ರಾಜ್ಯ

ಬಿಬಿಎಂಪಿಯ ಬಸ್ ಶಾಲೆ 'ಸ್ಕೂಲ್ ಆನ್ ವೀಲ್ಸ್' ಯೋಜನೆಗೆ ದಸರಾ ನಂತರ ಮುಹೂರ್ತ ಫಿಕ್ಸ್

ಯೋಜನೆಗಾಗಿ ಬಿಎಂಟಿಸಿ ಯಿಂದ 10 ಬಸ್ಸುಗಳನ್ನು ತಲಾ 4 ಲಕ್ಷ ರೂ. ನೀಡಿ ಖರೀದಿಸಲಾಗಿದೆ. ಖರೀದಿಸಲ್ಪಟ್ಟಿರುವ ಬಸ್ಸುಗಳನ್ನು ಅಂಗನವಾಡಿ ಶಾಲೆಯಂತೆ ಪಾರ್ಪಾಡು ಮಾಡಲಾಗಿದೆ.

ಬಿಬಿಎಂಪಿಯ ಬಸ್ ಶಾಲೆ 'ಸ್ಕೂಲ್ ಆನ್ ವೀಲ್ಸ್' ಯೋಜನೆಗೆ ದಸರಾ ನಂತರ ಮುಹೂರ್ತ ಫಿಕ್ಸ್
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಕೂಲ್ ಆನ್ ವೀಲ್ಸ್ ಯೋಜನೆ ದಸರಾ ಹಬ್ಬದ ನಂತರ ಜಾರಿಗೆ ಬರಲಿದೆಯೆಂದು ಬಿಬಿಎಂಪಿ ತಿಳಿಸಿದೆ. ಶಾಲೆ ತೊರೆದ ಮಕ್ಕಳಿಗೆ ಬಸ್ಸಿನಲ್ಲಿಯೇ ಶಿಕ್ಷಣ ನೀಡುವುದು ಈ ಯೋಜನೆ ಉದ್ದೇಶ.

ಶಿಕ್ಷಣ ಇಲಾಖೆ ಈ ಯೋಜನೆಯ ರೂಪುರೇಷೆಯನ್ನು ಪರಿಶೀಲಿಸುತ್ತಿದ್ದು ಅಂತಿಮ ರೂಪ ನೀಡಲಿದೆ. ಈ ಬಸ್ ಗಳಲ್ಲಿ ಎನ್ ಜಿ ಒ ಪ್ರತಿನಿಧಿ ಇರಲಿದ್ದು ಮಾಂಟೆಸ್ಸರಿ ಮಾದರಿಯಲ್ಲಿ ಮಕ್ಕಳಿಗೆ ಶಿಕ್ಷನ ಒದಗಿಸಲಿದ್ದಾರೆ. 

ಫೆಬ್ರವರಿ ತಿಂಗಳಲ್ಲಿಯೇ ಈ ಯೋಜನೆ ಕಾರ್ಯರೂಪಕ್ಕೆ ಬರಬೇಕಾಗಿತ್ತಾದರೂ ಕಳೆದ 6 ತಿಂಗಳಿನಿಂದ ಮುಂದೂಡಲ್ಪಡುತ್ತಿತ್ತು. ಯೋಜನೆಗಾಗಿ ಬಿಎಂಟಿ ಯಿಂದ 10 ಬಸ್ಸುಗಳನ್ನು ತಲಾ 4 ಲಕ್ಷ ನೀಡಿ ಖರೀದಿಸಲಾಗಿದೆ. ಖರೀದಿಸಲ್ಪಟ್ಟಿರುವ ಬಸ್ಸುಗಳನ್ನು ಅಂಗನವಾಡಿ ಶಾಲೆಯಂತೆ ಪಾರ್ಪಾಡು ಮಾಡಲಾಗಿದೆ.

Related Article

ಹೈಟೆಕ್ ಲ್ಯಾಬ್: ಮಣಿಪಾಲ್ ಆಸ್ಪತ್ರೆ ಜೊತೆ ಬಿಬಿಎಂಪಿ ಒಪ್ಪಂದ

ಮಳೆ ಪರಿಸ್ಥಿತಿ ನಿರ್ವಹಣೆಗೆ 63 ಉಪವಿಭಾಗಗಳಲ್ಲಿ ನಿಯಂತ್ರಣ ಕೊಠಡಿ ಸ್ಥಾಪನೆ: ಬಿಬಿಎಂಪಿ

ಬೆಂಗಳೂರು: ಧ್ವಂಸಗೊಳಿಸಿದ್ದ ಮೆಟ್ಟಿಲೇಣಿ ಪುನರ್ ನಿರ್ಮಾಣಕ್ಕೆ ಬಿಬಿಎಂಪಿಗೆ ಪ್ಲ್ಯಾನ್ ನೀಡಲಿರುವ ಮಾನ್ಯತಾ ಟೆಕ್ ಪಾರ್ಕ್

ಮಂತ್ರಿ ಮಾಲ್‌ನಿಂದ 5 ಕೋಟಿ ರೂ. ಬಾಕಿ ಆಸ್ತಿ ತೆರಿಗೆ ವಸೂಲಿ: ಬಿಬಿಎಂಪಿ

ಶಿಥಿಲಗೊಂಡ ಕಟ್ಟಡಗಳ ಮರು ಸಮೀಕ್ಷೆ ನಡೆಸಿ: ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.