Taliban

90 ದಿನಗಳಲ್ಲಿ ಕಾಬೂಲ್ ತಾಲಿಬಾನ್ ವಶಕ್ಕೆ: ಅಮೆರಿಕ ಗುಪ್ತಚರ ಸಂಸ್ಥೆ ಭವಿಷ್ಯ
ಮುಂದಿನ 30 ದಿನಗಳಲ್ಲಿ ಕಾಬೂಲ್ ಅನ್ನು ತಾಲಿಬಾನ್ ಸುತ್ತುವರಿಯಲಿದ್ದು, ಯಾವುದೇ ರೀತಿಯ ನೆರವು ರಾಜಧಾನಿ ಕಾಬೂಲಿಗೆ ತಲುಪದಂತೆ ಮಾಡುವ ಹುನ್ನಾರವನ್ನು ತಾಲಿಬಾನ್ ಈಗಾಗಲೇ ನಡೆಸುತ್ತಿದೆ.

ತಾಲಿಬಾನ್ ಆಕ್ರಮಣಕ್ಕೆ ಬೆದರಿ ಆಫ್ಘನ್ ಹಂಗಾಮಿ ವಿತ್ತ ಸಚಿವ ಪಲಾಯನ!
ಅಫ್ಘಾನಿಸ್ತಾನದ ಹಂಗಾಮಿ ವಿತ್ತಸಚಿವ ಖಾಲಿದ್ ಪಯೆಂದಾ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಲ್ಲದೆ ದೇಶ ಬಿಟ್ಟು ತೆರಳಿದ್ದಾರೆ.

ತಾಲಿಬಾನ್ ಹಿಂಸಾಚಾರ: ಅಫ್ಘಾನಿಸ್ತಾನದಲ್ಲಿರುವ ದೂತವಾಸ ಸಿಬ್ಬಂದಿ ವಾಪಸ್ ಕರೆಸಿಕೊಳ್ಳಲು ಭಾರತ ಕ್ರಮ
ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರು ಇಂದೇ ವಿಶೇಷ ವಿಮಾನದಲ್ಲಿ ಭಾರತಕ್ಕೆ ಮರಳುವಂತೆ ಭಾರತ ಸರ್ಕಾರ ಮನವಿ ಮಾಡಿದೆ. ಆಫ್ಘನ್ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಮಧ್ಯೆ ಭೀಕರ ಕಾಳಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಸಲಹೆ ನೀಡಿದೆ.

ಅಫ್ಘಾನಿಸ್ತಾನದ ಮೂರು ಪ್ರಮುಖ ನಗರಗಳು ತಾಲಿಬಾನ್ ವಶಕ್ಕೆ
ಅಫ್ಘಾನಿಸ್ತಾನದ ಮೂರು ಪ್ರಾಂತೀಯ ರಾಜಧಾನಿಗಳಾದ ಕುಂದುಜ್, ಸರ್ ಇ ಪುಲ್ ಮತ್ತು ತಲುಕನ್ ನಗರಗಳನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡಿದೆ. ಕಳೆದ ಎರಡು ದಶಕಗಳಿಂದ ದೇಶದಲ್ಲಿ ಠಿಕಾಣಿ ಹೂಡಿದ್ದ ಅಮೆರಿಕ ಮತ್ತು ನ್ಯಾಟೊ ಪಡೆಗಳು ಅಫ್ಘಾನಿಸ್ತಾನದಿಂದ ಕಾಲ್ತೆಗೆದ ಬೆನ್ನಲ್ಲೇ ಪರಿಸ್ಥಿತಿ ಲಾಭ ಪಡೆದುಕೊಳ್ಳಲು ತಾಲಿಬಾನ್ ಹವಣಿಸಿದೆ.

ಅಫ್ಘಾನ್ ಸರ್ಕಾರಿ ಮಾಧ್ಯಮ ವಿಭಾಗದ ಮುಖ್ಯಸ್ಥನ ಹತ್ಯೆ
ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಹತ್ಯೆ ಹೆಚ್ಚುತ್ತಿದ್ದು, ತಾಲಿಬಾನಿಗಳು ಶುಕ್ರವಾರ ಅಫ್ಘಾನಿಸ್ತಾನದ ಸರ್ಕಾರಿ ಮಾಧ್ಯಮ ಕೇಂದ್ರದ...

ತಾಲಿಬಾನಿಗಳು ಕೂಡ ಸಾಮಾನ್ಯ ನಾಗರೀಕರೇ, ಉಗ್ರರಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್
ತಾಲಿಬಾನಿಗಳೂ ಕೂಡ ಸಾಮಾನ್ಯ ನಾಗರೀಕರೇ, ಅವರೇನು ಉಗ್ರರಲ್ಲ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಬುಧವಾರ ಹೇಳಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಖ್ಯಾತ ಹಾಸ್ಯನಟ ನಜರ್ ಮೊಹಮ್ಮದ್ ಬರ್ಬರ ಹತ್ಯೆ
ಆಫ್ಘಾನಿಸ್ಥಾನದ ಕಂದಹಾರ್ ಪ್ರಾಂತ್ಯದಲ್ಲಿ ಖ್ಯಾತ ಹಾಸ್ಯ ನಟ ನಜರ್ ಮೊಹಮ್ಮದ್ ಅವರನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಜರ್ ಈ ಹಿಂದೆ ಸ್ಥಳಿಯ ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

ಕಂದಹಾರ್ ನಲ್ಲಿನ ಭಾರತೀಯ ರಾಯಭಾರಿ ಕಚೇರಿ ಮುಚ್ಚಲಾಗಿಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ
ಅಫ್ಘಾನಿಸ್ತಾನದ ಕಂದಹಾರ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚಲಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ.

ಶೇ.85 ಅಫ್ಘಾನ್ ಪ್ರಾಂತ್ಯ ನಮ್ಮ ಹಿಡಿತದಲ್ಲಿದೆ: ತಾಲಿಬಾನ್
ಇರಾನ್ ಅಫ್ಘಾನಿಸ್ತಾನದ ಪ್ರಮುಖ ವ್ಯಾಪಾರ ಮಾರ್ಗದಲ್ಲಿ ಒಂದಾದ ಇಸ್ಲಾಂ ಖುಲಾ ಗಡಿ ಪಟ್ಟಣ ಮತ್ತು ತುರ್ಕ್ ಮೇನಿಸ್ತಾನದ ಮತ್ತೊಂದು ವ್ಯಾಪಾರ ಮಾರ್ಗವಾಗಿರುವ ತೋ ರ್ಘುಂಡಿ ಗಡಿ ಪಟ್ಟಣವು ತಾಲಿಬಾನ್ ವಶವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

