ವಿಂಬಲ್ಡನ್, ಟೋಕಿಯೋ ಒಲಂಪಿಕ್ಸ್ ನಿಂದ ಹೊರನಡೆದ ರಾಫೆಲ್ ನಡಾಲ್
ಸ್ಪ್ಯಾನಿಷ್ ಟೆನ್ನಿಸ್ ತಾರೆ ರಾಫೆಲ್ ನಡಾಲ್ ವಿಂಬಲ್ಡನ್ ಹಾಗೂ ಟೋಕಿಯೋ ಒಲಂಪಿಕ್ಸ್ ನಿಂದ ಹೊರನಡೆದಿರುವುದನ್ನು ಗುರುವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಮ್ಯಾಡ್ರಿಡ್: ಸ್ಪ್ಯಾನಿಷ್ ಟೆನ್ನಿಸ್ ತಾರೆ ರಾಫೆಲ್ ನಡಾಲ್ ವಿಂಬಲ್ಡನ್ ಹಾಗೂ ಟೋಕಿಯೋ ಒಲಂಪಿಕ್ಸ್ ನಿಂದ ಹೊರನಡೆದಿರುವುದನ್ನು ಗುರುವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ತಮ್ಮ ದೇಹಕ್ಕೆ ಸಂಬಂಧಿಸಿದ ಕಾರಣಗಳಿಂದಾಗಿ ತಾವು ಈ ಎರಡೂ ಟೂರ್ನಮೆಂಟ್ ಗಳನ್ನು ಬಿಡುವುದಕ್ಕೆ ನಿರ್ಧರಿಸಿರುವುದಾಗಿ ರಾಫೆಲ್ ನಾಡಲ್ ತಿಳಿಸಿದ್ದಾರೆ.
ಈ ತಿಂಗಳಲ್ಲಿ ನಡೆದ ಫ್ರೆಂಚ್ ಓಪನ್ ಸೆಮಿಫೈನಲ್ಸ್ ನಲ್ಲಿ ನೋವಾಕ್ ಜೋಕೋವಿಚ್ ಎದುರು ಸೋಲು ಕಂಡಿದ್ದರು. ರಾಫೆಲ್ ನಾಡಲ್ ಎರಡು ಬಾರಿ ವಿಂಬಲ್ಡನ್ ಟೈಟಲ್ ನ್ನು ಗೆದ್ದಿದ್ದು 2008 ರ ಬೀಜಿಂಗ್ ಒಲಂಪಿಕ್ಸ್ ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.
"ನನ್ನ ವೃತ್ತಿಜೀವನವನ್ನು ಹೆಚ್ಚಿಸುವುದಕ್ಕೆ, ನನಗೆ ಸಂತೋಷವಾಗುವಂತೆ ಇರುವುದಕ್ಕೆ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ನಾಡಲ್ ತಿಳಿಸಿದ್ದು, ಇನ್ನೂ ಹೆಚ್ಚಿನ ಮಟ್ಟದಲ್ಲಿ ಸ್ಪರ್ಧಿಸುವುದಕ್ಕೆ ಈ ನಿರ್ಧಾರ ಸಹಕಾರಿ ಎಂದು ಹೇಳಿದ್ದಾರೆ. ವಾಸ್ತವದಲ್ಲಿ ರೋಲ್ಯಾಂಡ್ ಗ್ಯಾರೋಸ್ ಹಾಗೂ ವಿಂಬಲ್ಡನ್ ನಡುವೆ ಇರುವ ಅಂತರ ಕೇವಲ ಎರಡು ವಾರಗಳಷ್ಟೇ ಆಗಿದ್ದು, ಇದು ದೈಹಿಕ ವಿಶ್ರಾಂತಿಯ ದೃಷ್ಟಿಯಿಂದ ಸುಲಭ ಸಾಧ್ಯವಲ್ಲ ಎಂದು ನಾಡಲ್ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


