21ನೇ ವಯಸ್ಸಿಗೇ ಪಂಚಾಯಿತಿ ಅಧ್ಯಕ್ಷ ಗಾದಿ: ತಮಿಳುನಾಡು ಯುವತಿಯ 'ಅನು' ಸಾಧನೆ
ಇಡೀ ರಾಜ್ಯದಲ್ಲೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪಂಚಾಯಿತಿ ಅಧ್ಯಕ್ಷೆಯಾದ ಖ್ಯಾತಿ ಕೆ. ಅನು ಅವರ ಪಾಲಾಗಿದೆ. ತಮ್ಮ ಮೇಲೆ ಜನರು ಇರಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ಅನು ಭರವಸೆ ನೀಡಿದ್ದಾರೆ.

ತೆಂಕಾಶಿ: ತಮಿಳುನಾಡಿನ ಶೆಂಗೊಟ್ಟಾಯ್ ಪ್ರಾಂತ್ಯದ ತೆರ್ಕುಮೆಡು ಪಂಚಾಯಿತಿಯಲ್ಲಿ ಈ ಬಾರಿ ಕೆ. ಅನು ಎಂಬ ಯುವತಿ ಗೆದ್ದಿದ್ದಾಳೆ. ಶೇ 43.84 ಮತಗಳನ್ನು ಅನು ಅವರು ಪಡೆದುಕೊಂಡಿದ್ದಾರೆ. ಅದರಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಆಕೆ ಗೆದ್ದಿರುವ ಮತಗಳಲ್ಲಿ ಏನೂ ವಿಶೇಷವಿಲ್ಲ. ಆದರೆ ವಿಶೇಷವಿರುವುದು ಆಕೆಯ ವಯಸ್ಸಿನಲ್ಲಿ. ಆಕೆಗಿನ್ನೂ 21 ವಯಸ್ಸು.
ಇದನ್ನೂ ಓದಿ: ಸೈಕಲೇರಿ ದಿಲ್ಲಿವರೆಗೂ ಟೀ ಮಾರಿದ ಮಲಯಾಳಿ ಚಾಯ್ ವಾಲಾ
ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ಅಚ್ಚರಿಯೇ ಸರಿ. ಇಡೀ ರಾಜ್ಯದಲ್ಲೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪಂಚಾಯಿತಿ ಅಧ್ಯಕ್ಷೆಯಾದ ಖ್ಯಾತಿ ಕೆ. ಅನು ಅವರ ಪಾಲಾಗಿದೆ.
ಅವರ ತಂದೆ ವಿ.ಕಣ್ಣನ್ ಮೂರು ಅವಧಿಗಳ ಕಾಲ ಅದೇ ಕ್ಷೇತ್ರದಲ್ಲಿ ಪಂಚಾಯಿತಿ ಅಧ್ಯಕ್ಷರಾಗಿದ್ದರು ಎನ್ನುವುದು ಗಮನಾರ್ಹ. ತಂದೆಯ ಕೆಲಸವನ್ನು ನೋಡುತ್ತಲೇ ಬೆಳೆದಿದ್ದರಿಂದ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು ಎಂದು ಅನು ಹೇಳುತ್ತಾರೆ. ಅನು ಇದೇ ವರ್ಷ ಇಂಗ್ಲಿಷ್ ಬ್ಯಾಚೆಲರ್ ಡಿಗ್ರಿಯನ್ನು ಪಡೆದಿದ್ದಾರೆ.
ತಮ್ಮ ಮೇಲೆ ಜನರು ಇರಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ಅನು ಭರವಸೆ ನೀಡಿದ್ದಾರೆ. ಸ್ತ್ರೀಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ ಕಿನ್ ಒದಗಿಸುವುದು, ಬಸ್ ಸೇವೆ ಒದಗಿಸುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವತ್ತ ಈಗಾಗಲೇ ಕೆಲಸಗಳು ನಡೆದಿರುವುದಾಗಿ ಅವರು ತಿಳಿಸಿದ್ದಾರೆ.
Related Article
ಶಾಲಾಶಿಕ್ಷಣ ವ್ಯವಸ್ಥೆ ಮರುರೂಪಿಸಲು 'ಸೂಪರ್ 30' ಹೀರೋ ಆನಂದ್ ಕುಮಾರ್ ನೆರವು ಕೋರಿದ ಜಪಾನ್
ಸೆಲಬ್ರಿಟಿಗಳ ಮಕ್ಕಳು ಖುಷಿಯಾಗಿರುತ್ತಾರೆ ಅನ್ಕೊಂಡಿದ್ದೀರಾ? ಅದು ಸುಳ್ಳು: ಸಿದ್ಧಾರ್ಥ ಮಲ್ಯ
ಉತ್ತರ ಕರ್ನಾಟಕದಲ್ಲಿ ಸಂಗೀತ 'ಸೇವೆ': ವೀರೇಶ್ವರ ಪುಣ್ಯಾಶ್ರಮ
ಯುನೆಸ್ಕೊ ಪಟ್ಟಿಯಲ್ಲಿ ಕರ್ನಾಟಕದ ಕೇವಲ 6 ತಾಣ: ಹಲವು ಪಾರಂಪರಿಕ ಸ್ಥಳಗಳು ವಿನಾಶದ ಅಂಚಿನಲ್ಲಿ!
ಭಾರತೀಯ ಮೂಲದ ಬಾಲಕಿಗೆ ಬ್ರಿಟನ್ ಪ್ರಧಾನಿ ಪ್ರಶಸ್ತಿ: ಹವಾಮಾನ ಬದಲಾವಣೆ ಜಾಗೃತಿಗೆ ಸಂದ ಗೌರವ
ವಿಶ್ವ ಸರ್ವಧರ್ಮ ಸಂಸತ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಬೆಂಗಳೂರಿನ ಗಾಯಕಿ ದೀಪ್ತಿ ನವರತ್ನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


