Tax

ತೆರಿಗೆ ಕಡಿತದ ನಂತರ ಇಂಧನ ಮಾರಾಟ ಕರ್ನಾಟಕದಲ್ಲಿ ಹೆಚ್ಚಳ: ಸರಿತೂಗಿದ ರಾಜ್ಯದ ಆದಾಯ ನಷ್ಟ
ಇಂಧನ ಅಂದರೆ ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಇಳಿಸಿ ತಿಂಗಳಾಗಿದೆ. ಇಂಧನ ಮೇಲೆ ತೆರಿಗೆ ಕಡಿತದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 2 ಸಾವಿರ ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಎಲ್ಲಾ ಆಕಾರದ ಹಪ್ಪಳಕ್ಕೆ ಜಿಎಸ್ ಟಿಯಿಂದ ವಿನಾಯಿತಿ ಇದೆ: ಸಿಬಿಐಸಿ ಸ್ಪಷ್ಟನೆ
ಯಾವುದೇ ಹೆಸರಿನಿಂದ ಪರಿಚಿತವಾಗಿರುವ ಹಪ್ಪಳಕ್ಕೆ ಜಿಎಸ್ ಟಿಯಿಂದ ವಿನಾಯಿತಿ ನೀಡಲಾಗಿದೆ. ತೆರಿಗೆ ದರವು ಅದರ ಆಕಾರವನ್ನು ಅವಲಂಬಿಸಿ ಬದಲಾಗುವುದಿಲ್ಲ ಎಂದು ಸಿಬಿಐಸಿ ಸ್ಪಷ್ಟಪಡಿಸಿದೆ.

ಅಗ್ಗದ ಬೆಲೆಯ ಮೊಪೆಡ್ ಗೆ ಐಷಾರಾಮಿ ವಸ್ತುವಿನ ತೆರಿಗೆ ಏಕೆ?: ಕೇಂದ್ರಕ್ಕೆ ಟಿವಿಎಸ್ ಪ್ರಶ್ನೆ
ಕೇಂದ್ರ ಸರ್ಕಾರ ಕುಸಿಯುತ್ತಿರುವ ಆಟೊಮೊಬೈಲ್ ಉದ್ಯಮಕ್ಕೆ ನೆರವು ನೀಡುವುದಾಗಿ ದೊಡ್ಡ ದೊಡ್ಡ ಮಾತನಾಡುತ್ತದೆ, ಆದರೆ ಮಾರಾಟ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ.

ಬಿಬಿಎಂಪಿಗೆ ರಾಕ್‌ಲೈನ್ ವೆಂಕಟೇಶ್ ಕೋಟ್ಯಂತರ ರು. ತೆರಿಗೆ ವಂಚನೆ: ಎನ್.ಆರ್. ರಮೇಶ್ ಆರೋಪ
ರಾಕ್‌ಲೈನ್ ಮಾಲ್‌ನ ಮಾಲೀಕ ರಾಕ್‌ಲೈನ್ ವೆಂಕಟೇಶ್ ಮತ್ತು ಪದ್ಮಕುಮಾರಿ ಅವರು ಬಿಬಿಎಂಪಿಗೆ 8.5 ಕೋಟಿ ರು. ಅಧಿಕ ಮೊತ್ತದ ತೆರಿಗೆ ವಂಚಿಸಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.

ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆಯಿಂದ 900 ಕೋಟಿ ರೂ. ಮೊತ್ತದ ತೆರಿಗೆ ವಂಚನೆ- ಆದಾಯ ತೆರಿಗೆ ಇಲಾಖೆ
ದೈನಿಕ ಭಾಸ್ಕರ್ ಆರು ವರ್ಷಗಳಿಂದ ಸುಮಾರು 900 ಕೋಟಿ ರೂ. ಮೊತ್ತದ ತೆರಿಗೆಯನ್ನು ಪಾವತಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ. ದೈನಿಕ್ ಭಾಸ್ಕರ್ ಪತ್ರಿಕಾ ಕಚೇರಿ ಮೇಲಿನ ದಾಳಿ ವೇಳೆಯಲ್ಲಿ ಸ್ಟಾಕ್ ಮಾರುಕಟ್ಟೆ ನಿಯಮಗಳ ಉಲ್ಲಂಘನೆ ಮತ್ತು ಪಟ್ಟಿಮಾಡಿದ ಕಂಪನಿಗಳಿಂದ ಲಾಭ ಗಳಿಸಿದ ಪುರಾವೆಗಳು ಕಂಡುಬಂದಿವೆ ಐಟಿ ತಿಳಿಸಿದೆ.

ಗೂಗಲ್, ಫೇಸ್ ಬುಕ್ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಮೇಲೆ ತೆರಿಗೆ: ಅಂತಾರಾಷ್ಟ್ರೀಯ ಚೌಕಟ್ಟಿಗೆ ಭಾರತ ಒಪ್ಪಿಗೆ
ಭಾರತವು ಅಂತರಾಷ್ಟ್ರೀಯ ತೆರಿಗೆ ಚೌಕಟ್ಟಿಗೆ ತನ್ನ ಬೆಂಬಲವನ್ನು ಸೂಚಿಸಿದೆ. ಗೂಗಲ್, ಫೇಸ್ ಬುಕ್, ಅಮೆಜಾನ್ ನಂತಹ ತಂತ್ರಜ್ಞಾನ ದೈತ್ಯ ಕಂಪೆನಿಗಳು ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಕನಿಷ್ಠ ಕಾರ್ಪೊರೇಟ್ ತೆರಿಗೆ ಶೇಕಡಾ 15ರಷ್ಟು ವಿಧಿಸುವಂತೆ ಭಾರತ ಬೇರೆ ರಾಷ್ಟ್ರಗಳಿಗೆ ಕರೆ ನೀಡಿದೆ.

ಉದ್ಯಮಿಗಳಿಗೆ ತೆರಿಗೆ ಕಡಿತಗೊಳಿಸುವ ಬದಲು ಬಡವರಿಗೆ ಹಣ ನೀಡಿ: ರಾಹುಲ್ ಗಾಂಧಿ
ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಉದ್ಯಮಿಗಳ ತೆರಿಗೆ ಕಡಿತಗೊಳಿಸುವ ಬದಲು ಬಡವರಿಗೆ ಹಣ ನೀಡಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ

ಯಾವುದೇ ಕಾರಣಕ್ಕೂ ತೆರಿಗೆ ಮನ್ನಾ ಇಲ್ಲ: ಸಚಿವ ಬೈರತಿ ಬಸವರಾಜ್
ಯಾವುದೇ ಕಾರಣಕ್ಕೂ ತೆರಿಗೆ ಮನ್ನಾ ಮಾಡುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ತಿಳಿಸಿದ್ದಾರೆ. ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ನಗರ ಪ್ರದಕ್ಷಿಣೆ ಮಾಡಿ, ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.

'ಮೀನುಗಾರರು ಕೂಡ ಮಧ್ಯಮ ವರ್ಗದವರು':ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೊರೋನಾ ಲಾಕ್ ಡೌನ್ ನಂತರ ಕೇಂದ್ರ ಸರ್ಕಾರ ಪ್ರಕಟಿಸಿರುವ ಆರ್ಥಿಕ ಪ್ಯಾಕೇಜ್ ತೀರಾ ಕಡಿಮೆಯಾಗಿದೆ ಎಂದು ಟೀಕಿಸಿದವರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಉತ್ತರ ಕೊಟ್ಟಿದ್ದಾರೆ.

