Taliban

ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಪುನರುತ್ಥಾನದಿಂದ ಕಾಶ್ಮೀರದಲ್ಲಿ ಉಗ್ರರಿಗೆ ಉತ್ತೇಜನ: ತಜ್ಞರು
ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಕಾಶ್ಮೀರದಲ್ಲಿನ ಭದ್ರತೆ ಹಾಗೂ ಉಗ್ರರ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭದ್ರತಾ ತಜ್ಞರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತೇನೆ: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್
ಅಫ್ಘಾನಿಸ್ತಾನ ರಾಷ್ಟ್ರದಿಂದ ತಮ್ಮ ಸೇನೆಯಲನ್ನು ಹಿಂಪಡೆದುಕೊಂಡು ನಿರ್ಧಾರವನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದಲ್ಲಿನ ಆಫ್ಘನ್ ವಿದ್ಯಾರ್ಥಿಗಳಿಗೆ ತಮ್ಮ ದೇಶದ ಭವಿಷ್ಯದ್ದೇ ಚಿಂತೆ
ಹಲವಾರು ಬಾರಿ ಮನೆಗೆ ಕರೆ ಮಾಡಲು ಯತ್ನಿಸಿದೆ. ಆದರೆ ಕರೆ ಹೋಗಲಿಲ್ಲ. ನಂತರ ಇಂಟರ್ನೆಟ್ ಸಹಾಯದಿಂದ ಅವರನ್ನು ಸಂಪರ್ಕಿಸಿದೆ. ಅವರು ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದರು. ನನ್ನ ಮನಸ್ಸು ನಿರಾಳವಾಯಿತು.' ಎಂದು ಓರ್ವ ಆಫ್ಘನ್ ವಿದ್ಯಾರ್ಥಿ ತನ್ನ ಆತಂಕವನ್ನು ಮುಂದಿಟ್ಟಿದ್ದಾನೆ.

ತಾಲಿಬಾನ್ ಹಿಡಿತ: ಅಫ್ಘಾನ್ ತೊರೆಯಲು ಬಯಸುವ ಭಾರತೀಯರಿಗೆ ನೆರವಾಗುತ್ತೇವೆ - ಎಂಇಎ
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುವ ಬಗ್ಗೆ ಮೌನ ಮುರಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೋಮವಾರ ಕೇಂದ್ರ ಸರ್ಕಾರವು ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ.

ತಾಲಿಬಾನಿಗಳು ಇಷ್ಟು ಕಡಿಮೆ ಸಮಯದಲ್ಲಿ ಒಂದಿಡೀ ದೇಶ ವಶಪಡಿಸಿಕೊಂಡಿದ್ದು ಹೇಗೆ?
ಅಫ್ಘಾನಿಸ್ತಾನ ಸಂಸತ್ತಿನೊಳಗೆ ತಾಲಿಬಾನಿಗಳು ಬಂದೂಕುಧಾರಿಗಳಾಗಿ ನುಗ್ಗುವುದನ್ನು ಇಡೀ ಜಗತ್ತೇ ಆತಂಕದಿಂದ ನೋಡುತ್ತಿದೆ. ಈ ಸಮಯದಲ್ಲಿ ನಮ್ಮೆಲ್ಲರಲ್ಲೂ ಮೂಡುತ್ತಿರುವ ಪ್ರಶ್ನೆ ಹೀಗೂ ಉಂಟೆ ಎಂಬುದಲ್ಲ, ಅತ್ಯಂತ ಕಡಿಮೆ ಸಮಯದಲ್ಲಿ ತಾಲಿಬಾನಿಗಳು ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು.

ನಮ್ಮ ಕೈಕಟ್ಟಿ ಹಾಕಿ ಉಗ್ರರಿಗೆ ದೇಶ ಮಾರಾಟ ಮಾಡಿದ್ದಾರೆ: ಆಫ್ಘಾನ್ ಅಧ್ಯಕ್ಷರ ವಿರುದ್ಧ ರಕ್ಷಣಾ ಸಚಿವರ ಕಿಡಿ
ತಾಲಿಬಾನಿಗಳು ಅಂದುಕೊಂಡದ್ದಕ್ಕಿಂತ ವೇಗವಾಗಿ ಕಾಬೂಲ್ ಗೆ ಲಗ್ಗೆ ಇಟ್ಟಿದ್ದರು. ಇದರಿಂದ ಹೆದರಿ ತಾಲಿಬಾನಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ, ದೇಶ ಬಿಟ್ಟು ಪಲಾಯನ ಮಾಡಿರುವ ಅಧ್ಯಕ್ಷ ಅಶ್ರಫ್ ಘನಿ ವಿರುದ್ಧ ರಕ್ಷಣಾ ಸಚಿವರು ಕಿಡಿಕಾರಿದ್ದಾರೆ.

ಭೀಕರ ದೃಶ್ಯ: ಪ್ರಾಣ ಉಳಿಸಿಕೊಳ್ಳಲು ವಿಮಾನದ ಟೈರ್ ಮೇಲೆ ಹತ್ತಿದ ಅಫ್ಗಾನ್ ನಾಗರಿಕರು, ಕೆಳಗೆ ಬಿದ್ದು ಸಾವು, ವಿಡಿಯೋ!
ಅಘ್ಘಾನಿಸ್ತಾನ ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿದೆ. ಇನ್ನು ತಾಲಿಬಾನಿಗಳ ಅಟ್ಟಹಾಸಕ್ಕೆ ಹೆದರಿ ಅಲ್ಲಿನ ಸಿರಿವಂತರು ಸೇರಿದಂತೆ ನಾಗರಿಕರು ದೇಶವನ್ನು ತೊರೆಯಲು ಮುಂದಾಗಿದ್ದಾರೆ. ಹೀಗಾಗಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾವಿರಾರೂ ಸಂಖ್ಯೆಯಲ್ಲಿ ಜನರು ದಾಂಗುಡಿ ಇಟ್ಟಿದ್ದಾರೆ.

ಅಫ್ಘಾನಿಸ್ತಾನ ತೊರೆಯುವವರಿಗೆ ರಕ್ಷಣೆ ನೀಡಲು 64 ದೇಶಗಳ ಒಪ್ಪಿಗೆ
ತಾಲಿಬಾನ್ ಸಂಘಟನೆಯು ದೇಶವನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನವನ್ನು ತೊರೆಯಲು ಬಯಸುವ ಜನರ ಸುರಕ್ಷಿತ ಮತ್ತು ಕ್ರಮಬದ್ಧ ನಿರ್ಗಮನಕ್ಕಾಗಿ ಸಮ್ಮತಿಸಿ ಕನಿಷ್ಠ 64 ದೇಶಗಳು ಜಂಟಿ ಹೇಳಿಕೆಗೆ ಸಹಿ ಹಾಕಿವೆ.

"ಜಗತ್ತು ಆಫ್ಘಾನಿಸ್ತಾನದ ಕೈಬಿಟ್ಟಿದ್ದನ್ನು ನಂಬಲು ಸಾಧ್ಯವಾಗುತ್ತಿಲ್ಲ"
ಯುದ್ಧಗ್ರಸ್ತ ದೇಶವಾಗಿರುವ ಆಪ್ಘಾನಿಸ್ತಾನದಿಂದ ಕೆಲವು ಮಂದಿ ಆ.15 ರಂದು ರಾತ್ರಿ ದೆಹಲಿಗೆ ಬಂದಿದ್ದು, ಆಪ್ಘಾನಿಸ್ತಾನದಲ್ಲಿರುವ ತಮ್ಮ ಕುಟುಂಬದ ಸದಸ್ಯರ ಭದ್ರತೆ ಹಾಗೂ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

