈಲು ದುರಂತ: ಸಿಬಿಐನಿಂದ ತನಿಖೆ ಆರಂಭ, ಸ್ಥಳಕ್ಕೆ ಅಧಿಕಾರಿಗಳ ಭೇಟಿ
278 ಜನರ ಸಾವಿಗೆ ಕಾರಣವಾದ ಒಡಿಶಾದ ಬಾಲಸೋರ್ ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (CBI) ಮಂಗಳವಾರ ಅಧಿಕೃತವಾಗಿ ಆರಂಭಿಸಿದೆ.

ಒಡಿಶಾ ತ್ರಿವಳಿ ರೈಲು ದುರಂತ: ಎಫ್‌ಐಆರ್ ದಾಖಲಿಸಿದ ಸಿಬಿಐ, ತನಿಖೆ ಚುರುಕು
ಒಡಿಶಾ ತ್ರಿವಳಿ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಮಂಗಳವಾರ ತಿಳಿಸಿದೆ.

