Tokyo olympics

ಸೆಲ್ಫಿ ತೆಗೆಯಿರಿ, ಭಾರತೀಯ ಅಥ್ಲೆಟ್ ಗಳನ್ನು ಪ್ರೋತ್ಸಾಹಿಸಿ: ರೈಲ್ವೆ ಇಲಾಖೆಯಿಂದ 'ಚೀರ್ ಫಾರ್ ಇಂಡಿಯಾ' ಅಭಿಯಾನ
ಇನ್ನು ಕೆಲವೇ ದಿನಗಳಲ್ಲಿ ಟೋಕ್ಯೋ ಒಲಿಂಪಿಕ್ಸ್ ಆರಂಭವಾಗಲಿದೆ. ಕೋವಿಡ್-19 ಮಧ್ಯೆ ಕ್ರೀಡಾ ಸ್ಪೂರ್ತಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಈಜುಗಾರ್ತಿ ಮಾನಾ ಪಟೇಲ್!
ಟೋಕಿಯೋ ಒಲಿಂಪಿಕ್ಸ್‌ಗೆ ಶುಕ್ರವಾರ ಅರ್ಹತೆ ಪಡೆದ ಮೊದಲ ಮಹಿಳಾ ಮತ್ತು ಮೂರನೇ ಭಾರತೀಯ ಈಜುಗಾರ ಎಂಬ ಹೆಗ್ಗಳಿಕೆಗೆ ಈಜುಗಾರ್ತಿ ಮಾನಾ ಪಟೇಲ್ ಪಾತ್ರರಾಗಿದ್ದಾರೆ. ಪಟೇಲ್ ಯುನಿವರ್ಸಾಲಿಟಿ ಕೋಟಾದಡಿಯಲ್ಲಿ ಈ ಸ್ಥಾನ ಪಡೆದಿದ್ದಾರೆಂದು ತಿಳಿದುಬಂದಿದೆ.

ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಎರಡನೇ ಈಜುಪಟು ಶ್ರೀಹರಿ ನಟರಾಜ್
ಭಾರತದ ಈಜುಪಟು ಶ್ರೀಹರಿ ನಟರಾಜ್ ಅವರು ಕೊನೆಗೂ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ. ಶ್ರೀಹರಿ ನಟರಾಜ್ ಅವರು ಮುಂಬರುವ 2021ರ ಟೋಕಿಯೋ ಒಲಿಂಪಿಕ್ಸ್'ನಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಂಡಿದ್ದಾರೆ...

100 ಮೀ ಮತ್ತು 200 ಮೀಟರ್ ಓಟಗಳಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಡುಟಿ ಚಂದ್
ಏಸ್ ಇಂಡಿಯನ್ ಸ್ಪ್ರಿಂಟರ್ ಡುಟಿ ಚಂದ್ ವಿಶ್ವ ಶ್ರೇಯಾಂಕದ ಕೋಟಾ ಮೂಲಕ 100 ಮೀ ಮತ್ತು 200 ಮೀ ಓಟಗಳಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಟೋಕಿಯೋ ಒಲಂಪಿಕ್ಸ್: ಎಲ್ಲಾ ಕ್ರೀಡಾಪಟುಗಳಿಗೆ ಮನ್ ಕಿ ಬಾತ್ ನಲ್ಲಿ ಶುಭಾಶಯ ಕೋರಿದ ಪ್ರಧಾನಿ ಮೋದಿ
78ನೇ ಮನ್ ಕೀ ಬಾತ್ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಟೋಕಿಯೋ ಒಲಂಪಿಕ್ಸ್ ತಯಾರಿ ಕುರಿತು ಮಾತನಾಡಿ ಎಲ್ಲಾ ಕ್ರೀಡಾಪಟುಗಳಿಗೂ ಶುಭಾಶಯ ಕೋರಿದ್ದಾರೆ.

ಟೋಕಿಯೋ ಒಲಿಂಪಿಕ್ ವೀಕ್ಷಿಸಲು ಮೈದಾನದಲ್ಲಿ 10 ಸಾವಿರ ಜನರಿಗೆ ಅವಕಾಶ: ಸಂಘಟಕರು
ಜಪಾನ್‌ನ ಟೋಕಿಯೊದಲ್ಲಿ ಜುಲೈ 23ರಿಂದ ಪ್ರಾರಂಭವಾಗುವ 2020 ರ ಒಲಿಂಪಿಕ್ ಕ್ರೀಡಾಕೂಟದ ಪ್ರತಿ ಮೈದಾನದಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು 10,000ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಕ್ರೀಡಾಕೂಟದ ಸಂಘಟಕರು ಸೋಮವಾರ ಪ್ರಕಟಿಸಿದ್ದಾರೆ.

ಟೋಕಿಯೋ ಒಲಂಪಿಕ್ಸ್ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿಯಾಗಿ ರಾಣಿ ರಾಂಪಾಲ್ ಆಯ್ಕೆ
ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನ 16 ಸದಸ್ಯರ ರಾಷ್ಟ್ರೀಯ ಮಹಿಳಾ ಹಾಕಿ ತಂಡದ ನಾಯಕಿಯಾಗಿ ಹಿರಿಯ ಸ್ಟ್ರೈಕರ್ ರಾಣಿ ರಾಂಪಾಲ್ ಅವರನ್ನು ಹಾಕಿ ಇಂಡಿಯಾ (ಎಚ್‌ಐ) ಸೋಮವಾರ ಆಯ್ಕೆ ಮಾಡಿದೆ.

ವಿಂಬಲ್ಡನ್, ಟೋಕಿಯೋ ಒಲಂಪಿಕ್ಸ್ ನಿಂದ ಹೊರನಡೆದ ರಾಫೆಲ್ ನಡಾಲ್
ಸ್ಪ್ಯಾನಿಷ್ ಟೆನ್ನಿಸ್ ತಾರೆ ರಾಫೆಲ್ ನಡಾಲ್ ವಿಂಬಲ್ಡನ್ ಹಾಗೂ ಟೋಕಿಯೋ ಒಲಂಪಿಕ್ಸ್ ನಿಂದ ಹೊರನಡೆದಿರುವುದನ್ನು ಗುರುವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನುಗೆ ಟೋಕಿಯೋ ಒಲಿಂಪಿಕ್ಸ್ ಟಿಕೆಟ್
ಮಹಿಳೆಯರ 49 ಕೆಜಿ ವಿಭಾಗದಲ್ಲಿ ಭಾರತದ ವೇಟ್‌ಲಿಫ್ಟರ್ ಮಿರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ ಎಂದು ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಸಂಸ್ಥೆ(ಐಡಬ್ಲ್ಯುಯುಎಸ್) ದೃಢಪಡಿಸಿದೆ.

