Taiwan

ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ: ಆಸಿಯಾನ್ ಎಚ್ಚರಿಕೆ ನಡುವೆ ಚೀನಾ ಮಿಲಿಟರಿ ಕಸರತ್ತು ಆರಂಭ
ತೈವಾನ್ ಸುತ್ತುವರೆದಂತೆ ಚೀನಾದ ಅತಿದೊಡ್ಡ ಮಿಲಿಟರಿ ಕಸರತ್ತು ಗುರುವಾರ ಆರಂಭವಾಗಿದ್ದು, ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ ಗೆ ಭೇಟಿ ನೀಡಿದ ನಂತರ ಪ್ರಮುಖ ಅಂತರಾಷ್ಟ್ರೀಯ ಹಡಗು ಮಾರ್ಗಗಳಲ್ಲಿ ತನ್ನ ಪ್ರಬಲ ಪ್ರದರ್ಶನ ತೋರಿಸಲು ಚೀನಾ ಸಜ್ಜಾಗಿದೆ.

ಪೆಲೋಸಿ ನಿರ್ಗಮನದ ನಂತರ ತೈವಾನ್ ವಾಯು ರಕ್ಷಣಾ ವಲಯಕ್ಕೆ ಚೀನಾದ 27 ಯುದ್ಧ ವಿಮಾನಗಳ ಪ್ರವೇಶ
ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ ಗೆ ಭೇಟಿ ನೀಡಿ ವಾಪಸ್ ಆದ ಬೆನ್ನಲ್ಲೇ ಚೀನಾದ ಇಪ್ಪತ್ತೇಳು ಯುದ್ಧ ವಿಮಾನಗಳು ಬುಧವಾರ ತೈವಾನ್‌ನ ವಾಯು ರಕ್ಷಣಾ ವಲಯ ಪ್ರವೇಶಿಸಿವೆ ಎಂದು ತೈವಾನ್ ದೃಢಪಡಿಸಿದೆ.

ನ್ಯಾನ್ಸಿ ಪೆಲೊಸಿ ಭೇಟಿಗೆ ವಿರೋಧ: ತೈವಾನ್ ಮೇಲೆ ವ್ಯಾಪಾರ ನಿರ್ಬಂಧ ಹೇರಿದ ಚೀನಾ
ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಭೇಟಿ ನೀಡುತ್ತಿರುವುದನ್ನು ಚೀನಾ ತೀವ್ರವಾಗಿ ವಿರೋಧಿಸಿದೆ. ಹೀಗಾಗಿ ಚೀನಾ, ತೈವಾನ್‌ನಿಂದ ಹಣ್ಣು ಮತ್ತು ಮೀನುಗಳ ಆಮದಿನ ಮೇಲೆ ಬುಧವಾರ ನಿರ್ಬಂಧ ಹೇರಿದೆ.

ಬೆಂಕಿ ಜೊತೆ ಸರಸ ಬೇಡ ಎಂದಿದ್ದ ಚೀನಾಗೆ ಜೋ ಬೈಡನ್ ಭರ್ಜರಿ ಟಕ್ಕರ್; ತೈವಾನ್ ಗೆ ಅಧಿಕೃತ ಆಹ್ವಾನ
ತೈವಾನ್ ವಿಷಯವಾಗಿ ಅಮೆರಿಕ- ಚೀನಾ ನಡುವಿನ ಶೀತಲ ಸಮಯ ತೀವ್ರಗೊಳ್ಳುತ್ತಿದೆ.

ಚೀನಾದೊಂದಿಗಿನ ಸಂಘರ್ಷ: ತೈವಾನ್ ನಿಂದ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳ ನಿಯೋಜನೆ
ಚೀನಾದೊಂದಿಗೆ ಸಂಘರ್ಷ, ಶೀತಲ ಸಮರ ಎದುರಿಸುತ್ತಿರುವ ತೈವಾನ್, ತನ್ನ ವಾಯುಪಡೆಗೆ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳನ್ನು ನಿಯೋಜನೆ ಮಾಡಿದ್ದು ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.

ತೈವಾನ್-ಚೀನಾ ಬಿಕ್ಕಟ್ಟು ಹಿನ್ನಲೆ: ಭಾರತದಲ್ಲಿಯೇ ಉಳಿಯುತ್ತೇನೆ ಎಂದ ದಲೈಲಾಮಾ
ತೈವಾನ್ ಮತ್ತು ಚೀನಾ ದೇಶಗಳ ನಡುವಿನ ಬಿಕ್ಕಟ್ಟು ಉಲ್ಬಣವಾಗಿರುವ ಹಿನ್ನಲೆಯಲ್ಲಿ ಉಭಯ ದೇಶಗಳ ಸಂಬಂಧ ಸೂಕ್ಷ್ಮವಾಗಿದೆ. ಹೀಗಾಗಿ ತಾವು ಭಾರತದಲ್ಲಿಯೇ ಪ್ರಶಾಂತವಾಗಿರಲು ಬಯಸಿದ್ದೇನೆ ಎಂದು ಬೌದ್ಧ ಧಾರ್ಮಿಕ ಗುರು ದಲೈಲಾಮಾ ಹೇಳಿದ್ದಾರೆ.

ಕೋವಿಡ್-19: ತೈವಾನ್ ನಿಂದ ಭಾರತಕ್ಕೆ 500 ಆಕ್ಸಿಜನ್ ಸಿಲಿಂಡರ್, ಮತ್ತಿತರ ವೈದ್ಯಕೀಯ ಉಪಕರಣಗಳ ಪೂರೈಕೆ
ವಿನಾಶಕಾರಿ ಕೊರೋನಾವೈರಸ್ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವಾಗಿರುವ ತೈವಾನ್ ಭಾನುವಾರ 150 ಆಕ್ಸಿಜನ್ ಸಾಂದ್ರಕಗಳು ಮತ್ತು 500 ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಸಿದೆ.

ಇಡೀ ಪ್ರಪಂಚ ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸುತ್ತಿದ್ದರೂ, ಈ ಒಂದು ದೇಶದಲ್ಲಿ 200 ದಿನಗಳಿಂದ ಹೊಸ ಸೋಂಕು ಪ್ರಕರಣವೇ ದಾಖಲಾಗಿಲ್ಲ!
ಇಡೀ ಜಗತ್ತಿನಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿದ್ದು, ಎಲ್ಲ ದೇಶಗಳಲ್ಲೂ ಪ್ರತೀ ನಿತ್ಯ ಲಕ್ಷಾಂತರ ಸಂಖ್ಯೆ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಈ ಒಂದು ದೇಶದಲ್ಲಿ ಕಳೆದ 200 ದಿನಗಳಿಂದ ಹೊಸ ಸೋಂಕು ಪ್ರಕರಣವೇ ದಾಖಲಾಗಿಲ್ಲ.

ಗೆಟ್ ಲಾಸ್ಟ್: ಭಾರತೀಯ ಮಾಧ್ಯಮಗಳ ಕುರಿತ ಚೀನಾ ಹೇಳಿಕೆಗೆ ತೈವಾನ್ ಕಠಿಣ ತಿರುಗೇಟು!
ಕಮ್ಯುನಿಸ್ಟ್ ರಾಷ್ಟ್ರ ಚೀನಾ ಭಾರತದ ಮೇಲೆ ತನ್ನ ನೀತಿಯನ್ನು ಹೇರುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ತೈವಾನ್‌ನ ಭಾರತೀಯ ಸ್ನೇಹಿತರ ಉತ್ತರ ಒಂದೇ. ಅದು ಗೆಟ್ ಲಾಸ್ಟ್ (ತೊಲಗು)! ಎಂದು ತೈವಾನ್ ಚೀನಾಗೆ ಕಟು ಸಂದೇಶ ರವಾನಿಸಿದೆ.

