Taliban

ಕಾಬೂಲ್ ವಿಮಾನ ನಿಲ್ದಾಣದಲ್ಲಿ 5 ಸಾವು: ಅಮೆರಿಕನ್ ಸೈನಿಕರ ಕೃತ್ಯ ಶಂಕೆ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬರುತ್ತಿರುವ ನಡುವೆಯೇ, ದೇಶದಿಂದ ಪಲಾಯನ ಮಾಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಐವರು ಮಂದಿ ಸಾವನ್ನಪ್ಪಿರುವ ಘಟನೆ ನಡೆಡಿದೆ.

ತಾಲಿಬಾನ್ ವಶದಲ್ಲಿ ಅಫ್ಘಾನಿಸ್ತಾನ: ಎಲ್ಲಾ ಭಾರತೀಯರ ಸ್ಥಳಾಂತರಿಸುವಂತೆ ಕೇಂದ್ರಕ್ಕೆ ಪಂಜಾಬ್ ಸಿಎಂ ಆಗ್ರಹ
ಅಫ್ಗಾನಿಸ್ತಾನವನ್ನು ತಾಲಿಬಾನ್ ಉಗ್ರರು ತಮ್ಮ ತೆಕ್ಕೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲಾ ಭಾರತೀಯರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸೋಮವಾರ ಆಗ್ರಹಿಸಿದ್ದಾರೆ.

ತಾಲಿಬಾನ್ ತೆಕ್ಕೆಯಲ್ಲಿ ಅಫ್ಘಾನಿಸ್ತಾನ: ವಿಮಾನ ಏರಲು ಮುಗಿಬಿದ್ದ ಜನ, ಗಾಳಿಯಲ್ಲಿ ಗುಂಡು ಹಾರಿಸಿದ ಅಮೆರಿಕಾ ಪಡೆ
ಅಫ್ಗಾನಿಸ್ತಾನವನ್ನು ತಾಲಿಬಾನ್ ಉಗ್ರರು ತಮ್ಮ ತೆಕ್ಕೆಗೆ ತೆಗೆದುಕೊಂಡ ಬೆನ್ನಲ್ಲೇ ಆತಂಕಗೊಂಡಿರುವ ಅಲ್ಲಿನ ಜನರು ರಾಷ್ಟ್ರ ತೊರೆಯಲು ತುದಿಗಾಲಲ್ಲಿ ನಿಂತಿದ್ದು, ಇದರಂತೆ ಸಾವಿರಾರು ಸಂಖ್ಯೆಯ ಜನರು ಕಾಬುಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ವಿಮಾನ ಏರಲು ನೂಕು ನುಗ್ಗಲು: ತಾಲಿಬಾನ್ ಗೆ ಬೆದರಿ ತಾಯ್ನಾಡು ತೊರೆಯಲು ಶ್ರೀಮಂತ ಆಫ್ಘನ್ನರ ಶತ ಪ್ರಯತ್ನ
ಬಸ್ಸು ರೈಲುಗಳನ್ನು ಏರಲು ಜನಸಾಮಾನ್ಯರು ಕರ್ಚೀಫು, ಟವೆಲ್ಲುಗಳನ್ನು ಹಿಡಿದು ಗುಂಪುಗಟ್ಟಿ ಅದರ ಹಿಂದೆ ಓಡುವಂತೆ ವಿಮಾನ ಏರಲು ಶ್ರೀಮಂತ ಆಫ್ಘನ್ನರು ಮುಗಿಬಿದ್ದಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ: ಬೈಡನ್ ರಾಜೀನಾಮೆಗೆ ಟ್ರಂಪ್ ಒತ್ತಾಯ
ಅಫ್ಘಾನಿಸ್ತಾನದಿಂದ ಸುಮಾರು 20 ವರ್ಷಗಳ ನಂತರ ಅಮೆರಿಕಾದ ಸೇನಾ ಪಡೆಗಳನ್ನು ಹಿಂಪಡೆದಿದ್ದರಿಂದ ತಾಲಿಬಾನ್ ಉಗ್ರರು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುವಂತಾಗಿದ್ದು, ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಲಿ ಅಧ್ಯಕ್ಷ ಜೋ- ಬೈಡೆನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಆಫ್ಘನ್ ಬಿಕ್ಕಟ್ಟು: ಭಾರತೀಯರ ಸುರಕ್ಷತೆಗೆ ಕೇಂದ್ರ ಸರ್ಕಾರದಿಂದ ಕ್ರಮ
ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನ್ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಕಾಬುಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗಳನ್ನು ಭಾರತಕ್ಕೆ ಕರೆಸಿಕೊಳ್ಳಲು ಭಾರತ ಗಂಭೀರ ಚಿಂತನೆ ನಡೆಸಿದೆ.

'ಮಾಜಿ ಅಧ್ಯಕ್ಷ ಅಶ್ರಫ್ ಘನಿ'...!!!: ಪ್ರಧಾನಿ ಹುದ್ದೆಗೆ ಅಶ್ರಫ್ ರಾಜಿನಾಮೆ?, ಆಫ್ಘನ್ ಆಡಳಿತ ತಾಲಿಬಾನ್ ತೆಕ್ಕೆಗೆ!
ಆಫ್ಘಾನಿಸ್ಕಾನ ಆಡಳಿತ ತಾಲಿಬಾನ್ ತೆಕ್ಕೆಗೆ ಜಾರುತ್ತಿದ್ದು, ಪ್ರಧಾನಿ ಹುದ್ದೆಗೆ ಅಶ್ರಫ್ ಘನಿ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ತಾಲಿಬಾನ್ ಆರ್ಭಟ: ದೇಶ ತೊರೆದ ಆಫ್ಘನ್ ಪ್ರಧಾನಿ ಅಶ್ರಫ್ ಘನಿ..?: ವರದಿ
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ತಾಲಿಬಾನ್ ಬಂಡುಕೋರರು ರಾಜಧಾನಿ ಕಾಬುಲ್ ಸುತ್ತುವರೆದಿರುವಂತೆಯೇ ಇತ್ತ ಆಫ್ಘನ್ ಪ್ರಧಾನಿ ಅಶ್ರಫ್ ಘನಿ ದೇಶ ತೊರೆದಿದ್ದಾರೆ ಎಂದು ಹೇಳಲಾಗಿದೆ.

ಅಫ್ಘಾನ್ ಬಿಕ್ಕಟ್ಟು: ಮುಂದಿನ ಕೆಲ ದಿನಗಳಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಬೇಡಿಕೆಯಿಟ್ಟ ತಾಲಿಬಾನ್
ಇನ್ನೂ ಕೆಲವೇ ದಿನಗಳಲ್ಲಿ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಳುವುದಕ್ಕೆ ತಾಲಿಬಾನ್ ಬಯಸಿರುವುದಾಗಿ ಉಗ್ರ ಗುಂಪಿನ ವಕ್ತಾರರೊಬ್ಬರು ಭಾನುವಾರ ಬಿಬಿಸಿಗೆ ಹೇಳಿದ್ದಾರೆ.

