Suresh Raina

ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿ ಕೊಲೆ: ಮೂವರ ಬಂಧನ
ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿಯ ಕೊಲೆ ಪ್ರಕರಣ ಬೇಧಿಸಿರುವ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.. ಮೂವರು ದರೋಡೆಕೋರರು, ಅಂತರರಾಜ್ಯ ಗ್ಯಾಂಗ್‌ನ ಸದಸ್ಯರೆಂದು ತಿಳಿದುಬಂದಿದ್ದು ಇತರೆ 11 ಮಂದಿ ಆರೋಪಿಗಳನ್ನು ಇನ್ನೂ ಬಂಧಿಸಬೇಕಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.

ರೈನಾ, ಭಜ್ಜಿ ಅನುಪಸ್ಥಿತಿ ಕಾಡಲಿದ್ದು, ಧೋನಿ ಒತ್ತಡವನ್ನು ನಿಭಾಯಿಸಬಲ್ಲರು: ಶ್ರೀಕಾಂತ್
ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಸುರೇಶ್ ರೈನಾ ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದ್ದು, ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಒತ್ತಡವನ್ನು ನಿಭಾಯಿಸಲಿದ್ದು ಮತ್ತು ಚೆನ್ನೈ ಅನ್ನು ಮತ್ತೊಮ್ಮೆ ಪ್ಲೇಆಫ್‌ಗೆ ಕರೆದೊಯ್ಯಲಿದ್ದಾರೆ ಎಂದು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.

ಸಿಎಸ್ ಕೆ ಕ್ಯಾಂಪ್ ನಲ್ಲಿ ನೀವು ಮತ್ತೆ ನನ್ನನ್ನು ನೋಡಬಹುದು: ಸುರೇಶ್ ರೈನಾ
ಸುರೇಶ್ ರೈನಾ ಅವರು ಐಪಿಎಲ್‌ನಿಂದ ಅನಿರೀಕ್ಷಿತವಾಗಿ ಹೊರಬಂದ ಬಗ್ಗೆ ಮೌನ ಮುರಿದಿದ್ದು, ತಮ್ಮ ಕುಟುಂಬಕ್ಕಾಗಿ ಭಾರತಕ್ಕೆ ಮರಳಿರುವುದಾಗಿ ಹೇಳಿದ್ದಾರೆ. ಅಲ್ಲದೆ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ನಲ್ಲಿ ಆಡಲು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ)ಗೆ ಸೇರಲು ದುಬೈಗೆ ತೆರಳುವುದಾಗಿ ತಿಳಿಸಿದ್ದಾರೆ.

ನನ್ನ ಚಿಕ್ಕಪ್ಪನನ್ನು ಹತ್ಯೆ ಮಾಡಲಾಗಿದೆ: ಸುರೇಶ್ ರೈನಾ
ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಐಪಿಎಲ್‌ನಿಂದ ಹಿಂದೆ ಸರಿದ ಕ್ರಿಕೆಟಿಗ ಸುರೇಶ್ ರೈನಾ, ಪಂಜಾಬ್‌ನಲ್ಲಿರುವ ತನ್ನ ಚಿಕ್ಕಮ್ಮನ ಕುಟುಂಬದ ಮೇಲೆ ನಡೆದ ಹಿಂಸಾತ್ಮಕ ದಾಳಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಐಪಿಎಲ್ 2020: ಸುರೇಶ್ ರೈನಾ ಅರ್ಧಕ್ಕೆ ಭಾರತಕ್ಕೆ ವಾಪಸ್ಸಾಗಲು ಅಸಲಿ ಕಾರಣವೇನು ಗೊತ್ತಾ?
ಚೆನ್ನೈ ಸೂಪರ್ ಕಿಂಗ್ಸ್ ಅನುಭವಿ ಆಟಗಾರ ಸುರೇಶ್ ರೈನಾ ಆಗಸ್ಟ್ 29 ರಂದು ಅರ್ಧಕ್ಕೆ ಭಾರತಕ್ಕೆ ವಾಪಸ್ಸಾಗಿದ್ದಾರೆ. ಸುರೇಶ್ ರೈನಾ ವೈಯಕ್ತಿಕ ಕಾರಣದಿಂದ ಅವರು ಭಾರತಕ್ಕೆ ವಾಪಸ್ಸಾಗಿದ್ದಾರೆ ಎಂದು ಫ್ರಾಂಚೈಸಿ ಸಿಇಒ ಕೆ. ಎಸ್. ವಿಶ್ವನಾಥನ್ ಹೇಳಿಕೆ ನೀಡಿದ್ದರು. ಆದರೆ, ಅಸಲಿ ಕಾರಣ ಬೇರೆಯೇ ಇದೆ.

ಪಂಜಾಬ್: ದರೋಡೆಕೋರರಿಂದ ಕ್ರಿಕೆಟರ್ ಸುರೇಶ್ ರೈನಾ ಅಂಕಲ್ ಹತ್ಯೆ
ಪಂಜಾಬಿನ ಪಠಾಣ್ ಕೋಟ್ ಜಿಲ್ಲೆಯ ಹಳ್ಳಿಯೊಂದರಲ್ಲಿ ದರೋಡೆಕೋರರು ದಾಳಿಯಿಂದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರ 58 ವರ್ಷದ ಅಂಕಲ್ ಮೃತಪಟ್ಟಿದ್ದು, ಕುಟುಂಬದ ಇತರ ನಾಲ್ವರು ಸದಸ್ಯರು ತೀವ್ರ ರೀತಿಯಲ್ಲಿ ಗಾಯಗೊಂಡಿರುವ ಘಟನೆ ನಡೆದಿದೆ.

'ನೀವು ಉಳಿಸಿದ ರನ್‌ಗಳ ಸಂಖ್ಯೆಯನ್ನು ಎಣಿಸಲು ದಿನಗಳು ಬೇಕಾಗಬಹುದು': ಸುರೇಶ್ ರೈನಾಗೆ ಪ್ರಧಾನಿ ಮೋದಿ ಪತ್ರ
ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಆಗಸ್ಟ್ 15 ರಂದು ಎಂಎಸ್ ಧೋನಿ ಅವರೊಂದಿಗೆ ನಿವೃತ್ತಿ ಘೋಷಿಸಿ ಒಂದು ಸುವರ್ಣ ಯುಗಕ್ಕೆ ಅಂತ್ಯ ಹಾಡಿದ್ದಾರೆ. . ಇಷ್ಟು ದಿನ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ನಂತರ ಎರಡು ಅತ್ಯಂತ ಯಶಸ್ವಿವ್ಯಕ್ತಿಗಳು ತಮ್ಮ ವೃತ್ತಿಬದುಕಿಗೆ ವಿದಾಯ ಹೇಳಿದ್ದು ಅವರ ಮುಂದಿನ ಜೀವನಕ್ಕೆ ಜಗತ್ತಿನ ನಾನಾ ಕಡೆಯಿಂದ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಸುರೇಶ್ ರೈನಾ ವಿರುದ್ಧ ಶಾಂತ ಸ್ವಭಾವದ ಧೋನಿ ಗರಂ ಆಗಿದ್ದ ಪ್ರಸಂಗವನ್ನು ಸ್ಮರಿಸಿದ ಆರ್‌ಪಿ ಸಿಂಗ್
ಮಹೇಂದ್ರ ಸಿಂಗ್ ಧೋನಿ ಭಾರತದ ನಾಯಕತ್ವ ವಹಿಸಿಕೊಂಡ ಆರಂಭದಿಂದ ಕೊನೆಯವರೆಗೂ ಅತ್ಯಂತ ತಾಳ್ಮೆ ಹಾಗೂ ಶಾಂತ ಸ್ವಭಾವದಿಂದ ತಂಡವನ್ನು ಮುನ್ನಡೆಸಿದ್ದರು. ಈ ಕಾರಣದಿಂದಲೇ ಅವರಿಗೆ ಕ್ಯಾಪ್ಟನ್ ಕೂಲ್ ಎಂಬ ಬಿರುದು ನೀಡಲಾಯಿತು. ಆದರೂ, ಒಮ್ಮೆ ಎಂಎಸ್ ಧೋನಿ ತಾಳ್ಮೆ ಕಳೆದುಕೊಂಡಿದ್ದರು ಎಂದು ಮಾಜಿ ವೇಗಿ ಆರ್‌ಪಿ ಸಿಂಗ್ ಹೇಳಿದ್ದಾರೆ.

ಎಂಎಸ್ ಧೋನಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರೈನಾ!
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಘೋಷಿಸಿದ ಬೆನ್ನಲ್ಲೇ ಸುರೇಶ್ ರೈನಾ ಸಹ ಗುಡ್ ಬೈ ಹೇಳಿದ್ದಾರೆ.

