Tourism

ಅಕ್ಟೋಬರ್ 8ರಿಂದ ರಾಮೋಜಿ ಫಿಲ್ಮ್ ಸಿಟಿ ಪ್ರವಾಸಿಗರ ವೀಕ್ಷಣೆಗೆ ಆರಂಭ
ಕೋವಿಡ್ ನಿಂದಾಗಿ ಮುಚ್ಚಲ್ಪಟ್ಟಿದ್ದ ರಾಮೋಜಿ ಫಿಲ್ಮ್ ಸಿಟಿ ಅಕ್ಟೋಬರ್ 8 ರಿಂದ ಆರಂಭವಾಗಲಿದ್ದು, ಪ್ರವಾಸಿಗರು ಭೇಟಿ ನೀಡಬಹುದಾಗಿದೆ.

ಹವ್ಯಾಸಕ್ಕಾಗಿ ಕ್ಲಿಕ್ಕಿಸಿದ ಫೋಟೋಗಳು ವೈರಲ್ ಆಯ್ತು, ಕಾರವಾರ ರೈಲ್ವೇ ನಿಲ್ದಾಣ ಫೇಮಸ್ ಆಯ್ತು!
ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಯಾವುದು ಹೇಗೆ ಖ್ಯಾತಿ ಗಳಿಸುತ್ತದೆ ಎಂಬುದು ತಿಳಿಯುವುದಿಲ್ಲ. ಸಾಕಷ್ಟು ಸುದ್ದಿಗಳು ವಸ್ತುಗಳು ವೈರಲ್ ಆಗುತ್ತಿವೆ.

ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಡೆಕ್ಕನ್ ವಿಮಾನ ಯಾನ ಸೇವೆಗೆ ಪ್ರಸ್ತಾವನೆ: ಯೋಗೇಶ್ವರ್
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡೆಕ್ಕನ್ ವಿಮಾನಯಾನ ಸಂಸ್ಥೆ ಚಿಕ್ಕ ವಿಮಾನಗಳ ಹಾಗೂ ಹೆಲಿಕಾಪ್ಟರ್ ಗಳ ವಾಯುಯಾನ ಸೇವೆಯನ್ನು ಒದಗಿಸಲು ಮುಂದೆ ಬಂದಿವೆ.

ಕೋವಿಡ್ ನಿಯಮಗಳ ಪಾಲನೆಯೇ ಇಲ್ಲ.. 3ನೇ ಅಲೆ ನಿಶ್ಚಿತ, ಧಾರ್ಮಿಕ ಯಾತ್ರೆ, ಪ್ರವಾಸೋದ್ಯಮ ಆರಂಭಕ್ಕೆ ಆತುರ ಬೇಡ: ಐಎಂಎ
ದೇಶದಲ್ಲಿ ಕೋವಿಡ್ ಲಾಕ್ಡೌನ್ ಅನ್ನು ತೆರವುಗೊಳಿಸಿದ ಬಳಿಕ ಜನರು ಯಾವುದೇ ರೀತಿಯ ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ... ದೇಶದಲ್ಲಿ ಕೋವಿಡ್ ಮೂರನೇ ಅಲೆ ನಿಶ್ಚಿತವಾಗಿದ್ದು, ಧಾರ್ಮಿಕ ಯಾತ್ರೆ, ಪ್ರವಾಸೋದ್ಯಮ ಆರಂಭಕ್ಕೆ ರಾಜ್ಯಸರ್ಕಾರಗಳು ಆತುರ ಪಡಬಾರದು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ ಹೇಳಿದೆ.

ಪ್ರವಾಸೋದ್ಯಮ ಕ್ಷೇತ್ರಕ್ಕೆ ಪರಿಹಾರ ಪ್ಯಾಕೇಜ್: ಶೇ.50ರಷ್ಟು ತೆರಿಗೆ ವಿನಾಯಿತಿ; ಹೋಟೆಲ್, ರೆಸಾರ್ಟ್ ವಿದ್ಯುತ್ ಬಿಲ್ ಮನ್ನಾ
ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್‌ಗಳಿಗೆ ಪ್ರಸಕ್ತ ಸಾಲಿನಲ್ಲಿ ಶೇ. 50ರಷ್ಟು ಆಸ್ತಿ ತೆರಿಗೆ ಶುಲ್ಕ ವಿನಾಯಿತಿ ಮತ್ತು ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ವಿದ್ಯುಚ್ಛಕ್ತಿ ಶುಲ್ಕ ಮನ್ನಾ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ.

ಕೊರೋನಾ ಅಬ್ಬರ ಇಳಿದರೂ ಪ್ರವಾಸಿ ತಾಣಗಳತ್ತ ಮುಖ ಮಾಡದ ಪ್ರವಾಸಿಗರು: ಸಂಕಷ್ಟದಲ್ಲಿ ಮೈಸೂರು ಪ್ರವಾಸೋದ್ಯಮ!
ಮೈಸೂರು ಜಿಲ್ಲೆ ಕೊರೋನಾ ಅಬ್ಬರ ಇಳಿಯುತ್ತಿದ್ದರೂ, ಕೊರೋನಾ ವೈರಸ್ ಸೋಂಕಿನಿಂದಾಗಿ ಭೀತಿಗೊಳಗಾಗಿರುವ ಪ್ರವಾಸಿಗರು, ಪ್ರವಾಸಿತಾಣಗಳತ್ತ ಮುಖ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಲ್ಲದೆ ಮೈಸೂರು ಪ್ರವಾಸೋದ್ಯಮ ಸಂಕಷ್ಟಕ್ಕೆ ಸಿಲುಕಿದೆ.

ಕಸ್ಟಮ್ಸ್ ವಶಪಡಿಸಿಕೊಂಡಿದ್ದ ಪುರಾತನ ವಸ್ತು, ನಾಣ್ಯ ಹಸ್ತಾಂತರಿಸಿದ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಕಸ್ಟಮ್ಸ್ ವಶಪಡಿಸಿಕೊಂಡಿದ್ದ ಪುರಾತನ ಮತ್ತು ಮಧ್ಯಕಾಲೀನ ಅವಧಿಯ ಪ್ರಾಚೀನ ವಸ್ತುಗಳು/ನಾಣ್ಯಗಳನ್ನು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ(ಸ್ವತಂತ್ರ ನಿರ್ವಹಣೆ) ಪ್ರಹ್ಲಾದ ಪಟೇಲ್ ಅವರಿಗೆ ನಾರ್ತ್ ಬ್ಲಾಕ್ ನಲ್ಲಿ ನಡೆದ ಸಮಾರಂಭದಲ್ಲಿಂದು ಹಸ್ತಾಂತರಿಸಿದರು.

ಸೂಪಾ ಹಿನ್ನೀರಿನ 'ಸೂರ್ಯಾಸ್ತ ಪಾಯಿಂಟ್' ತೆರೆಯುವಂತೆ ಹೆಚ್ಚಿದ ಬೇಡಿಕೆ
ಜೋಯಿಡಾದ ಬಾಪೆಲಿ ಕ್ರಾಸ್ ಸರ್ಕಲ್ ನಲ್ಲಿರುವ ಸುಪಾ ಅಣೆಕಟ್ಟು ಹಿನ್ನೀರಿನಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಸೂರ್ಯಾಸ್ತದ ಸ್ಥಳಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದ ನಂತರ ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.

ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರಿನಿಂದ ಮೈಸೂರಿನವರೆಗೂ ಮೋಟಾರ್ ಸೈಕಲ್ ರ‍್ಯಾಲಿ
ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ವೇದಿಕೆ , ಭಾರತೀಯ ಮೋಟಾರ್ ಸೈಕಲ್ ಮತ್ತು ಓಕ್ವುಡ್ ಪ್ರೀಮಿಯರ್ ಪ್ರೆಸ್ಟೀಜ್ ವತಿಯಿಂದ ಬೆಂಗಳೂರಿನಿಂದ ಮೈಸೂರಿನವರೆಗೂ ಹಮ್ಮಿಕೊಂಡಿರುವ ಮೋಟಾರ್ ಸೈಕಲ್ ರ‍್ಯಾಲಿ ಆಯೋಜಿಸಲಾಗಿತ್ತು.

