ತ್ಯಾಜ್ಯ

ಬೆಂಗಳೂರಿನಲ್ಲಿ 'ತ್ಯಾಜ್ಯ ಮುಕ್ತ' ಆಪರೇಷನ್: ಒಂದೇ ತಿಂಗಳಲ್ಲಿ 1.40 ಲಕ್ಷ ಟನ್ ಕಸ ತೆರವುಗೊಳಿಸಿದ GBA..!
ತಿಂಗಳ ಕಾಲ ನಡೆದ ಅಭಿಯಾನದ ವೇಳೆ ಜಿಬಿಎಗೆ ಒಟ್ಟು 6,819 ಮನವಿಗಳು ಬಂದಿದ್ದು, ಆಗಸ್ಟ್‌ನಲ್ಲಿ ಪ್ರತಿದಿನ ಸರಾಸರಿ 2,650 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.

ತ್ಯಾಜ್ಯ ತೆರವುಗೊಳಿಸದಿದ್ದರೆ ಸರ್ಕಾರಿ ಇಲಾಖೆಗಳಿಗೆ ನೊಟೀಸ್: ಬೆಂಗಳೂರಿನ ಪಾಲಿಕೆಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ
ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಆಗಸ್ಟ್ 1ರಿಂದ ಆಗಸ್ಟ್ 6ರವರೆಗೆ ನಗರದ 453 ಸಾರ್ವಜನಿಕ ಸ್ಥಳಗಳಿಂದ 10,056 ಟನ್ ನಿರ್ಮಾಣ ಮತ್ತು ಕೆಡವುವಿಕೆ (C&D) ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದರು.

ವಿಶ್ವ ಪರಿಸರ ದಿನಾಚರಣೆ: ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ 100 ಟನ್ ತ್ಯಾಜ್ಯ ತೆರವು..!
ಸ್ವಚ್ಛತಾ ಕಾರ್ಯಕ್ಕಾಗಿ 1,600ಕ್ಕೂ ಹೆಚ್ಚು ಪೌರಕಾರ್ಮಿಕರು, ಆಟೋ ಟಿಪ್ಪರ್ ಚಾಲಕರು, ಮಾರ್ಷಲ್‌ಗಳು ಹಾಗೂ ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು.

ಬೆಂಗಳೂರಿಗರೇ ಎಚ್ಚರ... ಮಿಶ್ರ ಕಸ ಹಾಕಿದರೆ ಮನೆ ಬಾಗಿಲಿಗೇ ಬಂದು ಬೀಳುತ್ತೆ ಲೋಡ್ ತ್ಯಾಜ್ಯ..!
ಮಿಶ್ರ ಕಸ ಹಾಕುವವರಿಗೆ ದಂಡ ವಿಧಿಸುವುದೂ ಅಲ್ಲದೆ, ಅವರ ಮನೆಯ ಮುಂದೆಯೇ ಲೋಡ್ ಕಸವನ್ನು ಸುರಿಯಲು ನಿರ್ಧರಿಸಿದೆ.

ಕನಕಪುರ ಏಕೆ ಗಬ್ಬೆದ್ದು ನಾರುತ್ತಿದೆ? ತ್ಯಾಜ್ಯ ವಿಲೇವಾರಿಯಾಕಿಲ್ಲ?: ಉಪ ಲೋಕಾಯುಕ್ತ ಮಹತ್ವದ ಸೂಚನೆ
ತ್ಯಾಜ್ಯದ ಅಸಮರ್ಪಕ ವಿಲೇವಾರಿಯಿಂದಾಗಿ ಕನಕಪುರ ಪಟ್ಟಣದ ಅರಳಾಲು ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸಂಗ್ರಹವಾಗಿರುವ 16,994 ಟನ್ ತ್ಯಾಜ್ಯ ಕೊಳೆಯುತ್ತಿದ್ದು ಇದು ಪರಿಸರಕ್ಕೆ ಹಾಗೂ ಜನರಿಗೆ ಗಂಭೀರ ಅಪಾಯವನ್ನುಂಟುಮಾಡಿದೆ.

ಬೆಂಗಳೂರು: ಕಸ ಸುಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು BSWML ಮುಂದು..!
ಬೇರ್ಪಡಿಸಿದ ನಂತರ ಕಸವನ್ನು ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ಅದನ್ನು ಸುಟ್ಟು ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ, ಜನರು ನಗರದಲ್ಲಿ ಎಲ್ಲೆಂದರಲ್ಲಿ ಕಸವನ್ನು ಸುಟ್ಟರೆ ಅದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ.

ರಸ್ತೆ ಬದಿ ಕಸ ಎಸೆಯುವವರೇ ಎಚ್ಚರ..: ನಿಮ್ಮ ಮನೆ ಮುಂದೆಯೇ ತ್ಯಾಜ್ಯ ಸುರಿದು, ಭಾರೀ ದಂಡ ವಿಧಿಸಲಿದ್ದಾರೆ ಅಧಿಕಾರಿಗಳು!
ಬ್ರ್ಯಾಂಡ್ ಬೆಂಗಳೂರು ಎಂಬ ಇಮೇಜ್‌ಗೆ ಹಾನಿ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಹಲವಾರು ಆಯ್ಕೆಗಳನ್ನು ಅನ್ವೇಷಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಬೀದಿ ಬದಿ ಕಸ ಎಸೆಯುವವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ.

ಕಸದಿಂದ ರಸ ಅಂದ್ರೆ ಇದೇ ನೋಡಿ...: ವೇಸ್ಟ್ ಪ್ಲಾಸ್ಟಿಕ್‌ನಿಂದ ಕಲರ್'ಫುಲ್ ಟೈಲ್ಸ್ ಉತ್ಪಾದನೆ!
ಇಲ್ಲಿನ 23 ವಾರ್ಡ್‌ಗಳಲ್ಲಿರುವ ಅಂಗಡಿಗಳು ಮತ್ತು ಮನೆಗಳಿಂದ ಪುರಸಭೆಯು ಪ್ರತಿದಿನ 350 ಕೆಜಿ ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಸುಮಾರು 14.5 ಟನ್ ಘನತ್ಯಾಜ್ಯವನ್ನು ಸಂಗ್ರಹಿಸುತ್ತದೆ.

BBMP: ನಗರದ ಕಸ ಸಮಸ್ಯೆ ದೂರಾಗಿಸಲು ಕ್ರಮ; ದೂರು ನೀಡಲು ಪ್ರತ್ಯೇಕ ಕೇಂದ್ರ ಸ್ಥಾಪನೆ; WhatsApp ನಂಬರ್ ನೀಡಿದ ಪಾಲಿಕೆ!
ನಗರದಲ್ಲಿ ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್) ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ಬಿಬಿಎಂಪಿ, ಇದಕ್ಕಾಗಿ ದೂರು ಕೇಂದ್ರ ಸ್ಥಾಪಿಸಿ ಪ್ರತ್ಯೇಕವಾಗಿ ವಾಟ್ಸಪ್ ಸಂಖ್ಯೆಯನ್ನು ನೀಡಿದೆ.

