ದೇಶ

ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆಯಿಂದ 900 ಕೋಟಿ ರೂ. ಮೊತ್ತದ ತೆರಿಗೆ ವಂಚನೆ- ಆದಾಯ ತೆರಿಗೆ ಇಲಾಖೆ

ದೈನಿಕ ಭಾಸ್ಕರ್ ಆರು ವರ್ಷಗಳಿಂದ ಸುಮಾರು 900 ಕೋಟಿ ರೂ. ಮೊತ್ತದ ತೆರಿಗೆಯನ್ನು ಪಾವತಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ. ದೈನಿಕ್ ಭಾಸ್ಕರ್ ಪತ್ರಿಕಾ ಕಚೇರಿ ಮೇಲಿನ ದಾಳಿ ವೇಳೆಯಲ್ಲಿ ಸ್ಟಾಕ್ ಮಾರುಕಟ್ಟೆ ನಿಯಮಗಳ ಉಲ್ಲಂಘನೆ ಮತ್ತು ಪಟ್ಟಿಮಾಡಿದ ಕಂಪನಿಗಳಿಂದ ಲಾಭ ಗಳಿಸಿದ ಪುರಾವೆಗಳು ಕಂಡುಬಂದಿವೆ ಐಟಿ ತಿಳಿಸಿದೆ.

ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆಯಿಂದ 900 ಕೋಟಿ ರೂ. ಮೊತ್ತದ ತೆರಿಗೆ ವಂಚನೆ- ಆದಾಯ ತೆರಿಗೆ ಇಲಾಖೆ
ದೈನಿಕ್ ಭಾಸ್ಕರ್ ಪತ್ರಿಕಾ ಕಚೇರಿ
Published On :

ನವದೆಹಲಿ: ದೈನಿಕ ಭಾಸ್ಕರ್ ಆರು ವರ್ಷಗಳಿಂದ ಸುಮಾರು 900 ಕೋಟಿ ರೂ. ಮೊತ್ತದ ತೆರಿಗೆಯನ್ನು ಪಾವತಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ. ದೈನಿಕ್ ಭಾಸ್ಕರ್ ಪತ್ರಿಕಾ ಕಚೇರಿ ಮೇಲಿನ ದಾಳಿ ವೇಳೆಯಲ್ಲಿ ಸ್ಟಾಕ್ ಮಾರುಕಟ್ಟೆ ನಿಯಮಗಳ ಉಲ್ಲಂಘನೆ ಮತ್ತು ಪಟ್ಟಿಮಾಡಿದ ಕಂಪನಿಗಳಿಂದ ಲಾಭ ಗಳಿಸಿದ ಪುರಾವೆಗಳು ಕಂಡುಬಂದಿವೆ ಐಟಿ ತಿಳಿಸಿದೆ. 

ಶೋಧ ಕಾರ್ಯಾಚರಣೆ ವೇಳೆಯಲ್ಲಿ ದೈನಿಕ್ ಭಾಸ್ಕರ್ ಅನೇಕ ಕಂಪನಿಗಳನ್ನು ಅವರ ಉದ್ಯೋಗಿಗಳ ಹೆಸರಿನಲ್ಲಿ ನಡೆಸುತ್ತಿದೆ. ಉದ್ಯೋಗಿಗಳ ಹೆಸರನ್ನು ನಕಲಿ ವೆಚ್ಚ ತೋರಿಸಲು ಬಳಸಲಾಗುತಿತ್ತು. ಅನೇಕ ಸಿಬ್ಬಂದಿಗಳ ಹೆಸರನ್ನು ಪಾಲುದಾರರು ಮತ್ತು ನಿರ್ದೇಶಕರಾಗಿ ಉಪಯೋಗಿಸಲಾಗಿದೆ.ಅಂತಹ ಕಂಪನಿಗಳ ಬಗ್ಗೆ ಅರಿವಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಐಟಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಉತ್ತಮ ನಂಬಿಕೆಯಿಂದ ತಮ್ಮ ಆಧಾರ್ ಕಾರ್ಡ್ ಮತ್ತು ಡಿಜಿಟಲ್ ಸಹಿಯನ್ನು ಉದ್ಯೋಗದಾತರಿಗೆನೀಡಿದ್ದರು.ಅವರಲ್ಲಿ ಕೆಲವರು ಸಂಬಂಧಿಕರಿದ್ದಾರೆ. ಅವರು ಸ್ವಇಚ್ಚೆಯಿಂದ ಮತ್ತು ಉದ್ದೇಶಪೂರ್ವಕವಾಗಿ ಪತ್ರಿಕೆಗಳಿಗೆ ಸಹಿ ಹಾಕಿದ್ದರು ಆದರೆ ಕಂಪೆನಿಗಳ ವ್ಯವಹಾರ ಚಟುವಟಿಕೆಗಳ ಬಗ್ಗೆ ಯಾವುದೇ ಜ್ಞಾನ ಅಥವಾ ನಿಯಂತ್ರಣವನ್ನು ಹೊಂದಿರಲಿಲ್ಲ ಎಂದು ಐಟಿ ಹೇಳಿದೆ.

ಈವರೆಗೂ ಸುಮಾರು 900 ಕೋಟಿ ರೂ. ಮೊತ್ತದ ತೆರಿಗೆ ವಂಚನೆಯನ್ನು ದೈನಿಕ್ ಭಾಸ್ಕರ್ ಮಾಡಿದೆ. ಆದಾಗ್ಯೂ, ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಬೆಳಕಿಗೆ ಬಾರದ ಹಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.