ಶಾಲಾಶಿಕ್ಷಣ ವ್ಯವಸ್ಥೆ ಮರುರೂಪಿಸಲು 'ಸೂಪರ್ 30' ಹೀರೋ ಆನಂದ್ ಕುಮಾರ್ ನೆರವು ಕೋರಿದ ಜಪಾನ್
'I'm beside you' ಎನ್ನುವ ಜಪಾನಿ ಸಂಸ್ಥೆಯೊಂದು ಆನಂದ್ ಕುಮಾರ್ ಅವರನ್ನು ಶಿಕ್ಷಕರನ್ನಾಗಿ ಆಯ್ಕೆ ಮಾಡಿಕೊಂಡಿದೆ.

ನವದೆಹಲಿ: ಕ್ವೀನ್ ಸಿನಿಮಾ ನಿರ್ದೇಶಕ ವಿಕಾಸ್ ಬಾಲ್ ಅವರ ಸೂಪರ್ 30 ಸಿನಿಮಾ ನೆನಪಿರಬಹುದು. ದೇಶದ ಪ್ರತಿಷ್ಟಿತ ವಿದ್ಯಾಸಂಸ್ಥೆಯಾಗಿರುವ ಐಐಟಿ ಸೇರುವ ಆಕಾಂಕ್ಷೆ ಹಂದಿದ್ದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಗಣಿತಜ್ನನ ಕಥೆಯನ್ನು ಚಿತ್ರ ಹೊಂದಿತ್ತು. ಹೃತಿಕ್ ರೋಷನ್ ಆ ಚಿತ್ರದ ನಾಯಕರಾಗಿ ನಟಿಸಿದ್ದರು. ಅವರ ಬಗ್ಗೆ ಇಲ್ಲಿ ಮಾತನಾಡುತ್ತಿಲ್ಲ.
ನಿಜ ಜೀವನದಲ್ಲಿ ಸೂಪರ್ 30 ಎನ್ನುವ ಸಂಸ್ಥೆ ಕಟ್ಟಿದ ಆನಂದ್ ಕುಮಾರ್ ಅವರ ಕುರಿತಾದ ಸುದ್ದಿ ಇದು. ಅವರ ಜೀವನಕಥೆಯನ್ನು ಆಧರಿಸಿಯೇ ಸಿನಿಮಾ ನಿರ್ಮಾಣಗೊಂಡಿದ್ದು. ಇದೀಗ ಜಪಾನ್ ತನ್ನ ದೇಶದ ಶಾಲಾಶಿಕ್ಷಣ ವ್ಯವಸ್ಥೆಯನ್ನು ಮರು ರೂಪಿಸಲು ಆನಂದ್ ಕುಮಾರ್ ಅವರ ಸಹಾಯವನ್ನು ಕೋರಿದೆ.
'I'm beside you' ಎನ್ನುವ ಜಪಾನಿ ಸಂಸ್ಥೆಯೊಂದು ಆನಂದ್ ಕುಮಾರ್ ಅವರನ್ನು ಶಿಕ್ಷಕರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಆನಂದ್ ಕುಮಾರ್ ಲಕ್ಷಾಂತರ ಮಂದಿ ಜಪಾನಿ ಶಾಲಾ ವಿದ್ಯಾರ್ಥಿಗಳಿಗೆ ಆನ್ ಲೈನಿನಲ್ಲಿ ಪಾಠ ಮಾಡಲಿದ್ದಾರೆ.
Related Article
ಸೋಲಾರ್ ಪಾರ್ಕ್ ನಿಂದ ಉಂಟಾಗುತ್ತಿರುವ ತಾಪಮಾನ ಹೆಚ್ಚಳದ ಬಗ್ಗೆ ಅಧ್ಯಯನ ಮಾಡುತ್ತಿರುವೆ: ಇಂಧನ ಸಚಿವ ಸುನಿಲ್ ಕುಮಾರ್
ಉತ್ತರ ಕರ್ನಾಟಕದಲ್ಲಿ ಸಂಗೀತ 'ಸೇವೆ'!
ಯುನೆಸ್ಕೊ ಪಟ್ಟಿಯಲ್ಲಿ ಕರ್ನಾಟಕದ ಕೇವಲ 6 ತಾಣ: ಹಲವು ಪಾರಂಪರಿಕ ಸ್ಥಳಗಳು ವಿನಾಶದ ಅಂಚಿನಲ್ಲಿ!
ಭಾರತೀಯ ಮೂಲದ ಬಾಲಕಿಗೆ ಬ್ರಿಟನ್ ಪ್ರಧಾನಿ ಪ್ರಶಸ್ತಿ: ಹವಾಮಾನ ಬದಲಾವಣೆ ಜಾಗೃತಿಗೆ ಸಂದ ಗೌರವ
ಅಪಾಯ ಲೆಕ್ಕಿಸದೆ ಮುಳುಗುತ್ತಿರುವವರ ರಕ್ಷಿಸುವ ಆಪತ್ಬಾಂಧವ, ಮುಳುಗುತಜ್ಞ ಉಡುಪಿಯ ಆಕ್ವಾಮ್ಯಾನ್ ಈಶ್ವರ್ ಮಲ್ಪೆ
ವಿಮಾನ 2 ಗಂಟೆ ತಡವಾದುದಕ್ಕೆ ಪ್ರಯಾಣಿಕರಿಗೆ ಗಗನಸಖಿಯರ ಪತ್ರ: ಕೋಪ ಶಮನಕ್ಕೆ ವಿನೂತನ ಮಾರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


