Tokyo olympics

ಭಾರತಕ್ಕೆ ಮರಳಿದ ಟೋಕಿಯೋ ಒಲಿಂಪಿಕ್ಸ್ ಪದಕ ಸಾಧಕರಿಗೆ ಹೃದಯಸ್ಪರ್ಶಿ ಸ್ವಾಗತ
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕೀರ್ತಿ ತಂದ ಪದಕ ಸಾಧಕರಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದಿಂದ ಖಾಸಗಿ ಹೊಟೇಲ್ ಗೆ ಸಾಧಕರನ್ನು ಕರೆದುಕೊಂಡು ಹೋಗಲಾಯಿತು. ಅಲ್ಲಿ ಪದಕ ವಿಜೇತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನೀರಜ್ ಚೋಪ್ರಾ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಪದಕವನ್ನು ಮುತ್ತಿಟ್ಟ ಹುಡುಗನ ಜಾವೆಲಿನ್ ಮೋಹ
ನೀರಜ್ ಚೋಪ್ರಾ, ಭಾರತದ ಕ್ರೀಡಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಹೆಸರು ಬರೆದಾಗಿದೆ. ಅಥ್ಲೆಟಿಕ್ಸ್ ನಲ್ಲಿ ಶತಮಾನ ನಂತರ ಭಾರತಕ್ಕೆ ಒಲಿಂಪಿಕ್ ನಲ್ಲಿ ಚಿನ್ನ ಗೆದ್ದು ತಂದಿದ್ದಾರೆ. ಈ ಮೊದಲು 2008ರಲ್ಲಿ ಭಾರತದ ಅಭಿನವ ಬಿಂದ್ರಾ ಅವರಿಗೆ ಶೂಟಿಂಗ್ ಗೇಮ್ ನಲ್ಲಿ ಚಿನ್ನದ ಪದಕ ಬಂದಿತ್ತು.

ಚಿನ್ನ ಗೆದ್ದ ಛೋಪ್ರಾಗೆ ತರಬೇತಿ ನೀಡಿದ್ದ ಕರ್ನಾಟಕದ ಕಾಶಿನಾಥ್ ನಾಯ್ಕ್ ಗೆ 10 ಲಕ್ಷ ರೂ. ಬಹುಮಾನ ಘೋಷಣೆ
ಟೋಕಿಯೊ ಒಲಂಪಿಕ್ ನ ಜಾವಲಿನ್ ಥ್ರೋನಲ್ಲಿ ಚಿನ್ನಕ್ಕೆ ಕೊರಳೊಡ್ಡಿ, ದೇಶದ ಗೌರವ ಕಾಪಾಡಿದ ನೀರಜ್ ಛೋಪ್ರಾರ ಅನನ್ಯ ಸಾಧನೆಗಾಗಿ ತರಬೇತಿ ನೀಡಿದ ಶಿರಸಿಯ ಕಾಶಿನಾಥ್ ನಾಯ್ಕ್ ಅವರಿಗೆ ಕ್ರೀಡಾ ಸಚಿವ ಡಾ. ನಾರಾಯಣಗೌಡ ಅಭಿನಂದಿಸಿದ್ದಾರೆ. ಅಲ್ಲದೆ 10 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.

ಒಲಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನ ತಂದ ನೀರಜ್ ಜೋಪ್ರಾ!
ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಶನಿವಾರ ಒಲಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು 2008ರ ಬೀಜಿಂಗ್ ಒಲಂಪಿಕ್ಸ್ ನಲ್ಲಿ ಭಾರತದ ಅಭಿನವ್ ಬಿಂದ್ರಾ ವೈಯಕ್ತಿಕವಾಗಿ ಮೊದಲ ಚಿನ್ನದ ಪದಕ ಗೆದ್ದಿದ್ದರು.

ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮಾತನಾಡುವಾಗ ಕಣ್ಣೀರಿಟ್ಟ ಭಾರತೀಯ ಮಹಿಳಾ ಹಾಕಿ ತಂಡ- ವಿಡಿಯೋ
ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕದಿಂದ ವಂಚಿತರಾದ ಭಾರತೀಯ ಮಹಿಳಾ ಹಾಕಿ ತಂಡ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಾಗ ಕಣ್ಣೀರಿಟ್ಟಿದ್ದಾರೆ. ಸ್ಫೂರ್ತಿದಾಯಕ ಪ್ರದರ್ಶನಕ್ಕಾಗಿ ತಂಡವನ್ನು ಶ್ಲಾಘಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಆಟಗಾರ್ತಿಯರನ್ನು ಪ್ರೋತ್ಸಾಹಿಸಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಕುಸ್ತಿಯಲ್ಲಿ ಸೀಮಾ ಬಿಸ್ಲಾಗೆ ಸೋಲು; ನಡಿಗೆಯಲ್ಲಿ ಗುರುಪ್ರೀತ್ ಸಿಂಗ್ ಗೆ ನಿರಾಸೆ!
ಭಾರತದ ಕುಸ್ತಿಪಟು ಸೀಮಾ ಬಿಸ್ಲಾ ಶುಕ್ರವಾರ ಇಲ್ಲಿ ನಡೆದ ಮಹಿಳಾ ಫ್ರೀಸ್ಟೈಲ್ ಕುಸ್ತಿಯ 50 ಕೆಜಿ ವಿಭಾಗದಲ್ಲಿ ಟುನೀಶಿಯಾದ ಸಾರಾ ಹಮ್ದಿ ಎದುರು ಸೋತರು.

ಟೋಕಿಯೊ ಒಲಂಪಿಕ್ಸ್: ಗಾಲ್ಫ್‌ನ 3ನೇ ಸುತ್ತಿನಲ್ಲೂ 2ನೇ ಸ್ಥಾನದಲ್ಲಿದ್ದು ಪದಕ ಆಸೆ ಜೀವಂತವಿರಿಸಿದ ಭಾರತದ ಅದಿತಿ ಅಶೋಕ
ಟೋಕಿಯೊ ಒಲಿಂಪಿಕ್ಸ್ ಮಹಿಳಾ ಗಾಲ್ಫ್ ಸ್ಪರ್ಧೆಯ ಮೂರನೇ ಸುತ್ತಿನ ನಂತರ ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಅವರು ಅಗ್ರ ಅಮೇರಿಕನ್ ನೆಲ್ಲಿ ಕೊರ್ಡಾಕ್ಕಿಂತ ಕೇವಲ ಮೂರು ಹೊಡೆತಗಳ ಹಿಂದೆ ಇದ್ದಾರೆ.

ಟೋಕಿಯೊ ಒಲಂಪಿಕ್ಸ್: ಸೆಮಿಸ್‌ನಲ್ಲಿ ಕುಸ್ತಿಪಟು ಬಜರಂಗ್ ಪೂನಿಯಾಗೆ ಸೋಲು!
ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಸೆಮಿಫೈನಲ್ ನಲ್ಲಿ ಅಜರ್ಬೈಜಾನ್ ಕುಸ್ತಿಪಟು ವಿರುದ್ಧ ಸೋಲು ಕಂಡಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಸೋಮವಾರ ಭಾರತ ಪುರುಷರ ಹಾಕಿ ತಂಡಕ್ಕೆ ಸನ್ಮಾನ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಭಾರತ ಹಾಕಿ ಪುರುಷರ ತಂಡಕ್ಕೆ ಸೋಮವಾರ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

