threat

ಕಂಗನಾ ರಾನಾವತ್ ಗೆ ಜೀವ ಬೆದರಿಕೆ:ತವರಿನಲ್ಲಿ, ಮುಂಬೈ ಭೇಟಿ ವೇಳೆ ಭದ್ರತೆ ಒದಗಿಸಲು ಹಿ.ಪ್ರ ಸರ್ಕಾರ ನಿರ್ಧಾರ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ನಂತರ ನಟಿ ಕಂಗನಾ ರಾನಾವತ್ ನೀಡುತ್ತಿರುವ ಹೇಳಿಕೆ, ಮುಂಬೈ ಬಗ್ಗೆ ಮಾಡಿರುವ ಟ್ವೀಟ್ ನ ನಂತರ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ಅವರ ಜೀವಕ್ಕೆ ಸುರಕ್ಷತೆಯಿಲ್ಲ ಎಂದು ಮನಗಂಡು ಅವರಿಗೆ ರಕ್ಷಣೆ ನೀಡಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ.

'ನರೇಂದ್ರ ಮೋದಿಯವರನ್ನು ಕೊಲ್ಲಿ' ಹೀಗೆಂದು ಬಂತು ಬೆದರಿಕೆ ಇಮೇಲ್:ಪ್ರಧಾನಿಯವರ ಭದ್ರತೆ ಹೆಚ್ಚಿಸಿದ ಎನ್ ಐಎ
ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಿ ಎಂದು ಇಮೇಲ್ ಬಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮಡಿಕೇರಿ: ಮನೆಗೆ ನುಗ್ಗಿ ದಾಂಧಲೆ ನಡೆಸಿದ ಕಾಡಾನೆ; ಕುಟುಂಬ ಪ್ರಾಣಾಪಾಯದಿಂದ ಪಾರು
ಕಾಡಾನೆಯೊಂದು ಹಾಡಿಯ ಮನೆಯೊಂದಕ್ಕೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ಇತರ ಸಾಮಗ್ರಿಗಳನ್ನು ಜಖಂಗೊಳಿಸಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯ ತಾಲೂಕಿನ ಪಾಲಿಬೆಟ್ಟಸಮೀಪ ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಕಳೆದ ರಾತ್ರಿ ನಡೆದಿದೆ.

ಸಲ್ಮಾನ್ ಖಾನ್ ಕುಟುಂಬದಿಂದ ನಿರಂತರ ಬೆದರಿಕೆ; ವೃತ್ತಿ ಜೀವನ ಹಾಳಾಗಿದೆ: ಚಿತ್ರ ನಿರ್ದೇಶಕ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ 2010ರಲ್ಲಿ ತೆರೆ ಕಂಡ 'ದಬಾಂಗ್' ನಂತರ ಸಲ್ಮಾನ್ ಖಾನ್ ಕುಟುಂಬ ತನ್ನ ವೃತ್ತಿ ಜೀವನವನ್ನು ಹಾಳುಮಾಡಿದೆ ಎಂದು ನಿರ್ದೇಶಕ ಅಭಿನವ್ ಕಶ್ಯಪ್ ಫೇಸ್ ಬುಕ್ ಪೋಸ್ಟ್ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ

ಜೈ ಶ್ರೀರಾಮ್ ಹೇಳುವಂತೆ ಹಲ್ಲೆ: ಬಜರಂಗದಳದ ಮುಖಂಡ ಸೇರಿ ನಾಲ್ವರ ವಿರುದ್ಧ ಎಫ್ ಐಆರ್
ಬಾಲಕನೊಬ್ಬನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ ಮುಖಂಡ ಸಹಿತ ನಾಲ್ವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗಾನದಿಯನ್ನು ಸ್ವಚ್ಛಗೊಳಿಸದೇ ಹೋದರೆ ಗುಂಡು ಹಾರಿಸಿಕೊಳ್ಳುತ್ತೇನೆ: ಸರ್ಕಾರಕ್ಕೆ ಬೆದರಿಕೆ ಹಾಕಿದ ಸ್ವಾಮೀಜಿ
ಮುಂದಿನ 10 ದಿನಗಳೊಳಗಾಗಿ ಗಂಗಾ ನದಿಯನ್ನು ಸ್ವಚ್ಛತೆಗೊಳಿಸದೇ ಹೋದಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪುವುದಾಗಿ ಗುರು ಗೋಪಾಲ್ ದಾಸ್ ಎಂಬ ಸ್ವಾಮೀಜಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ.

ಮತ್ತೆ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧ: ಅಮೆರಿಕಾಗೆ ಸೆಡ್ಡು ಹೊಡದ ಉತ್ತರ ಕೊರಿಯಾ
ಅಣ್ವಸ್ತ್ರ ಮತ್ತು ಅಂತರಾಷ್ಟ್ರೀಯ ಕ್ಷಿಪಣಿ ಪರೀಕ್ಷೆಗೆ ಹೇರಿಕೊಂಡಿದ್ದ ಸ್ವಯಂ ನಿಷೇದ ಹಿಂಪಡೆಯುವುದಾಗಿ ಪ್ರಕಟಿಸಿರುವ ಉತ್ತರ ಕೊರಿಯಾ ಮುಖಂಡ ಕಿಮ್ ಜೋಂಗ್ ಉನ್, ಶೀಘ್ರದಲ್ಲೇ ಹೊಸ ಅಸ್ತ್ರ ಪ್ರಯೋಗಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಕೋರ್ಟ್'ಗೆ ಹೋದರೆ ಉನ್ನಾವೋಗಿಂತಲೂ ಕೆಟ್ಟ ಸ್ಥಿತಿ ಎದುರಾಗುತ್ತದೆ: ಅತ್ಯಾಚಾರ ಸಂತ್ರಸ್ತೆಗೆ ಕಾಮುಕನ ಬೆದರಿಕೆ
ನ್ಯಾಯಾಲಯಕ್ಕೆ ಹಾಜರಾದರೆ ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಗಿಂತಲೂ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಜಾಮೀನಿನ ಮೇಲೆ ಹೊರ ಬಂದಿರುವ ಕಾಮುಕನೊಬ್ಬ ಅತ್ಯಾಚಾರ ಸಂತ್ರಸ್ತೆಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಬೆದರಿಕೆ ಪೋಸ್ಟರ್ ಗಳು: ಸತತ ಮೂರನೇ ದಿನ ಕಾಶ್ಮೀರ ಕಣಿವೆಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತ
ಸಹಜ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಸತತ ಮೂರನೇ ದಿನವಾದ ಶುಕ್ರವಾರ ಕೂಡ ಬಹುತೇಕ ಅಂಗಡಿ-ಮುಂಗಟ್ಟುಗಳು ಮತ್ತು ವಾಣಿಜ್ಯ ಕೇಂದ್ರಗಳನ್ನು ಮುಚ್ಚಲಾಗಿತ್ತು.

