ರಾವಣ ದಹನದ ವೇಳೆ ಅಮೃತಸರದಲ್ಲಿ ಘೋರ ದುರಂತ: ಸಾವಿನ ಸಂಖ್ಯೆ 61ಕ್ಕೆ ಏರಿಕೆ
ಪಂಜಾಬ್ ರಾಜ್ಯದ ಅಮೃತಸರ ಬಳಿ ಶುಕ್ರವಾರ ಸಂಜೆ ರಾವಣ ದಹನ ವೀಕ್ಷಿಸುತ್ತಿದ್ದವ ಮೇಲೆ ರೈಲು ಹರಿದು ದುರ್ಘಟನೆ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಧಿಸಿದಂತೆ ಮೃತಪಟ್ಟವರ ಸಂಖ್ಯೆ ಇದೀಗ 61ಕ್ಕೆ...

Published On :
ಅಮೃತಸರ: ಪಂಜಾಬ್ ರಾಜ್ಯದ ಅಮೃತಸರ ಬಳಿ ಶುಕ್ರವಾರ ಸಂಜೆ ರಾವಣ ದಹನ ವೀಕ್ಷಿಸುತ್ತಿದ್ದವ ಮೇಲೆ ರೈಲು ಹರಿದು ದುರ್ಘಟನೆ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಧಿಸಿದಂತೆ ಮೃತಪಟ್ಟವರ ಸಂಖ್ಯೆ ಇದೀಗ 61ಕ್ಕೆ ಏರಿಕೆಯಾಗಿದೆ.
ರೈಲ್ವೆ ಹಳಿ ಸಮೀಪದ ಮೈದಾನದಲ್ಲಿ ದಸರಾ ಪ್ರಯುಕ್ತ ರಾವಣ ದಹನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾವಣನಿಗೆ ಬೆಂಕಿ ಹಚ್ಚಿ ಪಟಾಕಿ ಸಿಡಿಯಲು ಆರಂಭಿಸಿದಾಗ ದೂರದಲ್ಲಿ ನಿಂತಿದ್ದ ಜನ ರೈಲ್ವೆ ಹಳಿ ಬಳಿ ಬಂದಿದ್ದರು. ಈ ವೇಳೆ ಎರಡೂ ದಿಕ್ಕಿನಿಂದಲೂ ರೈಲೂ ವೇಗವಾಗಿ ಆಗಮಿಸಿದೆ. ಆದರೆ, ಪಟಾಕಿ ಸದ್ದಿನಿಂದ ರೈಲು ಬಂದಿದ್ದು, ಜನರಿಗೆ ತಿಳಿದೇ ಇಲ್ಲ. ಹಳಿ ಮೇಲೆ ನಿಂತಿದ್ದ ಜನರ ಎರಡೂ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ 72ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಇದೀಗ ಸಾವಿನ ಸಂಖಅಯೆ 61ಕ್ಕೆ ಏರಿಕೆಯಾಗಿದೆ.
ಅಮೃತಸರದಲ್ಲಿ ನಡೆದ ರೈಲು ಅಪಘಾತದ ಸುದ್ದಿ ತಿಳಿದ ಕೂಡಲೇ ಇದೀಗ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಅಮೆರಿಕಾದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ಭಾರತಕ್ಕೆ ಆಗಮಿಸುತ್ತಿದ್ದಾರೆ.
ರೈಲು ದುರಂತದ ಹಿನ್ನಲೆಯಲ್ಲಿ ಪಂಜಾಬ್ ಸರ್ಕಾರ ಶನಿವಾರ ಒಂದು ದಿನದ ಶೋಕಾಚರಣೆ ಘೋಷಿಸಿದ್ದು, ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳಲ್ಲಿ ಬಂದ್ ಆಚರಿಸಲು ಸೂಚಿಸಿದೆ.
ಈ ನಡುವೆ ಇಸ್ರೇಲ್ ತೆರಳಬೇಕಿದ್ದ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ತಮ್ಮ ಪ್ರವಾಸವನ್ನು ಮುಂದೂಡಿ ಅಮೃತಸರಕ್ಕೆ ವಾಪಸ್ಸಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದುರಂತdeath tolltragedyಸಾವಿನ ಸಂಖ್ಯೆtrain accidentರೈಲು ಅಪಘಾತAmritsar train accidentDussehra tragedyಅಮೃತಸರ ರೈಲು ಅಪಘಾತದಸರಾ ದುರಂತ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


