ರಾಜ್ಯ

ಬಿಬಿಎಂಪಿಗೆ ರಾಕ್‌ಲೈನ್ ವೆಂಕಟೇಶ್ ಕೋಟ್ಯಂತರ ರು. ತೆರಿಗೆ ವಂಚನೆ: ಎನ್.ಆರ್. ರಮೇಶ್ ಆರೋಪ

ರಾಕ್‌ಲೈನ್‌ ಮಾಲ್‌ನ ಮಾಲೀಕ ರಾಕ್‌ಲೈನ್‌ ವೆಂಕಟೇಶ್‌ ಮತ್ತು ಪದ್ಮಕುಮಾರಿ ಅವರು ಬಿಬಿಎಂಪಿಗೆ 8.5 ಕೋಟಿ ರು. ಅಧಿಕ ಮೊತ್ತದ ತೆರಿಗೆ ವಂಚಿಸಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್‌ ಆರೋಪಿಸಿದ್ದಾರೆ.

ಬಿಬಿಎಂಪಿಗೆ ರಾಕ್‌ಲೈನ್ ವೆಂಕಟೇಶ್ ಕೋಟ್ಯಂತರ ರು. ತೆರಿಗೆ ವಂಚನೆ: ಎನ್.ಆರ್. ರಮೇಶ್ ಆರೋಪ
ರಾಕ್ ಲೈನ್ ವೆಂಕಟೇಶ್
Published On :

ಬೆಂಗಳೂರು: ರಾಕ್‌ಲೈನ್‌ ಮಾಲ್‌ನ ಮಾಲೀಕ ರಾಕ್‌ಲೈನ್‌ ವೆಂಕಟೇಶ್‌ ಮತ್ತು ಪದ್ಮಕುಮಾರಿ ಅವರು ಬಿಬಿಎಂಪಿಗೆ 8.5 ಕೋಟಿ ರು. ಅಧಿಕ ಮೊತ್ತದ ತೆರಿಗೆ ವಂಚಿಸಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್‌ ಆರೋಪಿಸಿದ್ದಾರೆ. 

ಬಿಬಿಎಂಪಿಯ ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿರುವ ರಾಕ್‌ಲೈನ್‌ ಮಾಲ್‌ ಕೇವಲ 48,500 ಚದರ ಅಡಿ ವಿಸ್ತೀರ್ಣ ಇದೆ ಎಂದು ಬಿಬಿಎಂಪಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ, ಆರು ಮಹಡಿ ಸೇರಿದಂತೆ 1,22,743 ಚದರ ಅಡಿ ವಿಸ್ತಾರದಲ್ಲಿ ಈ ಮಾಲ್ ನಿರ್ಮಾಣಗೊಂಡಿದೆ ಎಂದು ಅವರು ದೂರಿದರು.

ಪಾಲಿಕೆಗೆ ಬೃಹತ್‌ ಮೊತ್ತದ ತೆರಿಗೆ ವಂಚಿಸಿರುವ ಬಗ್ಗೆ ಮಹಾಲೆಕ್ಕಪರಿಶೋಧಕರ ಕಚೇರಿಯ ಅಧಿಕಾರಿಗಳು ಮತ್ತು ದಾಸರಹಳ್ಳಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆ ಕಾರ್ಯದಲ್ಲಿ ತಿಳಿದು ಬಂದಿದೆ. 74,243 ಚದರ ಅಡಿ ವಿಸ್ತೀರ್ಣವನ್ನು ಮುಚ್ಚಿಟ್ಟು, ಪಾಲಿಕೆಗೆ ತೆರಿಗೆ ವಂಚಿಸಲಾಗಿದೆ’ ಎಂದು ಹೇಳಿದರು.

2012ರ ಅ.25ರಂದು ರು 3.78 ಲಕ್ಷ ಮಾತ್ರ ತೆರಿಗೆ ಪಾವತಿಸಿದ್ದಾರೆ. ಬಡ್ಡಿ ಸೇರಿದಂತೆ 2.63 ಕೋಟಿ ಪಾವತಿಸುವಂತೆ 2015ರಲ್ಲಿಯೇ ಬಿಬಿಎಂಪಿಯು ರಾಕ್‌ಲೈನ್‌ ವೆಂಕಟೇಶ್‌ ಅವರಿಗೆ ನೋಟಿಸ್ ನೀಡಿತ್ತು. ಆದರೆ, ಪಾಲಿಕೆಯು ನೀಡಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ, ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಆದರೆ, ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿದೆ’ ಎಂದರು. 

‘2011–12ರಿಂದ 2020–21ರವರೆಗಿನ ಅವಧಿಯವರೆಗೆ ಒಟ್ಟು 3.8 ಕೋಟಿ ರು ಆಸ್ತಿ ತೆರಿಗೆ, ವಾರ್ಷಿಕ ಬಡ್ಡಿದರ, ದಂಡ ಸೇರಿ,  ಒಟ್ಟು 8.51 ಕೋಟಿ  ತೆರಿಗೆ ಪಾವತಿಸಬೇಕಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.