trailer Release

'ವಿದ್ಯಾರ್ಥಿ ವಿದ್ಯಾಥಿನಿಯರೇ' ಟ್ರೇಲರ್ ಎರಡು ಭಾಗಗಳಲ್ಲಿ ಬಿಡುಗಡೆ; ಸೈಡ್ ಎ ರಿಲೀಸ್
ನಟನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವ ರಾಪ್ ಗಾಯಕ ಮತ್ತು ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಬಿಡುಗಡೆಗೆ ಸಜ್ಜಾಗಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು. ಈಮಧ್ಯೆ, ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿದ್ದು, ಕಾಲೇಜು ಕ್ಯಾಂಪಸ್‌ನ ಹಿನ್ನೆಲೆಯಲ್ಲಿ ನಡೆಯುತ್ತದೆ.

ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಟ್ರೇಲರ್ ಬಿಡುಗಡೆ; ಗಮನ ಸೆಳೆದ ಡಿಜಿಟಲ್ ಡಿ-ಏಜಿಂಗ್!
ಜೈಲರ್‌ನಲ್ಲಿನ ತಮ್ಮ ಮನೋಜ್ಞ ಅಭಿನಯದಿಂದಾಗಿ ಹೊಸ ಅಭಿಮಾನಿಗಳನ್ನು ಸಂಪಾದಿಸಿದ್ದ ನಟ ಶಿವರಾಜ್‌ಕುಮಾರ್ ಈಗ ಘೋಸ್ಟ್ ಸಿನಿಮಾದಲ್ಲಿ ಮತ್ತೆ ಗಮನ ಸೆಳೆದಿದ್ದಾರೆ. ಬಹುನಿರೀಕ್ಷಿತ ಟ್ರೇಲರ್ ಅಕ್ಟೋಬರ್ 1ರಂದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಮೇಘನಾ ರಾಜ್ ನಟನೆಯ 'ತತ್ಸಮ ತದ್ಭವ' ಟ್ರೇಲರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ, ಡಾಲಿ ಧನಂಜಯ್!
ಹಲವು ವರ್ಷಗಳ ವಿರಾಮದ ನಂತರ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಿರುವ ನಟಿ ಮೇಘನಾ ರಾಜ್ ಸರ್ಜಾ ಅವರ ನಟನೆಯ ‘ತತ್ಸಮ ತದ್ಭವ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಧ್ರುವ ಸರ್ಜಾ ಹಾಗೂ ಡಾಲಿ ಧನಂಜಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.

ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ, ಟ್ರೈಲರ್ ಬಿಡುಗಡೆಗೆ ದಿನಾಂಕ ನಿಗದಿ
ಸಲಾರ್‌ನ ಟೀಸರ್‌ಗೆ ಭಾರಿ ಪ್ರತಿಕ್ರಿಯೆ ಬಂದ ನಂತರ, ಚಿತ್ರತಂಡ ಕೃತಜ್ಞತೆಯ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಆಗಸ್ಟ್ ಅಂತ್ಯದ ವೇಳೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ ಎಂದೂ ಅವರು ಘೋಷಿಸಿದ್ದಾರೆ. ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಸೆಪ್ಟೆಂಬರ್ 28 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

'ಶಿವಾಜಿ ಸುರತ್ಕಲ್ 2' ಟ್ರೈಲರ್ ಬಿಡುಗಡೆ; ಮತ್ತೆ ಪತ್ತೇದಾರಿಯಾಗಿ ಕಾಣಿಸಿಕೊಂಡ ನಟ ರಮೇಶ್ ಅರವಿಂದ್
ರಮೇಶ್ ಅರವಿಂದ್ ಅವರು ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ (2020) ಚಿತ್ರದ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು. ಇದೀಗ ನಟ ಮತ್ತು ನಿರ್ದೇಶಕ ಎರಡನೇ ಕಂತಿನೊಂದಿಗೆ ಮರಳಿದ್ದು, ಇದು ಮಾಯಾವಿಯ ನಿಗೂಢ ಪ್ರಕರಣದ ಸುತ್ತ ಸುತ್ತುತ್ತದೆ.

ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ '19.20.21' ಸಿನಿಮಾದ ಟ್ರೈಲರ್ ಬಿಡುಗಡೆ
ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರ 'ಆಕ್ಟ್ 1978' ರ ತಯಾರಕರು ಇದೀಗ ತಮ್ಮ ಮುಂಬರುವ '19.20.21' ಕನ್ನಡ ಚಲನಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆ ನಿರ್ದೇಶನದ ಈ ಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ.

'ಪದವಿ ಪೂರ್ವ' ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ನಟ ಅಭಿಷೇಕ್ ಅಂಬರೀಶ್
ಹಾಡುಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ಪದವಿ ಪೂರ್ವ ಸಿನಿಮಾದ ಟ್ರೈಲರ್ ಡಿ.21ರಂದು ಬಿಡುಗಡೆಯಾಗಲಿದ್ದು, ನಟ ಅಭಿಷೇಕ್ ಅಂಬರೀಶ್ ಅವರು ಬಿಡುಗಡೆ ಮಾಡಲಿದ್ದಾರೆ.

ಗುರು ಶಿಷ್ಯರು ಟ್ರೈಲರ್ ಬಿಡುಗಡೆ; ಸಿನಿಮಾದಲ್ಲಿ ದೇಸೀ ಕ್ರೀಡೆ ಕ್ರೀಡೆ ಖೋ-ಖೋ ಖದರ್
80ರ ದಶಕದಲ್ಲಿ ಇದೇ ಶೀರ್ಷಿಕೆಯ ಚಿತ್ರವೊಂದು ನಟ ದ್ವಾರಕೀಶ್ ನಿರ್ಮಿಸಿ ಹಿಟ್ ಆಗಿದ್ದನ್ನು ಗಮನಿಸಬಹುದು. ಹೊಸ ಚಿತ್ರವನ್ನು ಶರಣ್ ಅವರ ಲಡ್ಡು ಸಿನಿಮಾಸ್ ಬ್ಯಾನರ್ ಮತ್ತು ತರುಣ್ ಕಿಶೋರ್ ಸುಧೀರ್ ತರುಣ್ ಕಿಶೋರ್ ಕ್ರಿಯೇಟಿವೇಜ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಸಿನಿಮಾವು ಮರೆತುಹೋದ ದೇಸೀ ಆಟದ ಮೇಲೆ ಬೆಳಕು ಚೆಲ್ಲುತ್ತದೆ.

ಹಿರಿಯ ನಟ ಅವಿನಾಶ್ ಅವರಿಗೆ ದಚ್ಚು ಬೈದಿದ್ದೇಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರಗಳಿಗೆ ಸದಾ ಬೆಂಬಲ ನೀಡುತ್ತ ಬಂದವರು, ಹೀಗಾಗಿ ದೊಡ್ಡ ಮನಸ್ಸಿನ ನಟ ಅನ್ನೋ ಪ್ರಖ್ಯಾತಿಗೂ ಪಾತ್ರರಾಗಿದ್ದಾರೆ.

