tamilnadu

ಚೆನ್ನೈನಲ್ಲಿ ಭಾರಿ ಮಳೆ-ಗಾಳಿ ಅವಾಂತರ: ಸಂಜೆ 6 ರವರೆಗೂ ವಿಮಾನಗಳ ಆಗಮನ ರದ್ದು
ನೆರೆ ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವ್ಯಾಪಕ ಅನಾನುಕೂಲ ಉಂಟಾಗಿದ್ದು, ಇದೀಗ ಚೆನ್ನೈನಲ್ಲಿ ಭಾರಿ ಮಳೆ ಮತ್ತು ಗಾಳಿ ಪರಿಣಾಮ ಸಂಜೆ 6ರವರೆಗೂ ವಿಮಾನಗಳ ಆಗಮನವನ್ನು ರದ್ದು ಮಾಡಲಾಗಿದೆ.

21ನೇ ವಯಸ್ಸಿಗೇ ಪಂಚಾಯಿತಿ ಅಧ್ಯಕ್ಷ ಗಾದಿ: ತಮಿಳುನಾಡು ಯುವತಿಯ 'ಅನು' ಸಾಧನೆ
ಇಡೀ ರಾಜ್ಯದಲ್ಲೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪಂಚಾಯಿತಿ ಅಧ್ಯಕ್ಷೆಯಾದ ಖ್ಯಾತಿ ಕೆ. ಅನು ಅವರ ಪಾಲಾಗಿದೆ. ತಮ್ಮ ಮೇಲೆ ಜನರು ಇರಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ಅನು ಭರವಸೆ ನೀಡಿದ್ದಾರೆ.

ಜಯಲಲಿತಾ ಸಮಾಧಿ ಸ್ಥಳಕ್ಕೆ 'ಚಿನ್ನಮ್ಮ' ಭೇಟಿ: ತಮಿಳುನಾಡು ರಾಜಕೀಯಕ್ಕೆ ಶಶಿಕಲಾ "ಮರು ಪ್ರವೇಶ" ಸಾಧ್ಯತೆ!
ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ವಿಕೆ ಶಶಿಕಲಾ ಭೇಟಿ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಚಿನ್ನಮ್ಮ ತಮಿಳುನಾಡು ರಾಜಕೀಯಕ್ಕೆ "ಮರು ಪ್ರವೇಶ" ಮಾಡುವ ಕುರಿತು ಘೋಷಣೆ ಹೊರಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಕಷ್ಟದಲ್ಲಿ ತಮಿಳು ಹಾಸ್ಯನಟ ವಡಿವೇಲು: ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆದೇಶ
ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ತಮಿಳು ಹಾಸ್ಯ ನಟ ವಡಿವೇಲು ಅವರಿಗೆ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆದೇಶ ಹೊರಡಿಸಿದೆ.

ಒಂದೇ ವೋಟ್ ನಲ್ಲಿ ಪಂಚಾಯಿತಿ ಎಲೆಕ್ಷನ್ ಸೋತರೂ ಚುನಾವಣಾ ಪ್ರಚಾರ ಭರವಸೆ ಈಡೇರಿಸಲು ಅಭ್ಯರ್ಥಿ ಮುಂದು
ಚುನಾವಣಾ ಪ್ರಚಾರ ವೇಳೆ ಅವರು ಕಳೆದ 10 ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಬಡ ಕುಟುಂಬವೊಂದನ್ನು ಭೇಟಿ ಮಾಡಿದ್ದರು. ಅವರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು.

ಜಿಂಕೆಗಳಿಗಾಗಿ 45 ಎಕರೆ ಭೂಮಿ ಮೀಸಲಿಟ್ಟ ರೈತ: ಕಳೆದ 20 ವರ್ಷಗಳಲ್ಲಿ ಜಿಂಕೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ
ಭೂ ದಾನ ಚಳವಳಿಯ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ತಮಿಳುನಾಡಿನ ರೈತರೊಬ್ಬರು ಪಿತ್ರಾರ್ಜಿತವಾಗಿ ಬಂದ 45 ಎಕರೆ ಭೂಮಿಯನ್ನು ಜಿಂಕೆಗಳಿಗಾಗಿ ಮೀಸಲಿಟ್ಟು ತ್ಯಾಗ ಮನೋಭಾವ ಮೆರೆದಿದ್ದಾರೆ.

ತಂದೆ-ತಾಯಿ ವಿರುದ್ಧವೇ ದೂರು ದಾಖಲಿಸಿದ ತಮಿಳು ನಟ ವಿಜಯ್!
ಖ್ಯಾತ ತಮಿಳು ನಟ ವಿಜಯ್ ಅವರು ತಮ್ಮ ಸ್ವಂತ ಪೋಷಕರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸಾಂಪ್ರದಾಯಿಕ ಆಟಗಳ ಮೊರೆ: ಮಧುರೈ ಶಾಲೆಯಲ್ಲಿ ವಿನೂತನ ಪ್ರಯೋಗ
ಇದಲ್ಲದೆ ಸಾಂಪ್ರದಾಯಿಕ ಆಟಗಳನ್ನು ಆಡುವುದರಿಂದ ಗಣಿತ ಲೆಕ್ಕ ಬಿಡಿಸುವುದು ಕೂಡಾ ಸುಲಭವಾಗುತ್ತದೆ ಎಂದು ಹಲವು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ. ಸಾಂಪ್ರದಾಯಿಕ ಆಟಗಳ ಮಹತ್ವವನ್ನು ಅರಿತಿದ್ದಾರೆ.

ಪರಿಸರ ನಾಶ ವಿರುದ್ಧ ಸೈಕ್ಲಿಸ್ಟ್ ಸಹೋದರರ ಸವಾಲ್: 48 ಗಂಟೆಗಳಲ್ಲಿ 5,000 ಸಸಿ ನೆಟ್ಟು ದಾಖಲೆ
ಪುಸ್ತಕ ತಿರುವಿ ಹಾಕುವಾಗ ಅಮ್ಮ ಇಟ್ಟಿದ್ದ ಎಲೆಯೊಂದು ಕೆಳಕ್ಕೆ ಬಿದ್ದಿತ್ತು. ಅದನ್ನು ಇಬ್ಬರೂ ಸೇರಿ ನೆಟ್ಟಿದ್ದರು. ಹೀಗೆ ಲಾಕ್ ಡೌನ್ ಸಮಯದಲ್ಲಿ ಪ್ರತಿದಿನ ಗಿಡ ನೆಡುವ ಹವ್ಯಾಸವನ್ನು ಇಬ್ಬರೂ ರೂಢಿಸಿಕೊಂಡಿದ್ದರು.

