ಚಿಕನ್, ಫಿಶ್ ತ್ಯಾಜ್ಯದಿಂದ ಪರಿಸರಸ್ನೇಹಿ ಉತ್ಪನ್ನ ತಯಾರಿ: ಪಿಯುಸಿ ವಿದ್ಯಾರ್ಥಿನಿಗೆ ರಾಷ್ಟ್ರಪತಿ ಪ್ರಶಸ್ತಿ
ಪುಕ್ಕಗಳಲ್ಲಿ ಶೇ.90ರಷ್ಟು ಕೆರಾಟಿನ್ ಇರುತ್ತದೆ, ಮೀನಿನ ಮುಳ್ಳುಗಳಲ್ಲಿ ಕೊಲಾಜೆನ್, ಕ್ಯಾಲ್ಷಿಯಂ ಕಾರ್ಬೊನೇಟ್ ಇರುತ್ತದೆ. ಈ ಅಂಶಗಳು ಇರುವುದರಿಂದ ಅವನ್ನು ಹಗುರ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಳಸಬಹುದು ಎನ್ನುತ್ತಾರೆ ಯಶಸ್ವಿ.

ವಿಜಯವಾಡ: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಮಾಟ್ಲಾ ಯಶಸ್ವಿ ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶೀಘ್ರದಲ್ಲಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಇನ್ಸ್ ಪೈರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ಅಪಾಯ ಲೆಕ್ಕಿಸದೆ ಮುಳುಗುತ್ತಿರುವವರ ರಕ್ಷಿಸುವ ಆಪತ್ಬಾಂಧವ, ಮುಳುಗುತಜ್ಞ ಉಡುಪಿಯ ಆಕ್ವಾಮ್ಯಾನ್ ಈಶ್ವರ್ ಮಲ್ಪೆ
ಚಿಕನ್ ಮತ್ತು ಫಿಶ್ ತ್ಯಾಜ್ಯದಿಂದ ಪರಿಸರಸ್ನೇಹಿ ವಸ್ತುಗಳನ್ನು ತಯಾರಿಸಿ ಅವರು ದೇಶದ ಗಮನ ಸೆಳೆದಿದ್ದಾರೆ. ದೇಶಾದ್ಯಂತ ಒಟ್ಟು 581 ಪ್ರಾಜೆಕ್ಟ್ ಗಳು ಪ್ರಶಸ್ತಿಗಾಗಿ ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಯಶಸ್ವಿ ಪ್ರಾಜೆಕ್ಟ್ ಆಯ್ಕೆಯಾಗಿದೆ. ತ್ಯಾಜ್ಯದಲ್ಲಿ ಚಿಕನ್ ಗರಿಗಳು ಮತ್ತು ಮೀನಿನ ಮುಳ್ಳುಗಳು ಪರಿಸರಕ್ಕೆ ಹಾನಿಯುಂಟುಮಾಡುತ್ತದೆ.
ಪುಕ್ಕಗಳಲ್ಲಿ ಶೇ.90ರಷ್ಟು ಕೆರಾಟಿನ್ ಇರುತ್ತದೆ, ಮೀನಿನ ಮುಳ್ಳುಗಳಲ್ಲಿ ಕೊಲಾಜೆನ್, ಕ್ಯಾಲ್ಷಿಯಂ ಕಾರ್ಬೊನೇಟ್ ಇರುತ್ತದೆ. ಈ ಅಂಶಗಳು ಇರುವುದರಿಂದ ಅವನ್ನು ಹಗುರ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಳಸಬಹುದು ಎನ್ನುತ್ತಾರೆ ಯಶಸ್ವಿ.
ಪುಕ್ಕಗಳ ಡಿಸ್ಕ್ ತಯಾರಿಸಿ ಅದನ್ನು ಕಾರ್ಖಾನೆಗಳ ಚಿಮಣಿ ಕೊಳವೆ ಮೇಲೆ ಇರಿಸುವುದರಿಂದ ವಾಯುಮಾಲಿನ್ಯವನ್ನು ನಿಯಂತ್ರಿಸಬಹುದು. ಚಿಕನ್ ಪುಕ್ಕ, ಮೀನಿನ ಮುಳ್ಳುಗಳನ್ನು ಬಳಸಿ ಬಯೊ ಪ್ಲಾಸ್ಟಿಕ್ ತಯಾರಿಸಬಹುದು ಎನ್ನುವುದರ ಬಗ್ಗೆಗೆ ಯಶಸ್ವಿ ಪ್ರಾಜೆಕ್ಟ್ ಮಾಹಿತಿ ನೀಡಿದೆ.
Related Article
ಬಿಬಿಎಂಪಿಯ ಬಸ್ ಶಾಲೆ 'ಸ್ಕೂಲ್ ಆನ್ ವೀಲ್ಸ್' ಯೋಜನೆಗೆ ದಸರಾ ನಂತರ ಮುಹೂರ್ತ ಫಿಕ್ಸ್
ಉತ್ತರ ಕರ್ನಾಟಕದಲ್ಲಿ ಸೇವೆಯಾದ ಸಂಗೀತ
ಯುನೆಸ್ಕೊ ಪಟ್ಟಿಯಲ್ಲಿ ಕರ್ನಾಟಕದ ಕೇವಲ 6 ತಾಣಗಳು: ವಿನಾಶದ ಅಂಚಿನಲ್ಲಿ ರಾಜ್ಯದ ಹಲವು ಪರಂಪರೆ ತಾಣಗಳು!
ವಿಶ್ವ ಸರ್ವಧರ್ಮ ಸಂಸತ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಬೆಂಗಳೂರಿನ ಗಾಯಕಿ ದೀಪ್ತಿ ನವರತ್ನ
ರೈತನಾಗಿ ಬದಲಾದ ಜಾರ್ಖಂಡ್ ಎಂಜಿನಿಯರ್ ಯಶೋಗಾಥೆ: ಸಾವಯವ ಕೃಷಿ ಮೂಲಕ ರೈತರ ಆದಾಯ ದುಪ್ಪಟ್ಟು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


