Taliban

ತಾಲಿಬಾನ್ ಕಮಾಂಡರ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷ: ಶಾಂತಿಯುತವಾಗಿ ಅಧಿಕಾರ ಬಿಟ್ಟುಕೊಟ್ಟ ಅಶ್ರಫ್ ಘನಿ
ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ಮುಂದಿನ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನವನ್ನು ಕೆಲ ಕ್ಷಣಗಳ ಹಿಂದಷ್ಟೇ ಅಧಿಕಾರ ತ್ಯಜಿಸಿದರೆಂದು ತಿಳಿದುಬಂದಿದೆ.

ಕಾಬೂಲ್ ಪ್ರವೇಶಿಸಿದ ತಾಲಿಬಾನ್
ಅಫ್ಘಾನಿಸ್ತಾನ ಅಧ್ಯಕ್ಷರ ಆಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಪ್ರಕಟಗೊಂಡಿದ್ದು, ಅದರಲ್ಲಿ ನಗರದ ಹೊರವಲಯಗಳಲ್ಲಿ ಗುಂಡಿನ ಕಾಳಗದ ಸದ್ದು ಕೇಳಿಬರುತ್ತಿರುವುದಾಗಿ ಬರೆಯಲಾಗಿದೆ.

ಜಲಾಲಾಬಾದ್'ನ್ನೂ ವಶಕ್ಕೆ ಪಡೆದ ಉಗ್ರರು; ಸರ್ಕಾರದ ನಿಯಂತ್ರಣದಲ್ಲಿರುವ ಕಾಬೂಲ್'ನ್ನೂ ಸುತ್ತುವರೆದಿರುವ ತಾಲಿಬಾನ್!
ಅಫ್ಘಾನಿಸ್ತಾನದ ಉತ್ತರ, ಪಶ್ಚಿಮ ಹಾಗೂ ದಕ್ಷಿಣ ಭಾಗವನ್ನು ಸಂಪೂರ್ಣ ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಇದೀಗ ಜಲಾಲಾಬಾದ್'ನ್ನೂ ವಶಕ್ಕೆ ಪಡೆದುಕೊಂಡಿದ್ದು, ಸರ್ಕಾರದ ವಶದಲ್ಲಿರುವ ಏಕೈಕ ನಗರ ಕಾಬೂಲ್'ನ್ನೂ ಸುತ್ತುವರೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ದಯನೀಯ; ವಿಶ್ವಸಂಸ್ಥೆ ಕಳವಳ
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ಅತ್ಯಂತ ದಯನೀಯ ಸ್ಥಿತಿಗೆ ತಲುಪುತ್ತಿದೆ. ತಾಲಿಬಾನ್ ಗಳ ಆಕ್ರಮಣದಿಂದ ಅಫ್ಘಾನಿಸ್ತಾನದಲ್ಲಿ ನಿಯಂತ್ರಣ ಸಂಪೂರ್ಣ ಕುಸಿದಿದೆ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಅಫ್ಘಾನ್ ರಾಜಧಾನಿ ಕಾಬೂಲ್ ನಿಂದ ಕೇವಲ ಏಳು ಮೈಲು ದೂರದ ಚಾರ್ ಅಸ್ಯಾಬ್ ಜಿಲ್ಲೆ ತಲುಪಿದ ತಾಲಿಬಾನ್!
ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ ದಕ್ಷಿಣಕ್ಕೆ ಒಂದು ಪ್ರಾಂತ್ಯವನ್ನು ವಶಪಡಿಸಿಕೊಂಡಿದೆ ಮತ್ತು ಉತ್ತರದ ಪ್ರಮುಖ ನಗರವೊಂದರ ಮೇಲೆ ಶನಿವಾರ ಮುಂಜಾನೆ ಪ್ರಬಲ ಮಾಜಿ ಸೇನಾಧಿಕಾರಿಗಳಿಂದ ಸಮರ್ಥಿಸಲ್ಪಟ್ಟ ಬಹುಮುಖಿ ದಾಳಿಯನ್ನು ಆರಂಭಿಸಿತು ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಸೇನಾ ಪಾತ್ರ ವಹಿಸದಂತೆ ಭಾರತಕ್ಕೆ ತಾಲೀಬಾನ್ ಎಚ್ಚರಿಕೆ!
ತಾಲೀಬಾನ್ ಉಗ್ರ ಸಂಘಟನೆ ಆಫ್ಘಾನಿಸ್ತಾನದಲ್ಲಿ ಸೇನಾ ಪಾತ್ರ ವಹಿಸದಂತೆ ಭಾರತಕ್ಕೆ ಎಚ್ಚರಿಕೆ ನೀಡಿದೆ.

ಅಫ್ಗಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ: ಮತ್ತೆ ನಾಲ್ಕು ನಗರಗಳು ತಾಲಿಬಾನ್ ವಶಕ್ಕೆ!
ಅಫ್ಗಾನಿಸ್ತಾನದ ದಕ್ಷಿಣ ಭಾಗವನ್ನು ದಾಟಿ ಮತ್ತೆ ನಾಲ್ಕು ಪ್ರಮುಖ ನಗರಗಳನ್ನು ತಾಲಿಬಾನ್ ಶುಕ್ರವಾರ ವಶಪಡಿಸಿಕೊಂಡಿದೆ. ಆ ಮೂಲಕ ಅಫ್ಗಾನಿಸ್ತಾನದ ಶೇ 75 ಭಾಗದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದಂತಾಗಿದೆ.

ಅಫ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ: ಹೆರಾತ್ ನಲ್ಲಿ ರಾಜ್ಯಪಾಲ, ಪೊಲೀಸರ ಸಮೇತ ಎಲ್ಲ ಸರ್ಕಾರಿ ಅಧಿಕಾರಿಗಳ ಶರಣಾಗತಿ
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದ್ದು, ಉಗ್ರರ ದಾಳಿಯಿಂದಾಗಿ ಆಫ್ಗಾನಿಸ್ತಾನದ ಹೆರಾತ್ ನಲ್ಲಿ ಸರ್ಕಾರಿ ಅಧಿಕಾರಿಗಳೇ ಉಗ್ರರಿಗೆ ಶರಣಾಗಿದ್ದಾರೆ.

ಅಫ್ಘಾನಿಸ್ತಾನದ 2ನೇ ಅತಿದೊಡ್ಡ ನಗರ ಕಂದಹಾರ್, ಲಷ್ಕರ್ ಗಹ್ ತಾಲಿಬಾನ್ ವಶಕ್ಕೆ!
ಅಫ್ಘಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್ ಅನ್ನು ಕೂಡ ತಾಲಿಬಾನ್ ಪಡೆಗಳು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

