ಗಂಗಾನದಿಯನ್ನು ಸ್ವಚ್ಛಗೊಳಿಸದೇ ಹೋದರೆ ಗುಂಡು ಹಾರಿಸಿಕೊಳ್ಳುತ್ತೇನೆ: ಸರ್ಕಾರಕ್ಕೆ ಬೆದರಿಕೆ ಹಾಕಿದ ಸ್ವಾಮೀಜಿ
ಮುಂದಿನ 10 ದಿನಗಳೊಳಗಾಗಿ ಗಂಗಾ ನದಿಯನ್ನು ಸ್ವಚ್ಛತೆಗೊಳಿಸದೇ ಹೋದಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪುವುದಾಗಿ ಗುರು ಗೋಪಾಲ್ ದಾಸ್ ಎಂಬ ಸ್ವಾಮೀಜಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ.

ಡೆಹ್ರಾಡೂನ್: ಮುಂದಿನ 10 ದಿನಗಳೊಳಗಾಗಿ ಗಂಗಾ ನದಿಯನ್ನು ಸ್ವಚ್ಛತೆಗೊಳಿಸದೇ ಹೋದಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪುವುದಾಗಿ ಗುರು ಗೋಪಾಲ್ ದಾಸ್ ಎಂಬ ಸ್ವಾಮೀಜಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಉತ್ತರಾಖಂಡ ಸರ್ಕಾರಗಳು ನದಿ ಸ್ವಚ್ಛತೆಗೊಳಿಸುವುದನ್ನು ಮರೆತು ಹೋದಂತಿದೆ. ಕೇವಲ ಅಧಿಕಾರದ ಸಂತೋಷವನ್ನು ಅನುಭವಿಸುತ್ತಿದೆ. ಮುಂದಿನ 10 ದಿನಗಳಲ್ಲಿ ಸರ್ಕಾರ ಗಂಗಾ ನದಿಯನ್ನು ಸ್ವಚ್ಛಗೊಳಿಸುವಲ್ಲಿ ಯಾವುದೇ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ, ಪರಿಸರ ರಕ್ಷಣೆ ಮಾಡದೇ ಹೋದಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪುವುದಾಗಿ ಸ್ವಾಮೀಜಿ ಹೇಳಿದ್ದಾರೆ.
ನದಿ ಸ್ವಚ್ಛಗೊಳಿಸುವುದರಲ್ಲಿ ಸರ್ಕಾರ ಗಂಭೀರವಾಗಿರದೇ ಹೋದಲ್ಲಿ ಪರಿಸರ ರಕ್ಷಣೆ ಕುರಿತ ಸಂಸ್ಥೆಗಳನ್ನು ಬಂದ್ ಮಾಡಲಿ. ಐಐಟಿ, ಅರಣ್ಯ ಸಂಶೋಧನಾ ಸಂಸ್ಥೆಗಳ ಅಗತ್ಯಗಳಿಲ್ಲ. ಜಿಡಿ ಅಗರ್ವಾಲ್ ಇಟ್ಟ ಹೆಜ್ಜೆಯಂತೆಯೇ ನಾನು ಹೆಜ್ಜೆ ಇಡುತ್ತೇನೆ. ಈ ಹಿಂದೆ ಅಗರ್ವಾಲ್ ಅವರು ಗಂಗಾ ನದಿ ಸ್ವಚ್ಛತೆಗೆ ಆಗ್ರಹಿಸಿ ಉಪವಾಸ ಮಾಡಿ ಅಸುನೀಗಿದ್ದರು. ಇದೀಗ ಅವರ ಹಾದಿಯನ್ನೇ ನಾನು ತುಳಿಯುತ್ತೇನೆ. ಈಗಾಗಲೇ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ತೆರಳಿದ್ದೆ. ಆದರೆ, ನನಗೆ ಅವಕಾಶ ನೀಡಲಿಲ್ಲ. ನನ್ನ ವಿರುದ್ಧ ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


