ಸಿನಿಮಾ ಸುದ್ದಿ

ಹಿರಿಯ ನಟ ಅವಿನಾಶ್‍ ಅವರಿಗೆ ದಚ್ಚು ಬೈದಿದ್ದೇಕೆ? 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರಗಳಿಗೆ ಸದಾ ಬೆಂಬಲ ನೀಡುತ್ತ ಬಂದವರು, ಹೀಗಾಗಿ ದೊಡ್ಡ ಮನಸ್ಸಿನ ನಟ ಅನ್ನೋ ಪ್ರಖ್ಯಾತಿಗೂ ಪಾತ್ರರಾಗಿದ್ದಾರೆ.

ಹಿರಿಯ ನಟ ಅವಿನಾಶ್‍ ಅವರಿಗೆ ದಚ್ಚು ಬೈದಿದ್ದೇಕೆ? 
ದರ್ಶನ್
Published On :

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರಗಳಿಗೆ ಸದಾ ಬೆಂಬಲ ನೀಡುತ್ತ ಬಂದವರು, ಹೀಗಾಗಿ ದೊಡ್ಡ ಮನಸ್ಸಿನ ನಟ ಅನ್ನೋ ಪ್ರಖ್ಯಾತಿಗೂ ಪಾತ್ರರಾಗಿದ್ದಾರೆ.

ಇಂತಹ ದರ್ಶನ್ ‘ಮೌನಂ’ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಗಮಿಸುವ ವಿಚಾರಕ್ಕೆ ಹಿರಿಯ ನಟ ಅವಿನಾಶ್ ಅವರನ್ನು ಬೈದರಂತೆ! ಯಾಕೆ, ಆಶ್ಚರ್ಯ ಆಗ್ತಿದ್ರೂ ಸತ್ಯ.

ಆಡಿಯೋ ಬಿಡುಗಡೆಗೆ ದರ್ಶನ್ ಅವರನ್ನು ಕರೆಸುವ ಜವಾಬ್ದಾರಿಯನ್ನು ಚಿತ್ರತಂಡ ಅವಿನಾಶ್ ಅವರಿಗೆ ವಹಿಸಿತ್ತು ಆದರೆ ದಚ್ಚು ತುಂಬಾ ಬಿಝಿಯಾಗಿದ್ದ ಕಾರಣ ಬನ್ನಿ ಅಂತ ಫೋನ್ ಮಾಡೋದು ಹ್ಯಾಗೆ ಅಂತ ಅವಿನಾಶ್ ಸ್ವಲ್ಪ ಹಿಂದೇಟು ಹಾಕಿದ್ದರಂತೆ, ಹೀಗಾಗಿ ಗೆಳೆಯ ದೇವರಾಜ್ ಅವರಿಗೆ ಆ ಹೊಣೆಯನ್ನ ವಹಿಸಿದ್ದರಂತೆ.

ಈ ವಿಷಯ ತಿಳಿದ ದರ್ಶನ್‍, “ಹಿರಿಯ ನಟರಾದ ನೀವು ನಮ್ಮನ್ನ ಕರೆಯೋದಕ್ಕೆ ಹಿಂದೆ ಮುಂದೆ ನೋಡೋ ಅಗತ್ಯವಿಲ್ಲ , ಎಲ್ಲಿಗೆ ಬರಬೇಕು ಹೇಳಿ ಬರ್ತೀನಿ ಸದಾ ನಿಮ್ಮ ಬೆಂಬಲಕ್ಕೆ ನಿಲ್ತೀವಿ’ ಎಂದು ಪ್ರೀತಿಯಿಂದಲೇ ಬೈದಿದ್ದಾರೆ

“ಇದು ನಿಜಕ್ಕೂ ದೊಡ್ಡ ನಟನ ದೊಡ್ಡತನ” ಎಂದು ದರ್ಶನ್ ಎದುರು ನಟ ಅವಿನಾಶ್ ಮನದುಂಬಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.