ಸೈಕಲೇರಿ ದಿಲ್ಲಿವರೆಗೂ ಟೀ ಮಾರಿದ ಮಲಯಾಳಿ ಚಾಯ್ ವಾಲಾ
ಹಳ್ಳಿಯಿಂದ ದಿಲ್ಲಿಯ ಗದ್ದುಗೆವರೆಗೂ ಏರುವಲ್ಲಿ ಚಾಯ್ ವಾಲಾ ಪ್ರಧಾನಿ ನರೇಂದ್ರ ಮೋದಿ ಸೈಕಲ್ ತುಳಿದಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲೊಬ್ಬ ಮಲಯಾಳಿ ಚಾಯ್ ವಾಲಾ ದಿಲ್ಲಿಯವರೆಗೂ ಸೈಕಲ್ ತುಳಿದು ದಾರಿಗುಂಟ ಚಾಯ್ ಮಾರಿದ್ದಾನೆ.

ಕೊಚ್ಚಿ: ಚಾಯ್ ಮಾರಿದವರು ದೇಶದ ಪ್ರಧಾನಿಯೂ ಆಗಬಹುದು ಎಂದು ಹೇಳಿದ್ದ ನರೇಂದ್ರ ಮೋದಿ ಚಾಯ್ ವಾಲಾಗಳಲ್ಲಿ ಮಾತ್ರವಲ್ಲದೆ ಯುವಪೀಳಿಗೆಯವರಲ್ಲಿ ಸ್ಫೂರ್ತಿಯನ್ನು ತುಂಬಿದ್ದರು.
ಇಲ್ಲೊಬ್ಬ ಮಲಯಾಳಿ ಚಾಯ್ ವಾಲಾ ಸೈಕಲ್ ಏರಿ ದಿಲ್ಲಿಯವರೆಗೂ ಚಾಯ್ ಮಾರುವ ಮೂಲಕ ಸಾಧನೆ ಮಾಡಿದ್ದಾನೆ. ನಿಧಿನ್ ಮಲಿಯೆಕ್ಕಲ್ ಆ ಸಾಧನೆಗೆ ಪಾತ್ರನಾದ ಯುವಕ. 24 ವರ್ಷದ ನಿಧಿನ್ ಚಾಯ್ ಮಾರುವ ವೃತ್ತಿಯಲ್ಲಿದ್ದಾನೆ. ತ್ರಿಶೂರ್ ಆತನ ಊರು.
ಎಲ್ಲರೂ ಬಿಜಿನೆಸ್ ಟ್ರಿಪ್ ಮಾಡಲು ದೇಶ ವಿದೇಶಗಳಿಗೆ ವಿಮಾನದಲ್ಲಿ ತೆರಳಿದರೆ, ತ್ರಿಶೂರ್ ನ ಚಾಯ್ ವಾಲಾ ನಿಧಿನ್ ತನ್ನ ತನ್ನ ಬಿಜಿನೆಸ್ ಟ್ರಿಪ್ ಗಾಗಿ ಸೈಕಲಿನಲ್ಲೇ ದೇಶ ಪ್ರವಾಸ ಮಾಡಿದ್ದಾನೆ.
ಆತನ ಬಿಜಿನೆಸ್ ಟ್ರಿಪ್ ಬುಧವಾರವಷ್ಘ್ಟೇ ಕೊನೆಗೊಂಡಿತ್ತು. ಆತ ಹೋದಲ್ಲೆಲ್ಲಾ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎನ್ನುತ್ತಾನೆ ಆತ. ಸೆಪ್ಟೆಂಬರ್ 27ರಂದು ಆತ ಸೈಕಲ್ ಏರಿದ್ದ ಎನ್ನುವುದು ಗಮನಾರ್ಹ.
ಚಾಯ್ ಮಾರಾಟದಿಂದ ಬಂದ ಹಣವನ್ನು ಆತ ಎನ್ ಜಿ ಒ ಸಂಘಟನೆಗೆ ದೇಣಿಗೆಯಾಗಿ ನೀಡುವ ಉದ್ದೇಶವನ್ನು ಹೊಂದಿದ್ದಾನೆ.
Related Article
ಶಾಲಾಶಿಕ್ಷಣ ವ್ಯವಸ್ಥೆ ಮರುರೂಪಿಸಲು 'ಸೂಪರ್ 30' ಹೀರೋ ಆನಂದ್ ಕುಮಾರ್ ನೆರವು ಕೋರಿದ ಜಪಾನ್
ಯುನೆಸ್ಕೊ ಪಟ್ಟಿಯಲ್ಲಿ ಕರ್ನಾಟಕದ ಕೇವಲ 6 ತಾಣ: ಹಲವು ಪಾರಂಪರಿಕ ಸ್ಥಳಗಳು ವಿನಾಶದ ಅಂಚಿನಲ್ಲಿ!
ಭಾರತೀಯ ಮೂಲದ ಬಾಲಕಿಗೆ ಬ್ರಿಟನ್ ಪ್ರಧಾನಿ ಪ್ರಶಸ್ತಿ: ಹವಾಮಾನ ಬದಲಾವಣೆ ಜಾಗೃತಿಗೆ ಸಂದ ಗೌರವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


