ಸಿನಿಮಾ ಸುದ್ದಿ

'ಪದವಿ ಪೂರ್ವ' ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ನಟ ಅಭಿಷೇಕ್ ಅಂಬರೀಶ್

ಹಾಡುಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ಪದವಿ ಪೂರ್ವ ಸಿನಿಮಾದ ಟ್ರೈಲರ್ ಡಿ.21ರಂದು ಬಿಡುಗಡೆಯಾಗಲಿದ್ದು, ನಟ ಅಭಿಷೇಕ್ ಅಂಬರೀಶ್ ಅವರು ಬಿಡುಗಡೆ ಮಾಡಲಿದ್ದಾರೆ.

'ಪದವಿ ಪೂರ್ವ' ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ನಟ ಅಭಿಷೇಕ್ ಅಂಬರೀಶ್
ಪದವಿ ಪೂರ್ವ ಸಿನಿಮಾ ಸ್ಟಿಲ್
Published On :

ಬೆಂಗಳೂರು: ಹಾಡುಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ಪದವಿ ಪೂರ್ವ ಸಿನಿಮಾದ ಟ್ರೈಲರ್ ಡಿ.21ರಂದು ಬಿಡುಗಡೆಯಾಗಲಿದ್ದು, ನಟ ಅಭಿಷೇಕ್ ಅಂಬರೀಶ್ ಅವರು ಬಿಡುಗಡೆ ಮಾಡಲಿದ್ದಾರೆ.

ಚಿತ್ರದ ಮೊದಲ ಹಾಡನ್ನು ನವರಸನಾಯಕ ಜಗ್ಗೇಶ್ ಅವರು ಬಿಡುಗಡೆ ಮಾಡಿದ್ದರೆ, ಎರಡನೇ ಹಾಡನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದರು. ಇದೀಗ ಚಿತ್ರದ ಟ್ರೈಲರ್ ಅನ್ನು ಅಭಿಷೇಕ್ ಅಂಬರೀಶ್ ಬಿಡುಗಡೆ ಮಾಡಲಿದ್ದಾರೆ.

ಡಿಸೆಂಬರ್‌ ವಾರಾಂತ್ಯ ಸಿನಿಮಾ ಬಿಡುಗಡೆಗೆ ಲಕ್ಕಿವೀಕ್‌ ಎನ್ನುವ ಮಾತು ಗಾಂಧಿನಗರದಲ್ಲಿದೆ. ಅದರಂತೆ ಈಗಾಗಲೇ ಸಿನಿಮಾ ಬಿಡುಗಡೆಗೆ ದಿನಾಂಕವನ್ನು ಫಿಕ್ಸ್ ಮಾಡಿಕೊಂಡಿರುವ ಪದವಿ ಪೂರ್ವ ಸಿನಿಮಾ ಒಂದಿಲ್ಲೊಂದು ಕಾರಣಗಳಿಗಾಗಿ ಸ್ಯಾಂಡಲ್‌ವುಡ್‌ನಲ್ಲಿ ಗಮನಸೆಳೆದಿದೆ.

<strong>ಅಭಿಷೇಕ್ ಅಂಬರೀಶ್</strong>
ಅಭಿಷೇಕ್ ಅಂಬರೀಶ್

ಯೋಗರಾಜ್‌ ಭಟ್‌ ಅವರ ನಿರ್ಮಾಣ ಸಂಸ್ಥೆ ಯೋಗರಾಜ್‌ ಸಿನಿಮಾಸ್‌ ಹಾಗೂ ರವಿ ಶಾಮನೂರ್‌ ಫಿಲಂಸ್‌ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಯೂಥ್‌ಫುಲ್‌ ಲವ್‌ ಸ್ಟೋರಿ ‘ಪದವಿ ಪೂರ್ವ’ ಡಿಸೆಂಬರ್ 30ಕ್ಕೆ ಬಿಡುಗಡೆಯಾಗಲಿದೆ.

ಇದೇ ಮೊದಲ ಬಾರಿಗೆ ಹರಿಪ್ರಸಾದ್‌ ಜಯಣ್ಣ ಅವರು ನಿರ್ದೇಶಕರ ಕ್ಯಾಪ್‌ ತೊಟ್ಟು ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ರಂಗಾಯಣ ರಘು, ‘ರಾಮಾರಾಮಾರೇ’ ಖ್ಯಾತಿಯ ನಟರಾಜ್ ಭಟ್ ತಾರಾಗಣದಲ್ಲಿದ್ದು, ಯೋಗರಾಜ್ ಭಟ್, ನಟಿ ಅದಿತಿ ಪ್ರಭುದೇವ, ದಿವ್ಯ ಉರುಡುಗ, ‘ಕಾಮಿಡಿ ಕಿಲಾಡಿ’ ನಯನ, ಶ್ರೀ ಮಹದೇವ್ ಅತಿಥಿ ಪಾತ್ರದಲ್ಲಿದ್ದಾರೆ.

‘ಪದವಿಪೂರ್ವ’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ಯೋಗರಾಜ್ ಭಟ್ ಸಾಹಿತ್ಯವಿದೆ. ಛಾಯಾಗ್ರಾಹಕ ಸಂತೋಷ್ ರೈ ಪತಾಜೆ ಛಾಯಾಗ್ರಹಣ, ಮಧು ತುಂಬಕೆರೆಯ ಸಂಕಲನ ಚಿತ್ರಕ್ಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.